ಶಿವಣ್ಣ ಭಾವುಕ: ಅಪ್ಪು ಸಿನಿಮಾ ತುಂಬಾ ನೋಡ್ತಿದ್ರಂತೆ ನಾಗಮ್ಮ
ವರ ನಟ ಡಾ. ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ನಿಧನ ಹಿನ್ನಲೆ ಶಿವರಾಜ್ ಕುಮಾರ್ ಅವರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾಗಮ್ಮ ಹಾಗೂ ಅಪ್ಪಾಜಿ ಅವರ ಸಂಬಂಧವನ್ನ ನೆನೆದು ಶಿವರಾಜ್ ಕುಮಾರ್ ಅವರು ಕಣ್ಣೀರು ಹಾಕಿದ್ದಾರೆ. ವರ ನಟ ಡಾ. ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ನಿಧನ ಹಿನ್ನಲೆ ಸೋದರತ್ತೆ ನಾಗಮ್ಮ ಅವರೊಡನೆ ಬಾಲ್ಯದ ನೆನಪುಗಳನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೆಲಕು ಹಾಕಿದ್ದಾರೆ.
ಈ ಬಗ್ಗೆ ನಟ ಡಾ. ಶಿವರಾಜಕುಮಾರ್ ಅವರು ಮಾತನಾಡಿ, ನನ್ನನ್ನು ಅಪ್ಪಾಜಿ ತರಹ ಕಾಣ್ತೀಯಾ ಕಂದ ಅಂತಾ ಹೇಳ್ತಿದ್ದರು. ನನ್ನದು, ಅಪ್ಪು ಪಿಕ್ಚರ್ ತುಂಬಾ ಸಿನಿಮಾ ನೋಡುತ್ತಿದ್ದರು. ನನಗೆ ತುಂಬಾ ನೋವಾಗುತ್ತೆ. ಗಾಜನೂರಿಗೆ ಅತ್ತೆ, ಅವ್ವ ಒಟ್ಟಿಗೆ ಬರೋರು. ನಾಗತ್ತೆ ಯಾವಾಗಲೂ ಅಪ್ಪಾಜಿ ಜೊತೆಗೆ ಇರುತ್ತಿದ್ದರು. ಅಪ್ಪಾಜಿ ಕಂಡ್ರೆ ತುಂಬಾ ಪ್ರೀತಿ ಎಂದು ಶಿವಣ್ಣ ಅವರು ಹೇಳಿದ್ದಾರೆ.

ಇನ್ನೂ ನನಗೆ ಒಬ್ಬರೇ ತಾಯಿಯಲ್ಲ. ಸಿಕ್ಕಾಪಟ್ಟೆ ತಾಯಂದಿರು ಇದ್ದಾರೆ. ಅದರಲ್ಲಿ ನಾಗಮ್ಮ ಕೂಡ ಒಬ್ಬರು. ಮದ್ರಾಸ್‌ನಲ್ಲಿದ್ದ ಮನೆಯ ಸಂಪೂರ್ಣ ಜವಾಬ್ದಾರಿ ನಾಗಮ್ಮರಿಗೆ ವಹಿಸಲಾಗಿತ್ತು. ಆದರೂ ಕೂಡ ನಮ್ಮ ಬಳಿಯೇ ಕೀ ಕೊಡುತ್ತಿದ್ದರು. ಅತ್ತೆ ನೋಡಲು ಗಾಜನೂರಿಗೆ ಬರಬೇಕು ಅಂದ್ಕೊಡಿದ್ದೆ ಸಾಧ್ಯವಾಗಿರಲಿಲ್ಲ. ನಿನ್ನೆ ಶೂಟಿಂಗ್ ಗಾಗಿ ಗೋವಾಕ್ಕೆ ಹೋಗಿದ್ದೆ. ಹೋದ ತಕ್ಷಣವೇ ಇವರ ನಿಧನ ಸುದ್ದಿ ಗೊತ್ತಾಯಿತು. ವಾಪಸ್ ಬಂದೆ. ಅಪ್ಪಾಜಿ ಸಮಕಾಲೀನರಲ್ಲಿ ಕೊನೆಯ ಕೊಂಡಿ ಇವರು ಎಂದು ಶಿವರಾಜ್ ಕುಮಾರ್ ಅವರು ಭಾವುಕರಾಗಿದ್ದಾರೆ.
ಅಪ್ಪು ನಿಧನ ವಿಚಾರ ಅವರಿಗೆ ಗೊತ್ತಿರಲಿಲ್ಲ. ಇನ್ನೂ ಸ್ವಂತ ಮಗ ಭರತ್ ನಿಧನ ಸುದ್ದಿಯೂ ಗೊತ್ತಿರಲಿಲ್ಲ. ನೆನೆಸಿಕೊಂಡರೆ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ. ನನ್ನ ವೇದ ಪಿಕ್ಚರ್ ನೋಡಿ ನಾಗಮ್ಮ ಅತ್ತೆ ಖುಷಿಪಟ್ಟಿದ್ದರು. ನಮ್ಮೆಲ್ಲರಿಗೂ ನಾಗತ್ತೆ ಅಂದ್ರೆ ವಿಶೇಷ ಪ್ರೀತಿ ಎಂದು ಶಿವಣ್ಣ ಹೇಳಿದ್ದಾರೆ.
ಸ್ಯಾಂಡಲ್ವುಡ್ನ ವರನಟ ಡಾ. ರಾಜ್‌ಕುಮಾರ್ ಅವರ ಸಹೋದರಿ ನಿಧನರಾಗಿದ್ದಾರೆ. ಡಾ ರಾಜ್ ಕುಮಾರ್ ಸಹೋದರಿ ನಿಧನರಾಗಿದ್ದು, ಅವರು ಗಾಜನೂರಿನ ಮನೆಯಲ್ಲೇ ಆಗಸ್ಟ್ 1ರಂದು ಮೃತಪಟ್ಟಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ಅವರು ಈಗ ನಿಧನರಾಗಿದ್ದು, ಇಲ್ಲಿಯವರೆಗೂ ಕೂಡ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ಗೊತ್ತಿರಲಿಲ್ಲ. ಅತ್ತೆ ನಾಗಮ್ಮ ಆಗಾಗ "ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು" ಅಂತ ಹೇಳ್ತಾನೇ ಇರುತ್ತಿದ್ದರಂತೆ.
ಇನ್ನೂ ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ನಿಧನರಾಗಿದ್ದು, ದೊಡ್ಡಗಾಜನೂರಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್‌ರಾಜಕುಮಾರ್ ಮತ್ತು ಕುಟುಂಬದವರು ಅಂತಿಮ ದರ್ಶನ ಪಡೆದರು.












Click it and Unblock the Notifications