ದರ್ಶನ್‌ಗಾಗಿ ರಕ್ಷಕ್ ಬುಲೆಟ್ ಹೋಮ-ಹವನ: ನಟನಿಂದ ವಿಶೇಷ ಪ್ರಾರ್ಥನೆ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ಕೆಲವು ತಿಂಗಳು ಕಳೆದ ದರ್ಶನ್‌ಗೆ ತೀವ್ರ ಆರೋಗ್ಯ ಸಮಸ್ಯೆಗೆ ಕಾಡಿದ್ದು, ಅನಾರೋಗ್ಯ ಕಾರಣದ ಮೇಲೆ ಕರ್ನಾಟಕ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಸದ್ಯ ಬೆಂಗಳೂರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರ್ಶನ್ ಜೈಲಿನಲ್ಲಿರುವಾಗ ಅತಿಯಾದ ಬೆನ್ನು ನೋವು ಕಾಡಿದ್ದು, ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಹೀಗಿರುವಾಗ ಮಧ್ಯಂತರ ಜಾಮೀನಿಗೆ ಕೋರ್ಟ್ ನೀಡಿರುವ ದಿನಗಳು ಕಳೆಯುತ್ತಿದ್ದರೂ, ಇನ್ನೂ ಶಸ್ತ್ರಚಿಕಿತ್ಸೆ ಯಾಕೆ ಮಾಡಿಲ್ಲ ಎನ್ನುವ ಪ್ರಶ್ನೆ ಎಲ್ಲರಲಿತ್ತು. ಈ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದ್ದು, ಅಧಿಕ ರಕ್ತದೊತ್ತಡ ಇರುವ ಕಾರಣ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ ಎನ್ನಲಾಗಿದೆ.

ಸದ್ಯ ಬೆಂಗಳೂರು ಬಿಜಿಎಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಲ್ಲದೇ ದರ್ಶನ್ ಆರೋಪ ಮುಕ್ತರಾಗಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಇದೀಗ ದರ್ಶನ್ ಅವರ ವಿಶೇಷ ಅಭಿಮಾನಿಯೊಬ್ಬರು ದರ್ಶನ್‌ಗಾಗಿ ಪೂಜೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ದರ್ಶನ್ ಅವರ ವಿಶೇಷ ಅಭಿಮಾನಿ ಮತ್ಯಾರೂ ಅಲ್ಲ ಅವರ ಸ್ನೇಹಿತ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್. ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿರುವ ರಕ್ಷಕ್ ಬುಲೆಟ್, ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಇದೀಗ ದರ್ಶನ್ ಗುಣಮುಖರಾಗಲಿ ಎಂದು ರಕ್ಷಕ್ ಬುಲೆಟ್ ಹೋಮ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ರಕ್ಷಕ್ ಬುಲೆಟ್ ಹೋಮಕ್ಕೆ ಕುಳಿತಿದ್ದು, ಇವರ ಜೊತೆ ಯಲಹಂಕ ಗುರು ಎನ್ನುವವರು ಕೂಡ ಇದ್ದಾರೆ. ನಟ ದರ್ಶನ್ ಬೇಗ ಗುಣಮುಖರಾಗಲಿ ಹಾಗೂ ಆರೋಪ ಮುಕ್ತರಾಗಲಿ ಎಂದು ನಟ ರಕ್ಷಕ್ ಬುಲೆಟ್ ಈ ಹೋಮ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಹೊಸ ಚಿತ್ರದಲ್ಲಿ ನಟಿಸುತ್ತಿರುವ ರಕ್ಷಕ್ ಬುಲೆಟ್ ಇತ್ತೀಚಿಗೆ ಕಿರುತೆರೆ ಶೋಗಳಲ್ಲಿ ಕೂಡ ಭಾಗಿಯಾಗಿದ್ದರು.












Click it and Unblock the Notifications