Chikkanna: ನಟಿ ಅದಿತಿ ಪ್ರಭುದೇವ ಆಸ್ತಿಯಲ್ಲಿ ಪಾಲು ಕೇಳಿದ ಚಿಕ್ಕಣ್ಣ: ಯಾಕೆ?

ನಟ ಶರಣ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಛೂ ಮಂತರ್' ಜನವರಿ 10ರಂದು ರಾಜ್ಯಾದಂತ್ಯ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ ಈ ಚಿತ್ರ, ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಪ್ರಚಾರ ಕೂಡ ಆರಂಭವಾಗಿದೆ.

ಚಿತ್ರದಲ್ಲಿ ಮುಖ್ಯವಾಗಿ ನಟ ಶರಣ್ ಜೊತೆಗೆ ಅದಿತಿ ಪ್ರಭುದೇವ ಹಾಗೂ ಚಿಕ್ಕಣ್ಣ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರತಿಯೊಬ್ಬರು ಕೂಡ ಭಾಗಿಯಾಗಿದ್ದು, ಈ ವೇಳೆ ನಟ ಚಿಕ್ಕಣ್ಣ ಛೂ ಮಂತರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Actor Chikkanna Asked For Share In Actress Aditi Prabhudeva s Property

'ಟೀಸರ್‌ ಎಷ್ಟು ಚೆನ್ನಾಗಿದೆಯೋ ಸಿನಿಮಾ ಇದಕ್ಕಿಂತ ಚೆನ್ನಾಗಿದೆ. ಜನವರಿ ೧೦ನೇ ತಾರೀಕು ಸಿನಿಮಾ ಬಿಡುಗಡೆಯಾಗುತ್ತಿದೆ. ಮುಖ್ಯವಾಗಿ ನಾವು ಜನರಿಗೆ ತಿಳಿಸಬೇಕಾಗಿರುವುದೇ ಸಿನಿಮಾ ಬಿಡುಗಡೆ ದಿನಾಂಕ. ಯಾಕೆಂದರೆ ಈಗ ಒಂದು ಸಲ ಫೋನ್‌ ತೆಗೆದರೆ ನೂರು ಕಂಟೆಂಟ್‌ಗಳು ಬರುತ್ತದೆ. ಜನ ಅವರು ಇರುವ ಬ್ಯೂಸಿನಲ್ಲಿ ಯಾರಿಗೂ ಈ ದಿನಾಂಕಗಳ ಬಗ್ಗೆ ನೆನಪಿರುವುದಿಲ್ಲ.

ನನ್ನ ಉಪಾಧ್ಯಕ್ಷ ಸಿನಿಮಾದ ಪ್ರಚಾರವನ್ನು ನಾನು ಚೆನ್ನಾಗಿ ಮಾಡಿದ್ದೇನೆ ಎಂದುಕೊಂಡೆ. ಆದರೆ ನನ್ನ ಒಬ್ಬ ಸ್ನೇಹಿತರು ಸಿನಿಮಾ ಬಿಡುಗಡೆಯಾಗಿ ಐವತ್ತು ದಿನ ಓಡಿ ಥಿಯೇಟರ್‌ಗಳಿಂದ ತೆಗೆದು ಹಾಕಿದ ಮೇಲೆ ಕೇಳಿದರು ಯಾವತ್ತು ನಿನ್ನ ಸಿನಿಮಾ ರಿಲೀಸ್‌ ಹಾಡುಗಳೆಲ್ಲಾ ಚೆನ್ನಾಗಿದೆ ಅಂತಾ ಹೇಳಿ ಬಿಟ್ಟರು. ಹೀಗಾಗಿ ಸಿನಿಮಾ ರಿಲೀಸ್‌ ಡೇಟ್‌ಅನ್ನು ಎಷ್ಟೇ ಪ್ರಚಾರ ಮಾಡಿದರೂ ಸಾಲುವುದಿಲ್ಲ' ಎಂದರು.

'ಜನವರಿ ೧೦ನೇ ತಾರೀಕು ದಯಮಾಡಿ ಸಿನಿಮಾ ನೋಡಿ. ಶರಣ್‌ ಸರ್‌ ಸಿನಿಮಾ ಪಯಣದಲ್ಲೂ ಇದೊಂದು ಬೇರೆ ರೀತಿಯ ಸಿನಿಮಾ, ಈ ಸಿನಿಮಾದಲ್ಲಿ ಎಲ್ಲರ ಜೊತೆ ಕೆಲಸ ಮಾಡಿ ಖುಷಿಯಾಗಿದೆ. ಶರಣ್‌ ಸರ್‌ ಜೊತೆ ಖುಷಿ ದುಃಖ ಎನೂ ಇಲ್ಲ ಒಂದು ರೆಗ್ಯೂಲರ್‌ ಜೋಡಿ ನಮ್ಮದು. ಅದಿತಿ ಮೇಡಂ ಅವರ ಜೊತೆ ಇದು ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಶರಣ್‌ ಸರ್‌, ಅದಿತಿ ಮೇಡಂ ನನ್ನದು ಜಾಸ್ತಿ ಕಾಂಬಿನೇಷನ್‌ ಇದೆ'.

Actor Chikkanna Asked For Share In Actress Aditi Prabhudeva s Property

'ಅದಿತಿ ಅವರು ಆಗ ವೇದಿಕೆ ಮೇಲೆ ನಮ್ಮನ್ನು ಹೊಗಳಿ ನನ್ನ ಮಕ್ಕಳು ಎಂದು ಹೇಳಿದರು. ಹೀಗಾಗಿ ನಾನು ಹೇಳಿದೆ ಸಕಲೇಶಪುರದಲ್ಲಿ ಅವರ ಗಂಡನ ನೂರು ಎಕರೆ ಕಾಫಿ ತೋಟ ಇದೆ. ಮಕ್ಕಳು ಅಂದ ಮೇಲೆ ನಮಗೂ ಆಸ್ತಿಯಲ್ಲಿ ಪಾಲುಕೊಡಲೇಬೇಕು. ಅದಾರೂ ಮಾಡಿಕೊಳ್ಳೋಣ' ಎಂದು ವೇದಿಕೆ ಮೇಲೆ ನಟ ಚಿಕ್ಕಣ್ಣ ನಟಿ ಅದಿತಿ ಪ್ರಭುದೇವ ಅವರ ಕಾಲೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+