ಗೆಳೆಯ ಡಾಲಿ ಮದುವೆಗೆ ಬಂದು ಸ್ಪೆಷಲ್ ಗಿಫ್ಟ್ ಕೊಟ್ಟ ವಸಿಷ್ಠ ಸಿಂಹ, ಏನದು?
ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ವಿವಾದ ಇಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾರಂಗದ ಪ್ರಮುಖ ನಟ ನಟಿಯರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಆಗಮಿಸಿ ಡಾಲಿ ಜೋಡಿಗೆ ಶುಭಹಾರೈಸಿದ್ದಾರೆ. ನಟ ಡಾಲಿ ಅವರ ಆಪ್ತ ಗೆಳೆಯರೂ ಆದ ನಟ ವಸಿಷ್ಠ ಸಿಂಹ ಕೂಡ ಮದುವೆ ಸಮಾರಂಭಕ್ಕೆ ಆಗಮಿಸಿ, ನವದಂಪತಿಗೆ ವಿಶ್ ಮಾಡಿದ್ದಾರೆ. ಈ ವೇಳೆ ಕುಚಿಕು ಗೆಳೆಯನಿಗೆ ಚಿಟ್ಟೆ ವಸಿಷ್ಠ ಅವರು ಸ್ಪೆಷಲ್ ಗಿಫ್ಟ್ ಕೂಡ ನೀಡಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಮದುವೆಗಾಗಿ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿದ್ದು, ನಿನ್ನೆ ಆರತಕ್ಷತೆ ಕೂಡ ಬಹಳ ಅದ್ಧೂರಿಯಾಗಿ ನಡೆಯಿತು. ಇಂದು ಮದುವೆ ಸಮಾರಂಭ ಇದ್ದ ಕಾರಣ ಇಡೀ ಸ್ಯಾಂಡಲ್‌ವುಡ್ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಮದುವೆ ಕೆಂಪು ವಸ್ತ್ರದಲ್ಲಿ ಆಗಮಿಸಿದ ನಟ ವಸಿಷ್ಠ ಸಿಂಹ ಅವರು ಮೊದಲಿಗೆ ಡಾಲಿ ದಂಪತಿಗೆ ಶುಭಕೋರಿದ್ದಾರೆ. ಬಳಿಕ ಸರ್‌ಪ್ರೈಸ್ ಆಗಿ ಒಂದು ಗಿಫ್ಟ್ ಕೂಡ ಕೊಟ್ಟಿದ್ದಾರೆ.

ಪ್ರಾಣ ಸ್ನೇಹಿತನ ಮದುವೆ ಆದ ಕಾರಣ ವಸಿಷ್ಠ ಸಿಂಹ ಕೂಡ ಫುಲ್ ಖುಷ್ ಆಗಿದ್ದರು. ದಾಂಪತ್ಯಕ್ಕೆ ಕಾಲಿಟ್ಟ ಡಾಲಿ-ಧನ್ಯತಾ ಅವರಿಗೆ ಪ್ರೀತಿಯಿಂದ ಶುಭಕೋರಿದ ವಸಿಷ್ಠ, ಸ್ಪೆಷಲ್ ಗೋಲ್ಡ್ ಚೈನ್ ಅನ್ನು ಡಾಲಿ ಕತ್ತಿಗೆ ತೊಡಿಸಿದರು. ಬಳಿಕ ಒಂದು ಪ್ರೀತಿಯ ಮುತ್ತು ನೀಡಿ ವಿಶ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಕಂಡ ನಟ ಶಿವರಾಜ್‌ಕುಮಾರ್ ಅವರ "ಟಗರು" ಸಿನಿಮಾದಲ್ಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಧನಂಜಯ್ ಪಾತ್ರದ ಹೆಸರು ಡಾಲಿ ಹಾಗೂ ವಸಿಷ್ಠ ಪಾತ್ರದ ಹೆಸರು ಚಿಟ್ಟೆ ಎಂದಿತ್ತು. ಈ ಸಿನಿಮಾದಲ್ಲಿ ಇಬ್ಬರೂ ಪ್ರಾಣ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಫ್ಯಾನ್ಸ್ ಕೂಡ ಇವರನ್ನು ಡಾಲಿ-ಚೆಟ್ಟೆ ಎಂದೇ ಕರೆಯಲು ಶುರು ಮಾಡಿದರು. ಅಂದಿನಿಂದಲೂ ಧನು-ವಸಿಷ್ಠ ಅವರು ಸ್ಯಾಂಡಲ್‌ವುಡ್‌ನ ಕುಚಿಕುಗಳು ಎಂದು ಕರೆಸಿಕೊಂಡಿದ್ದಾರೆ.

ಟಗರು ಸಿನಿಮಾದ ಡಾಲಿ ಪಾತ್ರ ಧನಂಜಯ್ ಅವರ ಸಿನಿ ಜರ್ನಿಗೂ ತಿರುವು ಕೊಟ್ಟಿದೆ. ಇಂದು ಧನಂಜಯ್ ಬದಲಿಗೆ ಡಾಲಿ ಧನಂಜಯ್ ಎಂದೇ ಅವರನ್ನು ಜನ ಕರೆಯುತ್ತಿದ್ದಾರೆ. ವಸಿಷ್ಠ ಸಿಂಹ ಕೂಡ ಚಿಟ್ಟೆ ಎಂಬ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇವರನ್ನು ಡಾಲಿ-ಚಿಟ್ಟೆ ಜೋಡಿ ಎಂದೇ ಕರೆಯುತ್ತಾರೆ ಫ್ಯಾನ್ಸ್.
ಇಬ್ಬರೂ ಸ್ಯಾಂಡಲ್‌ವುಡ್‌ನ ಬ್ಯಾಚುಲರ್‌ಗಳ ಪಟ್ಟ ಅಲಂಕರಿಸಿದ್ದರು. ಆದರೆ ವಸಿಷ್ಠ ಸಿಂಹ ಅವರು ನಟಿ ಹರಿಪ್ರಿಯಾ ಅವರನ್ನು ಮದುವೆಯಾಗುವ ಮೂಲಕ ಬ್ಯಾಚುಲರ್ ಲೈಫಿಗೆ ಗುಡ್‌ಬೈ ಹೇಳಿದ್ರು. ಇವರ ಮದುವೆಗೆ ಡಾಲಿ ಕೂಡ ಬಂದು ವಿಶೇಷವಾಗಿ ಶುಭಹಾರೈಸಿದ್ದರು. ಈಗ ವಸಿಷ್ಠ ಸಿಂಹ ಕೂಡ ಡಾಲಿ ಮದುವೆಗೆ ಆಗಮಿಸಿ, ಗೆಳೆಯನ ಮದುವೆ ಕಣ್ತುಂಬಿಕೊಂಡಿದ್ದಾರೆ. ಬ್ಯಾಚುಲರ್ ಆಗಿದ್ದ ಡಾಲಿಯನ್ನು ದಾಂಪತ್ಯ ಜೀವನಕ್ಕೆ ಬರಮಾಡಿಕೊಂಡಿದ್ದಾರೆ.












Click it and Unblock the Notifications