Get Updates
Get notified of breaking news, exclusive insights, and must-see stories!

ಹೌದಪ್ಪ! ‘ಅಪ್ಪ’ ನಮಗೂ ಗೊತ್ತಿದೆಯಪ್ಪ!

(ಫಾದರ್ಸ್‌ಡೇ ಗೆ 'ಅಪ್ಪ" ಸ್ಪೆಷಲ್‌... ಸಂಚಿಕೆಗೆ ಪ್ರತಿಕ್ರಿಯೆಯಾಗಿ ಬಂದಿರುವ ಪತ್ರಗಳು. ಜನಪ್ರಿಯವಾದ ಒಂದು ತಿಂಡಿಗೆ, ಪ್ರಾದೇಶಿಕವಾಗಿ ಬೇರೆಬೇರೆ ಹೆಸರುಗಳು, ಸ್ವಾದ-ರುಚಿಗಳು ಇವೆಯಾದರೂ 'ಅಪ್ಪ" ಬಹುತೇಕವಾಗಿ ಎಲ್ಲರಿಗೂ ಗೊತ್ತು ಎಂಬುದು ಈ ಪತ್ರಗಳಿಂದ ಶ್ರುತವಾಗಿದೆ. ಪತ್ರಿಸಿದವರೆಲ್ಲರಿಗೂ ಧನ್ಯವಾದ. - ಶ್ರೀವತ್ಸ ಜೋಶಿ.)

ಸರಿ ಸುಮಾರು ಒಂದೇ ಕಾಲದಲ್ಲಿ ಕರಾವಳಿಯಿಂದ ವಲಸೆ ಹೊರಟ ನಮ್ಮ ತಂದೆಯವರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ವಲಸೆ ಬಂದ ಸಿದ್ದಪ್ಪ ಇಬ್ಬರೂ ಆತ್ಮೀಯ ಗೆಳೆಯರು. ಬಯಲು ಸೀಮೆಯಲ್ಲಿ 'ನೀರು ದೋಸೆ" ಮಾಡುವ ಒಂದೇ ಒಂದು ಅಡುಗೆ ಮನೆಯು ನಮ್ಮದಾಗಿದ್ದರೆ, 'ಗುಂಟ ಪೊಂಗನಾಲು" ಮಾಡುವುದರಲ್ಲಿ ಅವರು ಪ್ರಸಿದ್ಧಿ. 'ಕಂಬೈಂಡ್‌ ಸ್ಟಡೀಸ್‌" ನೆಪದಲ್ಲಿ ಬಾಲ್ಯದ ಗೆಳೆಯನ ಮನೆಯಲ್ಲಿ 'ಗುಂಟ ಪೊಂಗನಾಲು" (ಗುಂಟ = ಹಳ್ಳ, ಗುಳಿ) ತಿನ್ನಲು ಹೋಗುತ್ತಿದ್ದೆ. ಓದು-ಬರಹ ಎಲ್ಲವೂ ನಡೆಯಿತೋ ಇಲ್ಲವೋ ತಿಳಿಯದು ಆದರೆ ರುಚಿ ರುಚಿಯಾಗಿ ಬಿಸಿ 'ಅಪ್ಪ" ಸೇವನೆ ನಡೆದದ್ದಂತೂ ನಿಜ.

