Darshan Thoogudeepa: ಜಾಮೀನು ಸಿಕ್ಕ ಬೆನ್ನಲ್ಲೇ 'ದರ್ಶನ್‌ನ ಮೀಟ್ ಮಾಡ್ತೀನಿ' ಎಂದ ಖ್ಯಾತ ನಟ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ನಿನ್ನೆ ಜಾಮೀನು ಪ್ರಕ್ರಿಯೆ ಮುಗಿಸಿ ಅವರು ಮತ್ತೆ ಚಿಕಿತ್ಸೆ ಕಾರಣಕ್ಕೆ ಆಸ್ಪತ್ರೆಗೆ ಮರಳಿದ್ದಾರೆ. ಈ ಹಿನ್ನೆಲೆ ದರ್ಶನ್ ಅವರನ್ನು ಭೇಟಿಯಾಗಲು ಹಲವರು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕೂಡ ದರ್ಶನ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಇಂದು ರೋರಿಂಗ್ ಸ್ಟಾರ್ ನಟ ಶ್ರೀಮುರುಳಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶ್ರೀಮುರುಳಿ ಅವರು ದರ್ಶನ್ ಅವರನ್ನು ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದವರು ದರ್ಶನ್ ಅವರನ್ನು ಭೇಟಿಯಾಗುತ್ತೀರಾ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶ್ರೀಮುರುಳಿ ಕಂಡಿತವಾಗಿಯೂ ದರ್ಶನ್ ಅವರನ್ನ ಭೇಟಿಯಾಗುತ್ತೇನೆ ಎಂದಿದ್ದಾರೆ.

ಸದ್ಯ ದರ್ಶನ್ ಅವರು ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಅವರ ಆರೋಗ್ಯದ ಕಡೆಗೆ ಗಮನ ಕೊಟ್ಟಿದ್ದಾರೆ. ಇಬ್ಬರಿಗೂ ಸಮಯ ಸಿಕ್ಕಾಗ ಭೇಟಿಯಾಗುತ್ತೇವೆ. ಅವರು ಸದ್ಯ ಆರೋಗ್ಯವಾಗಿದ್ದಾರೆ, ಎಲ್ಲರೂ ಚೆನ್ನಾಗಿರಲಿ ಎಂದು ಶ್ರೀಮುರುಳಿ ಹೇಳಿದ್ದಾರೆ. ಇನ್ನು ದರ್ಶನ್ ಅವರ ಪ್ರಕರಣ ಕುರಿತಾಗಿಯೂ ಮುರುಳಿ ಮಾತನಾಡಿದ್ದಾರೆ. ಕೆಟ್ಟದ್ದು ಬರೋದೆ ಒಳ್ಳೆಯ ದಿನಗಳನ್ನು ತೋರಿಸುವುದಕ್ಕೆ. ಬಹುಶಃ ಏನೇ ನೋವಾಗಿದ್ರೂ ಇಂದು ಎಲ್ಲರಿಗೂ ನೆಮ್ಮದಿ, ಸಮಾಧಾನ ಸಿಕ್ಕಿದೆ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ. ಕಾಲಾಯ ತಸ್ಮೈ ನಮಃ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ನಟ ದರ್ಶನ್ ಅವರು ಮೊದಲಿನಿಂದಲೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಹಲವು ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮುರುಳಿ ಅವರ ಸಿನಿಮಾಗಳಿಗೆ ದರ್ಶನ್ ಅವರು ಸಾಥ್ ನೀಡಿದ್ದರು. ಶ್ರೀಮುರುಳಿ ನಟಿಸಿದ್ದ ಭರಾಟೆ ಸಿನಿಮಾದ ಟೀಸರ್ ಅನ್ನು ಕೂಡ ಈ ಹಿಂದೆ ನಟ ದರ್ಶನ್ ಅವರೇ ರಿಲೀಸ್ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಉತ್ತಮ ಸ್ನೇಹ ಮೊದಲಿನಿಂದಲೂ ಇದೆ. ಶೀಘ್ರದಲ್ಲೇ ಶ್ರೀಮುರುಳಿ ಅವರನ್ನು ದರ್ಶನ್ ಅವರನ್ನು ಭೇಟಿಯಾಗಲಿದ್ದಾರೆ.
ನಿನ್ನೆ ಜಾಮೀನು ಪ್ರಕ್ರಿಯೆ ಪೂರ್ಣ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಹೈಕೋರ್ಟ್ ನಟ ದರ್ಶನ್ ಅವರಿಗೆ ಜಾಮೀನು ನೀಡಿದೆ. ಈ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ನಿನ್ನೆ 57ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾಗಿ, ಜಾಮೀನು ಪ್ರಕ್ರಿಯೆ ಮುಗಿಸಿದರು. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಲ್ಲಿಂದ ನೇರವಾಗಿ ಕೋರ್ಟ್‌ಗೆ ಹಾಜರಾಗಿ ಜಾಮೀನಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದರು.

ಇನ್ನು ನಟ ದರ್ಶನ್ ಅವರ ಪರವಾಗಿ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಜಾಮೀನಿಗೆ ಶ್ಯೂರಿಟಿ ನೀಡಿದ್ದಾರೆ. ದರ್ಶನ್ ಅವರು 1 ಲಕ್ಷ ರೂಪಾಯಿ ಮೌಲ್ಯದ ಬಾಂಡ್‌ಗೂ ಸೈನ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ವಶಪಡಿಸಿಕೊಂಡಿದ್ದ ದರ್ಶನ್ ಅವರ ಪಾಸ್‌ಪೋರ್ಟ್ ವಾಪಸ್ ಕೊಡಲು ಕೋರ್ಟ್ ಹೇಳಿದೆ. ಒಟ್ಟಾರೆ ನಿನ್ನೆ ಕೋರ್ಟ್ ಪ್ರಕ್ರಿಯೆ ಮುಗಿಸಿ, ದರ್ಶನ್ ಅವರು ಸೀದಾ ಬಿಜಿಎಸ್ ಆಸ್ಪತ್ರೆಗೆ ವಾಪಸ್ ಆಗಿದ್ದಾರೆ.












Click it and Unblock the Notifications