Actor Yuva Rajkumar: ಡೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಬಂಧನ.!-ಗಾಬರಿಗೊಂಡ ಅಭಿಮಾನಿಗಳು
Actor Yuva Rajkumar: ಡೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಈಗಾಗಲೇ ತಮ್ಮ ಮೊದಲನೇ ಸಿನಿಮಾ ಯುವ ಚಿತ್ರದ ಮೂಲಕ ಸಖತ್ ಸದ್ದು ಮಾಡಿದ್ದರು. ಈ ಮೂಲಕ ಅವರು ಪ್ರೇಕ್ಷಕರ ಮೆಚ್ಚುಗೆಯನ್ನು ಸಹ ಪಡೆದರು. ಆದರೆ, ಇದೀಗ ಯುವ ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದರಲ್ಲಿ ನಟ ಯುವರಾಜ್ ಕುಮಾರ್‌ಗೆ ಸಂಬಂಧಿಸಿದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಇದಕ್ಕೆ ನೆಟ್ಟಿಗರು ಮತ್ತು ಯುವ ಅಭಿಮಾನಿಗಳು ಏನಾಯ್ತು ಅಂತ ಗೊಂದಲಕ್ಕೊಳಗಾಗಿದ್ದಾರೆ. ಆದರೆ ಈ ವೈರಲ್ ವಿಡಿಯೋದಲ್ಲಿರುವುದೇನು ಹಾಗೂ ಅಸಲಿಯೋ, ನಕಲಿಯೋ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಪೊಲೀಸರು ನಡುರಸ್ತೆಯಲ್ಲೇ ಯುವ ರಾಜ್‌ಕುಮಾರ್ ಅವರನ್ನ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈ ವೇಳೆ ಯುವ ಮೈ ರಕ್ತಸಿಕ್ತ ಆಗಿದ್ದನ್ನು ಕಾಣಬಹುದಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ನೋಡಿದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ವೈರಲ್ ವಿಡಿಯೋ ಯುವ-2 ಚಿತ್ರದ ಶೂಟಿಂಗ್ ವೇಳೆ ತೆಗೆದಿರುವುದಾಗಿ ಎನ್ನುವ ಮಾಹಿತಿ ಲಭ್ಯವಾಗಿದೆ. ಪಿಆರ್ಕೆ ಪ್ರೊಡಕ್ಷನ್ನಲ್ಲಿ ಯುವ ಅವರ ಎರಡನೇ ಚಿತ್ರ ಮೂಡಿ ಬರುತ್ತಿದೆ. ಆಯುಧ ಪೂಜೆಯ ವೇಳೆ ಯುವ ರಾಜ್‌ಕುಮಾರ್ ಎರಡನೇ ಸಿನಿಮಾದ ಅಪ್ಡೇಟ್ ಇದಾಗಿದೆ ಎಂದು ಹೇಳಲಾಗುತ್ತಿದೆ.
ಪಿಆರ್ಕೆ ಬ್ಯಾನರ್ ಜೊತೆ ಕೆ.ಆರ್.ಜಿ ಸ್ಟುಡಿಯೋದ ಕಾರ್ತಿಕ್, ಯೋಗಿ ಜಿ.ರಾಜ್ ಹಾಗೂ ನಿರ್ಮಾಪಕ ಜಯಣ್ಣ ಯುವ-2ಗೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಬಿಡುಗಡೆ ಆಗಿರುವ ಈ ಚಿತ್ರದ ಪೋಸ್ಟರ್ ಭಾರೀ ಕುತೂಹಲ ಹುಟ್ಟಿಹಾಕಿದೆ. ಇದೀಗ ಯುವ-2 ಚಿತ್ರದ ಶೂಟಿಂಗ್ ವೇಳೆ ತೆಗೆದ ವಿಡಿಯೋ ಕೂಡ ಅದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿದೆ ಎನ್ನಲಾಗಿದೆ.
ಈ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವ ಅವರ ಮೈ ಎಲ್ಲಾ ರಕ್ತವಾಗಿದ್ದು, ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾರೆ. ಸುತ್ತಲೂ ಜನ ಜಮಾಯಿಸಿದ್ದಾರೆ. ಇದೇ ವಿಡಿಯೋ ಕಂಡು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು ಎಂದು ತಿಳಿದುಬಂದೆ. ಇನ್ನು ಕನ್ನಡ ರಾಜ್ಯೋತ್ಸವದ ದಿನ ಅಂದರೆ ನವೆಂಬರ್ 1ರಂದು ಈ ಚಿತ್ರದ ಟೀಸರ್ ಜೊತೆ ಟೈಟಲ್ ಕೂಡ ರಿವೀಲ್ ಅಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications