ಬೆಂಗಳೂರಿನ ಗೌರಿ ಜೊತೆ ಮದುವೆ ಆಗೋಯ್ತು: ಶಾಕ್‌ ಕೊಟ್ಟ ನಟ ಅಮೀರ್‌ ಖಾನ್

ಬಾಲಿವುಡ್‌ ಸ್ಟಾರ್‌ ನಟ ಅಮೀರ್‌ ಖಾನ್‌ (Aamir Khan) ಅವರು ದಿಢೀರ್‌ ಶಾಕ್‌ ಕೊಟ್ಟಿದ್ದಾರೆ. ಬೆಂಗಳೂರು ಮೂಲಕ ಚೆಲುವೆ ಗೌರಿ ಸ್ಪ್ರಾಟ್ (Gauri Spratt) ಅವರನ್ನು ಅಮೀರ್‌ ಖಾನ್‌ ಮೂರನೇ ಮದುವೆಯಾಗುತ್ತಾರೆ ಎಂಬ ಗಾಸಿಪ್‌ ಎಲ್ಲೆಡೆ ಜೋರಾಗಿ ಕೇಳಿಬಂದಿತ್ತು. ಮೊದಲಿಗೆ ಈ ಬಗ್ಗೆ ಏನೂ ಪ್ರತಿಕ್ರಿಯೆ ಕೊಡದ ನಟ, ಬಳಿಕ ಗೌರಿ ಸ್ಪ್ರಾಟ್ ಕೈ ಹಿಡಿದು ಸಾರ್ವಜನಿಕವಾಗಿ ಹಾಗೂ ವಿವಿಧ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವಂದತಿಯನ್ನು ಖಚಿತಪಡಿಸಿದ್ದರು. ಆದರೆ ಇವರ ಮದುವೆ ಯಾವಾಗ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಆದರೆ ಆಗಲೇ ನನಗೆ ಗೌರಿ ಜೊತೆ ಮದುವೆ ಆಗಿ ಹೋಗಿದೆ ಎನ್ನುವ ಮೂಲಕ ಅಮೀರ್‌ ಖಾನ್‌ ಶಾಕ್‌ ಕೊಟ್ಟಿದ್ದಾರೆ.‌

ಅಮೀರ್‌ ಖಾನ್‌ ಅವರಿಗೆ ಈಗಾಗಲೇ ಎರಡು ಮದುವೆಯಾಗಿ ಡಿವೋರ್ಸ್‌ ಕೂಡ ಪಡೆದಿದ್ದಾರೆ. ಇದೀಗ ಗೌರಿ ಅವರೊಂದಿಗೆ ಮೂರನೇ ಮದುವೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಬೆಂಗಳೂರು ಮೂಲದವರಾದ ಗೌರಿ, ಮುಂಬೈನಲ್ಲಿ ಸಲೂನ್ ನಡೆಸುತ್ತಾರೆ ಹಾಗೂ ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆಯೊಂದಿಗೂ ಸಂಬಂಧ ಹೊಂದಿದ್ದಾರೆ. ನಟ ಅಮೀರ್ ಖಾನ್ ಅವರು ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದರು.

Aamir Khan Confirms Relationship With Gauri Spraut I Am Already Married In My Heart

ಸಂದರ್ಶನವೊಂದರಲ್ಲಿ ಗೌರಿ ಅವರ ಬಗ್ಗೆ ಮಾತನಾಡಿದ್ದ ನಟ, ಗೌರಿ ಮತ್ತು ನಾನು ಅನಿರೀಕ್ಷಿತವಾಗಿ ಭೇಟಿಯಾದೆವು. ಬಳಿಕ ನಮ್ಮಿಬ್ಬರ ಪರಿಚಯವಾಗಿ ಸ್ನೇಹಿತರಾದೆವು, ನಂತರ ಪ್ರೀತಿ ಹುಟ್ಟಿತು. ನನಗೆ ನನ್ನ ತಾಯಿ, ಮಕ್ಕಳು, ಒಡಹುಟ್ಟಿದವರು ಇದ್ದಾರೆ ಎಂದು ನಾನು ಭಾವಿಸಿದೆ. ನನಗೆ ಸಂಗಾತಿಯ ಅಗತ್ಯವಿಲ್ಲ ಎಂದಿದ್ದರು. ಆದರೂ ಅವರಿಬ್ಬರ ವಿಚಾರವಾಗಿ ಗಾಸಿಪ್‌ ಮುಂದುವರಿದಿತ್ತು.