ಕಳೆದ ವರ್ಷ ನಮ್ಮ ಭಾರತ ಪ್ರವಾಸದಿಂದ ವಾಪಸಾಗುವಾಗ ನನ್ನ ಧರ್ಮಪತ್ನಿ 'ಪನಿಯಾರಂ" ಹೆಂಚನ್ನು ಹೊತ್ತು ತಂದಿದ್ದಾಳೆ. ಐರ್ಲ್ಯಾಂಡಿನ ಚಳಿಗಾಲದ ಸಂಜೆಯಲ್ಲಿ ಒಂದು ಕಪ್‌ ಚಹಾ ಜೊತೆಯಲ್ಲಿ ಬಿಸಿ ಬಿಸಿ ಅಪ್ಪ ತಿನ್ನುವ ಸೊಗಸೇ ಬೇರೆ! ಡಬ್ಲಿನ್‌ ನಗರದಲ್ಲಿರುವ ದೇಸಿ ಗೆಳೆಯರು ನಮ್ಮ ಮನೆಗೆ ಬಂದಾಗಲೆಲ್ಲಾ ಕೆಲವು ಬಗೆಯ ವಿಶೇಷ ತಿಂಡಿಗಳನ್ನು ಮಾಡಿ ಬಡಿಸುವುದರಲ್ಲಿ ನನ್ನವಳಿಗೆ ಆನಂದ. ಇಂತಹ ಒಂದು ಕೂಟದಲ್ಲಿ ಅಪ್ಪವನ್ನು ಮಾಡಿದಾಗ ಅದರ ಬೇಡಿಕೆ ಎಷ್ಟಿತ್ತೆಂದರೆ, ಏಳು ಅಪ್ಪಗಳು ಒಮ್ಮೆ ಹೆಂಚಿನಿಂದ ಏಳುವುದನ್ನೇ ತಡ ಎಲ್ಲವೂ 'ಗುಳುಂ ಗುಳುಂ"!!

- ಪ್ರಕಾಶ್‌ ದೇವೇಂದ್ರ; ಡಬ್ಲಿನ್‌, ಐರ್‌ಲ್ಯಾಂಡ್‌

*

'ಅಪ್ಪ"ದಲ್ಲೂ ಪನ್‌ ಮಾಡಿದ ನಿಮ್ಮ ಅಪ್ಪಟ ಪನ್‌ ಪ್ರತಿಭೆಗೆ ಭೇಷ್‌ ಅನ್ನಲೇಬೇಕು. ನಿಮ್ಮ ಅಡುಗೆ ನಿಜಕ್ಕೂ ರುಚಿ! ನಿಮ್ಮಂಥ ಬಾಣಸಿಗರು ಇನ್ನೆಲ್ಲೂ ಸಿಗರು! 'ಗಣಪ್ಪ ನಮ್ಮನು ಕಾಯಪ್ಪ... ನೈವೇದ್ಯ ಮಾಡುವೆವು ಘಮಘಮ ಕಾಯಪ್ಪ" ಅಂತ ನನ್ನ ಒಂದು ನಾಟಕದ ಹಾಡಿದೆ.

