Actor Darshan: ನಟ ದರ್ಶನ್‌ಗೆ ಹೈಕೋರ್ಟ್ ಮತ್ತೆ ಶಾಕ್
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕತಣದ ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದದ ಹೈಕೋರ್ಟ್ ಮತ್ತೆ ವಿಚಾರಣೆಯನ್ನು ಸೋಮವಾರ (ಡಿಸೆಂಬರ್ 9) 2:30ಕ್ಕೆ ಮುದೂಡಿಕೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ನಟ ದರ್ಶನ್‌ಗೆ ಮತ್ತೆ ಶಾಕ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮತ್ತು ಗ್ಯಾಂಗ್‌ನ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ದರ್ಶನ್, ಪವಿತ್ರಾ ಗೌಡ ಹಾಗೂ ದರ್ಶನ್ ಅವರ ಕಾರು ಚಾಲಕನ ಪರವಾಗಿ ವಕೀಲರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಇಂದು ತನಿಖಾಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಡಿಸೆಂಬರ್ 9 ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.

ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಸೇರಿದಂತೆ ಇನ್ನಿತರೆ ಆರೋಪಿಗಳ ಪರ ವಕೀಲ ಸಿ.ವಿ. ನಾಗೇಶ್ ಅವರು ಬಲವಾಗಿ ವಾದ ಮಂಡನೆ ಮಾಡಿದರು. ಈ ವೇಳೆ ಪ್ರಕರಣದ ಸರ್ಕಾರದ ಪರ ವಕೀಲರಾದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಮೊದಲು ಪವಿತ್ರಾ ಗೌಡ ಅವರ ವಕೀಲರು ಮಂಡಿಸಿದ ವಾದಗಳಿಗೆ ತಿರುಗೇಟು ಕೊಡುವ ಕೆಲಸ ಮಾಡಿದರು.
ಪವಿತ್ರಾ ಗೌಡ ಅವರದ್ದು, ಅಪಹರಣದಲ್ಲಾಗಲಿ, ಕೊಲೆಯಲ್ಲಾಗಲಿ ಪಾತ್ರ ಇಲ್ಲ ಎಂದು ಪವಿತ್ರಾ ಪರ ವಕೀಲ ಸೆಬಾಸ್ಟಿಯನ್ ವಾದ ಮಾಡಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದಾಗ ಅದು ಇಷ್ಟವಾಗದಿದ್ದರೆ ಆತನನ್ನು ಕೂಡಲೇ ಬ್ಲಾಕ್ ಮಾಡಬಹುದಿತ್ತು.
ಅಲ್ಲದೆ ಆತನ ಏಪ್ರಿಲ್ ತಿಂಗಳಿನಿಂದಲೂ ಮೆಸೇಜ್ ಮಾಡುತ್ತಿದ್ದಾನೆ ಅಂದರೆ ಆಗಿನಿಂದಲೂ ಯಾಕೆ ಬ್ಲಾಕ್ ಮಾಡಲಿಲ್ಲ. ಬದಲಿಗೆ ನನ್ನ ನಂಬರ್ ಎಂದು ಪವಿತ್ರಾಗೌಡ ಮೆಸೇಜ್ ಮಾಡಿದ್ದಾರೆ. ಬಳಿಕ ನಂಬರ್ ಅನ್ನು ಆರೋಪಿ 3 ಪವನ್ಗೆ ನೀಡಿ ಸಂಭಾಷಣೆ ನಡೆಸುವಂತೆ ಹೇಳಿದ್ದಾರೆಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಪವಿತ್ರಾ ಕೈವಾಡವಿದೆ ಎಂದು ವಾದ ಮಂಡಿಸಿದರು.
ದರ್ಶನ್ ಬೆನ್ನು ನೋವಿನ ಬಗ್ಗೆ ಪ್ರಶ್ನಿಸಿದ ಪ್ರಸನ್ನ ಕುಮಾರ್ ಅವರು, ದರ್ಶನ್ ಪರ ವಕೀಲರು ಕೋರ್ಟ್‌ಗೆ ಸುಳ್ಳು ಹೇಳಿದ್ದಾರೆ. ನ್ಯಾಯಾಲಯದ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ಆಗ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದರು.
ಪೊಲೀಸರು ತುಂಬಾ ತಡವಾಗಿ ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ಗೊಂದಲಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. 161 ಹೇಳಿಕೆಗೂ, 164 ಹೇಳಿಕೆಗೂ ವ್ಯತ್ಯಾಸಗಳಿವೆ. 161 ಹೇಳಿಕೆ ಪಡೆದಾಗ ಪ್ರಕರಣದ ಡೈರಿಯಲ್ಲಿ ನಮೂದಿಸಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿಗಳು ಪಾಲಿಸಿಲ್ಲ. ಮೊದಲ ರಿಮ್ಯಾಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ.
ಜೂನ್ 22ರ ರಿಮ್ಯಾಂಡ್ ಅರ್ಜಿಯಲ್ಲಿ ಮಾತ್ರ ಉಲ್ಲೇಖವಿದೆ. ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.












Click it and Unblock the Notifications