ಅಮೀರ್‌ ಖಾನ್ ಅವರನ್ನು ಮೊದಲು ಪ್ರೀತಿಸಲು ಕಾರಣವೇನು ಎಂಬುದರ ಬಗ್ಗೆ ಗೌರಿ ಸ್ಪ್ರಾಟ್ ಮಾತನಾಡಿದ್ದರು. "ನನಗೆ ದಯೆ, ಸಜ್ಜನ ಮತ್ತು ಕಾಳಜಿಯುಳ್ಳ ವ್ಯಕ್ತಿ ಬೇಕಾಗಿದ್ದರು ಎಂದಿದ್ದರು. ಆಗ ಅಮೀರ್‌ ಖಾನ್‌ ಕೂಡ ಇಷ್ಟೆಲ್ಲಾ ಆದ ನಂತರ ನೀವು ನನ್ನನ್ನು ಒಪ್ಪಿಕೊಂಡಿದ್ದೀರಾ ಎಂದು ಜೋಕ್‌ ಮಾಡಿದ್ದರು. ಇತ್ತೀಚೆಗೆ ಹಲವು ವೇದಿಕೆಗಳಲ್ಲಿ ಗೌರಿ-ಅಮೀರ್‌ ಕೈಕೈ ಹಿಡಿದು ಓಡಾಡಿದ್ದರು. ಈ ಫೋಟೋಗಳು ಸಖತ್‌ ವೈರಲ್‌ ಆಗಿ ಇನ್ನೇನು ಮದುವೆಯಾಗೋದು ಫಿಕ್ಸ್‌ ಎಂದುಕೊಂಡಿದ್ದರು. ಆದರೆ, ನಮಗೆ ಆಗಲೇ ಮದುವೆ ಆಗೋಗಿದೆ ಎಂದು ಅಮೀರ್‌ ಖಾನ್‌ ಹೇಳಿದ್ದು, ಎಲ್ಲರಿಗೂ ಶಾಕ್‌ ನೀಡಿದೆ.

ಆ ವಿಚಾರ ಮುಂದೆ ಹೇಳ್ತೀನಿ!

ಅಮೀರ್ ಖಾನ್ ಅವರು ಗೌರಿ ಸ್ಪ್ರಾಟ್ ಅವರೊಂದಿಗೆ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು, ಅವರ ಹೃದಯದಲ್ಲಿ ಈಗಾಗಲೇ ಮದುವೆಯಾಗಿರುವ ಭಾವನೆ ಇದೆ ಎಂದು ಹೇಳಿದ್ದಾರೆ. ಮದುವೆಯನ್ನು ಅಧಿಕೃತಗೊಳಿಸುವ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಗೌರಿ ಮತ್ತು ನಾನು ಪರಸ್ಪರ ಗಂಭೀರವಾಗಿರುತ್ತೇವೆ. ನಾವು ಬದ್ಧತೆಯ ಜಾಗದಲ್ಲಿದ್ದೇವೆ. ನಾವು ಒಟ್ಟಿಗೆ ಇದ್ದೇವೆ. ಮದುವೆ ಎಂಬುದು ನನ್ನ ಹೃದಯದಲ್ಲಿರುವ ಒಂದು ವಿಷಯ, ನಾನು ಈಗಾಗಲೇ ಅವಳನ್ನು ಮದುವೆಯಾಗಿದ್ದೇನೆ. ಆದ್ದರಿಂದ, ನಾವು ಅದನ್ನು ಔಪಚಾರಿಕಗೊಳಿಸಬೇಕೆ? ಅಥವಾ ಬೇಡವೇ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+