ನಟ ನನ್ನ ಸೊಂಟ ಮುಟ್ಟಿದ್ದನ್ನ ಎಂಜಾಯ್ ಮಾಡಲಿಲ್ಲ: ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ನಟಿ
ಖ್ಯಾತ ಭೋಜ್‌ಪುರಿ ನಟ ವೇದಿಕೆಯಲ್ಲೇ ನಟಿಯ ಸೊಂಟ ಮುಟ್ಟುವ ಮೂಲಕ ಅನುಚಿತವಾಗಿ ವರ್ತಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ನಟಿ ಮೈಕ್‌ನಲ್ಲಿ ಮಾತನಾಡುತ್ತಿದ್ದಾಗ ವೇದಿಕೆ ಮೇಲೆ ಎಲ್ಲರೆದುರೇ ನಟ ಆಕೆಯ ಸೊಂಟಕ್ಕೆ ಕೈ ಹಾಕಿ ಎರಡೆರಡು ಬಾರಿ ಮುಟ್ಟಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿತ್ತು. ನಟಿ ಕೂಡ ಈ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದರು. ಈ ಘಟನೆಯಿಂದ ನೊಂದ ನಟಿ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದು, ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ.
ಇತ್ತೀಚೆಗೆ ಭೋಜ್‌ಪುರಿ ಸೂಪರ್‌ಸ್ಟಾರ್ ಪವನ್ ಸಿಂಗ್ ಅವರೊಂದಿಗೆ ಸೈಯಾ ಸೇವಾ ಕರೇ ಹಾಡಿನಲ್ಲಿ ಹರಿಯಾಣ ನಟಿ ಮತ್ತು ಗಾಯಕಿ ಅಂಜಲಿ ರಾಘವ್ ಕಾಣಿಸಿಕೊಂಡಿದ್ದರು. ಲಕ್ನೋದಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಟ ಪವನ್ ಸಿಂಗ್ ವೇದಿಕೆಯಲ್ಲಿ ತನ್ನ ಸೊಂಟ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರು. ಈ ವಿಡಿಯೋ ವೈರಲ್ ಆದ ನಂತರ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಅಂಜಲಿ ರಾಘವ್ ಭೋಜ್‌ಪುರಿ ಚಿತ್ರರಂಗ ತೊರೆಯುವ ನಿರ್ಧಾರ ಘೋಷಿಸಿದ್ದಾರೆ.

ಜನಪ್ರಿಯ ಹರಿಯಾಣಿ ಮ್ಯೂಸಿಕ್ ವೀಡಿಯೊಗಳಿಗೆ ಹೆಸರುವಾಸಿಯಾದ ನಟಿ ಅಂಜಲಿ, ಪವನ್ ಸಿಂಗ್ ಅವರ ನಡವಳಿಕೆಯನ್ನು ಖಂಡಿಸುವ ಸರಣಿ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ತೀವ್ರವಾಗಿ ತೊಂದರೆಗೊಳಗಾಗಿದ್ದೆ. ಹೀಗಾಗಿ ಈ ಘಟನೆ ಬಗ್ಗೆ ತಕ್ಷಣ ಪ್ರತಿಕ್ರಿಯಿಸದಿರುವುದಕ್ಕೆ ಸಂದೇಶಗಳು ಬರುತ್ತಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.
'ನಾನು ಅದನ್ನ ಆನಂದಿಸಲಿಲ್ಲ'
'ನಟ ನನ್ನ ಸೊಂಟ ಮುಟ್ಟಿದಾಗ ನಾನು ನಗುತ್ತಿರುವುದನ್ನು ನೋಡಿ ತುಂಬಾ ಜನ ನಾನು ಅದನ್ನು ಆನಂದಿಸಿದೆ ಎಂದೆಲ್ಲ ಟೀಕೆ, ಟ್ರೋಲ್, ಮೀಮ್ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಪವನ್ ಸಿಂಗ್ ನನ್ನ ಸೊಂಟದ ಕಡೆಗೆ ಬೆರಳು ತೋರಿಸಿ, ಅಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದರು. ಅದು ತನ್ನ ಹೊಸ ಸೀರೆ ಅಥವಾ ಬ್ಲೌಸ್‌ನ ಟ್ಯಾಗ್ ಆಗಿರಬಹುದು ಎಂದು ನಂಬಿ ಸ್ಮೈಲ್ ಮಾಡಿದೆ. ಆದರೆ ಕಾರ್ಯಕ್ರಮದ ನಂತರ ಅಲ್ಲಿ ಏನೂ ಇರಲಿಲ್ಲ ಎಂದು ತಿಳಿಯಿತು. ಇದನ್ನು ನೋಡಿ ನಾನು ನಿಜಕ್ಕೂ ಆಘಾತಕ್ಕೆ ಒಳಗಾದೆ' ಎಂದಿದ್ದಾರೆ.
ಈ ಘಟನೆಯನ್ನ ಖಂಡಿಸಿರುವ ನಟಿ ಅಂಜಲಿ, 'ಯಾವುದೇ ಹುಡುಗಿಯನ್ನು ಒಪ್ಪಿಗೆಯಿಲ್ಲದೆ ಮುಟ್ಟಬಾರದು. ಈ ಕೃತ್ಯ "ಸಂಪೂರ್ಣವಾಗಿ ತಪ್ಪು" ಎಂದು ಕರೆದಿದ್ದಾರೆ. ಈ ಘಟನೆ ನಮ್ಮ ಹರಿಯಾಣದಲ್ಲಿ ನಡೆದಿದ್ದರೆ, ಕಥೆ ಬೇರೆಯೇ ಇರುತ್ತಿತ್ತು. ಲಕ್ನೋದಲ್ಲಿ ಪವನ್ ಸಿಂಗ್ ಅವರ ಅಭಿಮಾನಿಗಳೇ ಪ್ರಾಬಲ್ಯ ಹೊಂದಿದ್ದ ಕಾರಣ, ತಕ್ಷಣ ಪ್ರತಿಕ್ರಿಯಿಸುವುದನ್ನು ತಪ್ಪಿಸಿದೆ ಎಂದು ಅಂಜಲಿ ಹೇಳಿದ್ದಾರೆ. ತಾನು ಇನ್ನು ಮುಂದೆ ಭೋಜ್‌ಪುರಿ ಚಿತ್ರರಂಗದಲ್ಲಿ ಕೆಲಸ ಮಾಡುವುದಿಲ್ಲ. ತಾನು ಎಂದಿಗೂ ಭೋಜ್‌ಪುರಿ ಉದ್ಯಮದಲ್ಲಿ ಕೆಲಸ ಮಾಡುವುದಿಲ್ಲ. ಹರಿಯಾಣದಲ್ಲಿರುವ ತನ್ನ ಕುಟುಂಬದೊಂದಿಗೆ ಸಂತೋಷವಾಗಿರುತ್ತೇನೆ' ಎಂದೂ ಘೋಷಿಸಿದ್ದಾರೆ.












Click it and Unblock the Notifications