Darshan Thoogudeepa: ಜೈಲ್ಲಾಧಿಕಾರಿಗಳ ಕೈಸೇರಿದ ದರ್ಶನ್ ಹೆಲ್ತ್ ರಿಪೋರ್ಟ್
ಬಳ್ಳಾರಿ, ಅಕ್ಟೋಬರ್ 25: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನವರು ಬಳ್ಳಾರಿ ಜೈಲಿನಲ್ಲಿ ವಿಲವಿಲ ಎನ್ನುವಂತಾಗಿದೆ. ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೇಲೆ ನಟ ದರ್ಶನ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಮಂಗಳವಾರ ಬಳ್ಳಾರಿ ಆಸ್ಪತ್ರೆಗೆ ದರ್ಶನ್ ದಾಖಲಾಗಿದ್ದರು.
ತೀವ್ರ ಬೆನ್ನು ನೋವಿನ ಸಮಸ್ಯೆ ಕಂಡು ಬರುತ್ತಿರುವ ಹಿನ್ನೆಲೆ ಬಳ್ಳಾರಿ ಆಸ್ಪತ್ರೆಗೆ ದರ್ಶನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿಸಿದರು. ಇದೀಗ ದರ್ಶನ್ ಎಂಆರ್‌ಐ ಸ್ಕ್ಯಾನ್ ರಿಪೋರ್ಟ್ ಜೈಲಾಧಿಕಾರಿಗಳ ಕೈತಲುಪಿದ್ದು, ದರ್ಶನ್ ಅಭಿಮಾನಿಗಳು ಆತಂಕದಲ್ಲಿದ್ದಾರೆ.

ನಟ ದರ್ಶನ್ ಅವರ ಬೆನ್ನಿನ ಹಿಂಭಾಗದಲ್ಲಿ L5 ಹಾಗೂ S1ನಲ್ಲಿ ನೋವು ಕಂಡುಬಂದಿದೆ. ವೈದರ ವರದಿಯನ್ನು ಆಧರಿಸಿ ದರ್ಶನ್ ಕುಟುಂಬಸ್ಥರ ಜೊತೆ ಜೈಲಾಧಿಕಾರಿಗಳು ಚರ್ಚಿಸಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಇಂದು ಪತ್ನಿ ವಿಜಯಲಕ್ಷ್ಮಿ, ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದರ್ಶನ್ ಗೆ ಜೈಲಿನಲ್ಲಿ ಮೊಬೈಲ್ ನೀಡಿದ್ದು ಯಾರು ಗೊತ್ತೆ?
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯವನ್ನ ನೀಡಲಾಗಿದ್ದು, ಕೊಲೆ ಆರೋಪಿ ನಟ ದರ್ಶನ್‌ಗೆ ಮೊಬೈಲ್ ಹಾಗೂ ಸಿಮ್ ನೀಡಿದವರನ್ನು ಪೊಲೀಸರು ಇದೀಗ ಪತ್ತೆ ಮಾಡಿದ್ದಾರೆ. ಪೊಲೀಸ್ ಬಿಗಿಭದ್ರತೆಯ ನಡುವೆ ದರ್ಶನ್ ಗೆ ರಹಸ್ಯವಾಗಿ ಸಿಮ್ ಕಾರ್ಡ್ ನೀಡಿದರುವ ಯಾರು ಎಂಬುದನ್ನ ಪೊಲೀಸರು ಬಯಲಿಗೆಳೆದಿದ್ದಾರೆ.
ಜೈಲಲ್ಲಿ ದರ್ಶನ್ ವಿಡಿಯೋ ಕಾಲ್ ಮಾಡಿದ್ದ ಕೇಸ್ನಲ್ಲಿ ದರ್ಶನ್ ಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದರ್ಶನ್ ರೌಡಿಶೀಟರ್ ಧರ್ಮನ ಮೊಬೈಲ್ನಿಂದ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದ. ಈ ಮೊಬೈಲ್ ಧರ್ಮನಿಗೆ ಸೇರಿತ್ತು ಎಂಬುದು ಗೊತ್ತಾಗಿದೆ. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಎಂಬಾತ ಸಿಮ್ ನೀಡಿದ್ದ ಎಂಬುದು ತಿಳಿದು ಬಂದಿದೆ.
ಬಾಣಸವಾಡಿಯಲ್ಲಿ ಒಂದು ಟೂರ್ಸ್ ಅಂಡ್ ಟ್ರಾವಲ್ಸ್ ನಡೆಸುವ ಮಣಿವಣ್ಣನ್, ಕಂಪನಿಯ ಚಾಲಕ ಯಾದವ್ ಹೆಸರಲ್ಲಿ ಸಿಮ್ ಖರೀದಿ ಮಾಡಿದ್ದ ಎನ್ನಲಾಗಿದ್ದು, ಆ ಸಿಮ್ ಕಾರ್ಡ್ ಅನ್ನ ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ದ. ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಅನ್ನೂ ಸಹ ಕಳುಹಿಸಿದ್ದ ಎಂದು ತಿಳಿದು ಬಂದಿದೆ.
ಇನ್ನೂ ರೌಡಿ ಧರ್ಮನಿಗಾಗಿ ಒನ್ ಪ್ಲಸ್ ಮೊಬೈಲ್ ಅನ್ನು ಮೆಜೆಸ್ಟಿಕ್ ಬಳಿಯ ಒಂದು ಮೊಬೈಲ್ ಅಂಗಡಿಯಿಂದ ಸೆಕೆಂಡ್ ಹ್ಯಾಂಡ್ನಲ್ಲಿ ಖರೀದಿ ಮಾಡಿದ್ದ. ಮೊಬೈಲ್ ಖರೀದಿಗೂ ಮುನ್ನ ಮೊಬೈಲ್ ಫೋಟೋ ಕಳುಹಿಸಿ ಯಾವುದು ಬೇಕು ಎಂದು ಎರಡು ಮೊಬೈಲ್ ಫೋಟೋ ಕೇಳಿದ್ದ. ಈ ಸಂಬಂಧ ಅಂಗಡಿ ಮಾಲೀಕನ ಮೊಬೈಲ್ನಿಂದ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.












Click it and Unblock the Notifications