ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: ಬೇರುಮಟ್ಟದ ಜನಪ್ರತಿನಿಧಿ. ಬೇಗೂರಿನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮುಂದೆ, ಬೊಮ್ಮನಹಳ್ಳಿ ನಗರಸಭೆ ಸದಸ್ಯರಾದರು. ಉದ್ಯಮಿಯೂ ಆಗಿದ್ದು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ರಾಜಾ ಕಾಲುವೆಗಳ ಪುನರುಜ್ಜೀವನ ಕಂಡಿದ್ದು, ಪುಟ್ಟೇನಹಳ್ಳಿಯಲ್ಲಿ 'ನೊರೆ' ಹಾವಳಿ ಮಾಯವಾಗಿದೆ. ಕೆರೆಗಳ ಅಭಿವೃದ್ಧಿಯಾಗಿದೆ. ಒತ್ತುವರಿ ತೆರವುಗೊಳಿಸಿ 500 ಕೋಟಿ ರೂ. ಆಸ್ತಿ ಸರಕಾರದ ವಶಕ್ಕೆ ವಾಪಸ್ ಪಡೆದಿರುವುದು ಮಹತ್ತರಸಾಧನೆ. 2008ರಲ್ಲಿ 15 ಕೋಟಿ ರೂ. ಘೋಷಿತ ಆದಾಯವಿತ್ತು.
* ಸಮಸ್ಯೆಗಳು: ಕ್ಷೇತ್ರಕ್ಕೆ 832 ಕೋಟಿ ರೂ. ಸಿಕ್ಕಿದ್ದರೂ ಸಮರ್ಪಕವಾದ ಅಭಿವೃದ್ಧಿ ತಂದಿಲ್ಲ. ನೀರು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಜನ ದುಡ್ಡು ಕೊಟ್ಟು ಟ್ಯಾಂಕರುಗಳಲ್ಲಿ ನೀರನ್ನು ಖರೀಸುತ್ತಿದ್ದಾರೆ. ಕಸ ವಿಲೇವಾರಿ ಸಮಸ್ಯೆಯಿದೆ ಎಂಬುದು ಸೋತ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಯ ಕೂಗು/ಕೊರಗು.
ಆಧಾರ್ ಕಾರ್ಡ್, ಕುಡಿಯುವ ನೀರು ಮತ್ತು ರೇಶನ್ ಕಾರ್ಡ್ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿದ್ದರೂ ಬೇಗೂರು ರಸ್ತೆ ಕಿರಿದಾಗಿದೆ ಎಂಬ ಅಳಲೂಇದೆ.
* ವಾರ್ಡ್: ಎಚ್ಎಸ್ಆರ್ ಲೇ ಔಟ್, ಬೊಮ್ಮನಹಳ್ಳಿ, ಜರಗನಹಳ್ಳಿ, ಪುಟ್ಟೇನಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಸಿಂಗಸಂದ್ರ, ಅರಕೆರೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications