Darshan Thoogudeepa: ಅಕ್ಟೋಬರ್‌ 8ಕ್ಕೆ ಕೊಲೆ ಆರೋಪಿ ನಟ ದರ್ಶನ್‌ಗೆ ಜಾಮೀನು?

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್‌ ಜೈಲು ಸೇರಿದೆ. ಈಗಾಗಲೇ ಕೋರ್ಟ್‌ ನಟ ದರ್ಶನ್‌ & ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಹಲವು ಬಾರಿ ಮುಂದೂಡಿದೆ. ಮತ್ತೆ ನಾಳೆ (ಅಕ್ಟೋಬರ್ 08) ಇವರಿಬ್ಬರ ಅರ್ಜಿ ವಿಚಾರಣೆಯಿದೆ. ಹಾಗಾದರೆ ಯಾರಿಗೆ ಮೊದಲು ಜಾಮೀನು ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನುವುದೇ ಇದೀಗ ಪ್ರಶ್ನೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೇಲು ಸೇರಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ಗಾಗಿ ವಿಶೇಷ ಪೂಜೆ, ವ್ರತಗಳನ್ನು ಮಾಡುತ್ತಾ ಬಂದಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ವಿಶೇಷ ಹರಕೆ ಕಟ್ಟಿಕೊಂಡು ನಮ್ಮ ಬಾಸ್ ಬೇಗ ಬಿಡುಗಡೆಯಾಗಲಿದೆ ಅಂತಾ ಬೇಡಿಕೊಳ್ಳುತ್ತಿದ್ದಾರೆ.

Actor Darshan s bail application hearing on October 8

ಜಾಮೀನು ಕೋರಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿತ್ತು. ಹೀಗೆ ದರ್ಶನ್‌ ಜಾಮಿನು ಅರ್ಜಿ ವಿಚಾರಣೆ ಹಲವು ಕಾರಣಗಳಿಂದ ಮುಂದೂಡಿಕೆಯಾಗಿದೆ.

ಅಕ್ಟೋಬರ್ 4ರಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ಅವರು ಚಾರ್ಜ್ ಶೀಟ್‌​ನಲ್ಲಿ ಉಲ್ಲೇಖಿಸಿರುವ ಹಲವಾರು ಅಂಶಗಳನ್ನು ಕೋರ್ಟ್‌ ಮುಂದಿಟ್ಟಿದ್ದಾರೆ. ಈ ವೇಳೆ ತನಿಖೆಯಲ್ಲಿ ಪೊಲೀಸರು ಮಾಡಿದ ತಪ್ಪುಗಳನ್ನು ಪ್ರಶ್ನೆ ಮಾಡುವ ಮೂಲಕ ಪ್ರಬಲವಾಗಿ ವಾದ ಮಂಡನೆ ಮಾಡಿದ್ದರು.

ಈ ತನಿಖೆಯಲ್ಲಿ ತುಂಬಾ ಲೋಪಗಳಿವೆ. ತನಿಖಾಧಿಕಾರಿಗಳು ಹಲವು ಸಾಕ್ಷ್ಯಗಳನ್ನು ತಾವೇ ಸೃಷ್ಟಿ ಮಾಡಿದ್ದಾರೆ ಅಂತಲೂ ಆರೋಪವನ್ನು ಮಾಡಿದ್ದರು. ಹೀಗೆ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಸುದೀರ್ಘ ವಾದ ಮಂಡನೆ ಮಾಡಿದ್ದರು. ಈ ವಾದವನ್ನು ಆಲಿಸಿದ ಕೋರ್ಟ್‌ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿಕೆ ಮಾಡಿದ್ದು, ಇನ್ನು ನಾಳೆ ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ.

ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆ ಅಂದರೆ ಅಕ್ಟೋಬರ್‌ 8ರಂದು ನಡೆಯಲಿದ್ದು, ನಟ ದರ್ಶನ್‌ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ. ಇನ್ನು ನಟ ದರ್ಶನ್‌ ನಾಳೆಯಾದರೂ ಜಾಮೀನು ಸಿಗಬಹುದಾ ಎನ್ನುವ ಭರವಸೆಯಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+