- ಎಚ್‌ ಡುಂಡಿರಾಜ್‌; ಬೆಳಗಾವಿ

*

ವಿಚಿತ್ರಾನ್ನ ಭಟ್ಟರೇ, ಅಪ್ಪ ಪುರಾಣ ಚೆನ್ನಾಗಿತ್ತು. ಇದು ನನ್ನ ಅಚ್ಚು ಮೆಚ್ಚಿನ ತಿಂಡಿಗಳಲ್ಲೊಂದು. ಬರೇ ''ಅಪ್ಪ"" ಅಂದರೆ ಇದರಲ್ಲಿ ನಾನಾ ವಿಧಗಳಿರುವುದರಿಂದ (ಉದಾ: ಹಲಸಿನ ಹಣ್ಣಿನ ಅಪ್ಪ, ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಸಿಹಿಯಾದ ಅಪ್ಪ, ದೀಪಾವಳಿಗೆ ಹೆಚ್ಚಾಗಿ ಮಾಡುವ ಏಲಪ್ಪ ಇತ್ಯಾದಿ), ಈ ಗುಳಿಯಲ್ಲಿ ಹಾಕಿ ಬೇಯಿಸುವ ಅಪ್ಪಕ್ಕೆ ನಮ್ಮಲ್ಲಿ ''ಗುಳಿಯಪ್ಪ"" ಅಂತಲೇ ಹೆಸರು. ನಮ್‌ ಕಡೆ ಕೆಲವರು ಇದಕ್ಕೆ ''ಊತಪ್ಪ"" ಅಂತಲೂ ಕರೆಯುತ್ತಾರೆ. ಹಾಗೆ ಯಾವಾಗ್ಲೋ ಒಮ್ಮೆ ಮದ್ರಾಸಿನಲ್ಲಿ ಹೋಟೆಲ್‌ಗೆ ಹೋಗಿದ್ದಾಗ ''ಊತಪ್ಪಮ್‌"" ಅನ್ನೋ ಮೆನು ಐಟಮ್‌ ನೋಡಿ, ಬಹಳ ಖುಶಿಯಿಂದ ಆರ್ಡರ್‌ ಮಾಡಿ, ಆಮೇಲೆ ಆ ಸಪ್ಲಾಯೆರ್‌ ಬರೇ ದಪ್ಪದ ದೋಸೆ ತಂದು ಕೊಟ್ಟಾಗ ತುಂಬಾ ನಿರಾಶೆಯಾಗಿತ್ತು. ಆಗ ನನಗೆ ತಮಿಳಿನಲ್ಲಿ ಅವನಿಗೆ ಬಯ್ಯಲಿಕ್ಕೂ ಗೊತ್ತಿಲ್ಲದೆ ಕೊಟ್ಟದ್ದನ್ನು ತಿಂದು ಬಂದಿದ್ದೆ. ಆಮೇಲೆ ಗೊತ್ತಾಯ್ತು, ಅವನದ್ದೇನೂ ತಪ್ಪಿಲ್ಲ ಅಂತ. ಮಂಗಳೂರು ಹೋಟೆಲುಗಳಲ್ಲಿ ಗೋಳಿಬಜೆ ಸಿಕ್ಕಿದರೂ, ಗುಳಿಯಪ್ಪ ಸಿಗದಿದ್ದುದು ಸ್ವಲ್ಪ ಬೇಜಾರು ಸಂಗತಿ. ಬಹುಶ: ಒಂದು ದೊಡ್ಡ (ಕನಿಷ್ಟ ಪಕ್ಷ 25 ಗುಳಿಯಿದ್ದ) ದೋಸೆ ಕಾವಲಿ ಸಿಗದಿರುವುದೇ ಇದಕ್ಕೆ ಕಾರಣವೇನೋ ? ಬರೇ ಏಳು ಗುಳಿಗಳ ಕಾವಲಿ ಉಪಯೋಗಿಸಿ ಗುಳಿಯಪ್ಪ ತಯಾರಾಗುವಷ್ಟರಲ್ಲಿ

ಗಿರಾಕಿಗಳೆಲ್ಲಾ ಎದ್ದು ಹೋದಾರು.

- ಹರೀಶ ಬಾಧ್ಯ; ಸ್ಯಾನ್‌ ಹೋಸೆ, ಕ್ಯಾಲಿಫ‚ೋರ್ನಿಯಾ

*

ಅಪ್ಪಾ! ಅಪ್ಪದ ಬಗ್ಗೆ ಇಷ್ಟೆಲ್ಲಾ ವಿಷಯಗಳಿವೆಯೇ? ನನಗೆ ಮೊದಲು ನೆನಪಿಗೆ ಬರೋದು ನನ್ನಪ್ಪ. ನಂತರ ನೆನಪಾಗೋದು ಪತ್ನಿ ಮಾಡುವ ಎರೆಯಪ್ಪ (ಸಿಹಿತಿಂಡಿ). ನಂತರ ಬರೋದು ಈ ಅಪ್ಪ - ಈ ಅಪ್ಪವನ್ನು ವಾರಕ್ಕೊಮ್ಮೆ ಮನೆಯಲ್ಲಿ ಮಾಡುತ್ತೇವೆ. ಇಷ್ಟೊಂದು ವಿಷಯಗಳನ್ನು ತಿಳಿದುಕೊಂಡ ಮೇಲೆ ಈಯಪ್ಪ ಎರೆಯಪ್ಪನ ಅಪ್ಪನಾಗಿ ನನ್ನ ಪಟ್ಟಿಯಲ್ಲಿ ಎರಡನೆಯ ಸ್ಥಾನ ಪಡೆಯುತ್ತಿದೆ. ಏನಪ್ಪಾ ನಮಗೆ ಎಷ್ಟೆಲ್ಲಾ ಅಪ್ಪಗಳಪ್ಪ. ಅಪ್ಪಗಳಿಲ್ಲದೇ ಹೊಟ್ಟೆ ಕೇಳಬೇಕಲ್ಲಪ್ಪ! ವಂದನೆಗಳೊಂದಿಗೆ,

