Aamir Khan: ಹಿಂದಿಗೆ ರಿಮೇಕ್ ಆಗಲಿದೆ ಸೂಪರ್ ಹಿಟ್ 'ಮಹಾರಾಜ':ವಿಜಯ್ ಸೇತುಪತಿ ಪಾತ್ರದಲ್ಲಿ ಅಮೀರ್ ಖಾನ್!
'ಮಕ್ಕಳ್ ಸೆಲ್ವನ್' ವಿಜಯ್ ಸೇತುಪತಿ ಅವರ 50 ನೇ ಚಿತ್ರ ಮಹಾರಾಜ ತಮಿಳುನಾಡಿನಲ್ಲಿ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ. ವಿಜಯ್ ಸೇತುಪತಿ ವೃತ್ತಿಜೀವನದ ವಿಶೇಷ ಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾ ಈಗ ಒಟಿಟಿಯಲ್ಲಿ ಕಮಾಲ್ ಮಾಡುತ್ತಿದೆ. ಇದೇ ವೇಳೆ ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗಲಿದೆ.
ಸಿನಿಮಾ ಬಿಡುಗಡೆಯಾದಾಗಿನಿಂದ, ಚಲನಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಆಕರ್ಷಿಸಿದೆ. ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದೆ. ತಮಿಳುನಾಡಿನಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಸಿನಿಮಾ ತಮಿಳುನಾಡಿನಾದ್ಯಂತ ಸಿಂಗಲ್ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ.

ನಿಥಿಲನ್ ಸ್ವಾಮಿನಾಥನ್ ನಿರ್ದೇಶಿಸಿದ, ಈ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲದೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ತನ್ನ ಅದ್ಭುತ ಪ್ರದರ್ಶನ ನೀಡಿದೆ. ಒಟಿಟಿ ಬಿಡುಗಡೆಯ ನಂತರ ಚಲನಚಿತ್ರವು ಎಲ್ಲರ ಮೆಚ್ಚಿನ ಸಿನಿಮಾವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರವು ಅಗ್ರಸ್ಥಾನದಲ್ಲಿದೆ.
ದಿ ರೂಟ್, ಥಿಂಕ್ ಸ್ಟುಡಿಯೋಸ್ ಮತ್ತು ಪ್ಯಾಶನ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ನಟರಾಜನ್ ಸುಬ್ರಮಣ್ಯಂ, ಅಭಿರಾಮಿ ಗೋಪಿಕುಮಾರ್, ಸಿಂಗಂಪುಲಿ, ಅರುಲ್ದಾಸ್, ಮುನಿಷ್ಕಾಂತ್, ಸಚನಾ ನಮಿದಾಸ್, ಭಾರತೀಕಂದನ್, ಮಣಿಕಂದನ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅಮೀರ್ ಖಾನ್ ಪ್ರೊಡಕ್ಷನ್ಸ್ ಹೌಸ್ ಪಾಲಾದ 'ಮಹಾರಾಜ'
ಮಹಾರಾಜ ಸಿನಿಮಾ ಎಲ್ಲಾ ಸಿನಿರಂಗಗಳಲ್ಲಿಯೂ ಸುದ್ದಿ ಮಾಡುತ್ತಿದೆ. ಹೀಗಾಗಿ ಅನೇಕರು ಅದರ ರೀಮೇಕ್ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಈಗ, ಈ ಚಿತ್ರವು ಹಿಂದಿ ಬಾಲಿವುಡ್ ರೀಮೇಕ್‌ನೊಂದಿಗೆ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಸಿದ್ಧವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಹಿಂದಿ ರಿಮೇಕ್ ಹಕ್ಕುಗಳನ್ನು ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಪಡೆದುಕೊಂಡಿದೆ. ಈ ಕಾಲಿವುಡ್ ಥ್ರಿಲ್ಲರ್‌ಗೆ ಅಮೀರ್ ತನ್ನ ವಿಶಿಷ್ಟವಾದ ಟ್ವಿಸ್ಟ್ ಅನ್ನು ಸೇರಿಸುತ್ತಾರೆ ಎಂದು ನಂಬಲಾಗಿದೆ. ಹಿಂದಿ ಸಿನಿಮಾ ಬಗ್ಗೆ ವಿವರಗಳು ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅಮೀರ್ ಖಾನ್ ನಿರ್ಮಿಸುವುದು ಮಾತ್ರವಲ್ಲದೆ ವಿಜಯ್ ಸೇತುಪತಿ ಪಾತ್ರವನ್ನು ಸಹ ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ.
ಅಮೀರ್ ಖಾನ್ ಮತ್ತು ವಿಜಯ್ ಸೇತುಪತಿ ಅವರ ಅಭಿಮಾನಿ ಬಹಳ ಖುಷ್ ಆಗಿದ್ದಾರೆ. ಇನ್ನು, ಈ ಹಿಂದೆ ವಿಜಯ್ ಸೇತುಪತಿ ಅವರನ್ನು ತಮ್ಮ ಲಾಲ್ ಸಿಂಗ್ ಚಡ್ಡಾ ಸಿನಿಮಾಗಾಗಿ ಅಮೀರ್ ಖಾನ್ ಸಂಪರ್ಕಿಸಿದ್ದರು. ಆದರೆ ದಿನಾಂಕದ ಸಮಸ್ಯೆಗಳಿಂದಾಗಿ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಭಾಗವಾಗಲು ಸಾಧ್ಯವಾಗಲಿಲ್ಲ. ಇದಾದ ನಂತರ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ವಿಲನ್ ಆಗಿ ದೊಡ್ಡ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಕೊಟ್ಟರು.












Click it and Unblock the Notifications