- ತ.ವಿ.ಶ್ರೀ; ಮುಂಬಯಿ

*

ಹೌದಪ್ಪ ಇದು ನನ್ನ ಮೋಸ್ಟ್‌ ಫ‚ೇವರಿಟ್‌ ಬೆಳಗಿನ ತಿಂಡಿ. ನಮ್ಮ ಕೊಟ್ಟೂರ್‌ (ದಾವಣಗೆರೆ ಹತ್ತಿರ) ಕಡೆ ಇದನ್ನ "ಪಡ್ಡು" ಅಥವಾ 'ಗುಂಡು ಪಂಗಲ" ಅಂತ ಕರಿತಾರೆ. ನಮ್ಮ ಮನೆಯಲ್ಲಿ ಬೆಳಗ್ಗೆಗೆ ಪಡ್ಡು ಮಾಡಿದ್ರೆ ನಾನು ಅವತ್ತು ಮಧ್ಯಾಹ್ನ ಊಟ ಮಾಡೋದೆ ಇಲ್ಲ. ಸುಮಾರು 30ರಿಂದ 35 ಬಿಸಿ ಬಿಸಿ ಪಡ್ಡು ತಿಂದು ಬಿಟ್ರೆ ಆಮೇಲೆ ರಾತ್ರಿಯೇ ಊಟ. ನನ್ನ ಫ‚ೇವರಿಟ್‌ ತಿಂಡಿಯನ್ನು ನಿಮ್ಮ ವಿಚಿತ್ರಾನ್ನದಲ್ಲಿ ಬಡಿಸಿದ್ದಕ್ಕೆ ಧನ್ಯವಾದಗಳು.

- ಭಕ್ಷಿ; ಬೆಂಗಳೂರು

*

ಈ ವಾರದ ವಿಚಿತ್ರಾನ್ನ ಓದಿದೆ. ಅಪ್ಪ ಎಂದು ಓದಿದ ತಕ್ಷಣ 'ಫಾದರ್ಸ್‌ ಡೇ" ಸ್ಪೇಷಲ್‌ ಆಗಿ ಎನೊ ಬರೆದಿದ್ದಿರಿ ಎಂದು ತಿಳಿದೆ. ಆದರೆ ""ಗುಳಿಯಪ್ಪ"" ದ ಬಗ್ಗೆ ಓದಿ ಬಹಳ ಆನಂದವಾಯಿತು. ಇದಕ್ಕೆ ಗುಂಟಪಗಳ್‌ ಅಂತನೂ, ಪಡ್ಡು ಅಂತನೂ ಕರಿತಾರೆ ಘಟ್ಟದ ಮೇಲೆ.

- ಜ್ಯೋತಿ ಕಾರಂತ್‌; ಬೆಂಗಳೂರು

*

ಅಪ್ಪಂದಿರ ದಿನಾಚರಣೆ ಸ್ಪೆಷಲ್‌ ಐಟಮ್‌ ಬಹಳ ಇಷ್ಟವಾಯ್ತು. ನಾವು ರುಚಿ ನೋಡಿಲ್ಲ. ಮನೆಯಲ್ಲಿ ಸುಲಭವಾಗಿ ಮಾಡುವಂತ ತಿಂಡಿ. ಅಪ್ಪಕ್ಕೆ ಸಮೀಪವರ್ತಿ ನಾವೂ ಮಾಡುತ್ತೇವೆ, ಅದನ್ನು ಏರಿಯಪ್ಪ ಎಂದು ಕರೀತೇವೆ. ಅಕ್ಕಿ, ಬೆಲ್ಲ, ಕಾಯಿ, ಏಲಕ್ಕಿ ಹಾಕಿ ರುಬ್ಬಿ ತುಪ್ಪದಲ್ಲಿ ಕರಿಯುತ್ತೇವೆ. ಇನ್ನೂ 'ಕೊಬ್ಬಿನಂಶ" ಜಾಸ್ತಿ! ಆದರೆ ಅಪ್ಪಕ್ಕೆ ಬೇಕಾಗುವ ತಟ್ಟೆ ಇಲ್ಲಿಯೇ ಸಿಗುವುದು ಎಂದು ಮಾಹಿತಿಕೊಟ್ಟು ಬರೆದಿರುವ ಲೇಖನ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆಯವರಿಗೆ ಸಿಹಿಯಲ್ಲಿ ಇಂಟೆರೆಸ್ಟ್‌ ಇಲ್ಲ. ಖಾರ, ಖಾರ, ಖಾರ! ನಿಮ್ಮ ಕಡೆ ಕರಾವಳಿಯಲ್ಲಿ ಮಾಡುವ ಪತ್ರಡೆ ನಮಗೂ ಫ‚ೇವರಿಟ್‌!

- ಅನುರಾಧಾ ಅರುಣ್‌; ಚಿಕಾಗೊ

*

ಯಾವ ಅಪ್ಪ? ಕಾವಲಿಯಿಲ್ಲದೇ ಮಾಡುವ ಸಜ್ಜಪ್ಪ? ಗುಳಿಯಪ್ಪದಲ್ಲಿ ಯಾವುದಪ್ಪಾ? ಆಲೆಮನೆ ಕಾಯಿಹಾಲು ಅಪ್ಪ? ಹಲಸಿನಹಣ್ಣಿನ ಅಪ್ಪ? ಬಾಳೆಹಣ್ಣಿನ ಅಪ್ಪ? ಕಾಯಿ ಅಪ್ಪ? ಗುಳಿಅಪ್ಪ? ಅಥವಾ ದಾವಣಗೆರೆ ಪಡ್ಡು? ಯಾವುದು ಕೇಳಿ, ನನಗೆ ಅವೆಲ್ಲವೂ ಗೊತ್ತು!

- ಎಸ್‌. ಎಂ. ಪೆಜತ್ತಾಯ; ಬೆಂಗಳೂರು

*

'ಅಪ್ಪ"ದ ಬಗ್ಗೆ ಬರೆದು ನಮ್ಮ ಮನೆಯೆಲ್ಲ ನೀರುನೀರು ಮಾಡಿದ್ರಿ! ನಾವು ಇದನ್ನು 'ಗುಳಿಯಪ್ಪ" ಅಂಥ ಹೇಳ್ತೇವೆ. ಅದಕ್ಕೆ ಬಳಸುವ ಹಿಟ್ಟು ಮಾಮೂಲಿ ಉದ್ದಿನ ದೋಸೆಯ ಹಿಟ್ಟೇ. ಮತ್ತೆ ಇನ್ನೊಂದು ಏರಿಯಪ್ಪ ಅಂತ ಮಾಡ್ತೇವೆ. ಅಕ್ಕಿ + ತೆಂಗಿನಕಾಯಿ + ಬೆಲ್ಲ ಮಿಶ್ರಣದ ಹಿಟ್ಟು ಮಾಡಿ ಅದನ್ನು ಎಣ್ಣೆಯಲ್ಲಿ ಕರಿಯುವುದು. ತುಂಬಾ ಚೆನ್ನಾಗಿರುತ್ತದೆ. ಆದ್ರೆ ಇಲ್ಲಿ ಗುಳಿಯಪ್ಪದ ಕಲ್ಲು ಇಲ್ಲದೆ ಅದನ್ನು ಮಾಡುವ ಆಸೆಯೇ ಬಿಟ್ಟಿದ್ದೆ. ಇನ್ನು ನೀವು ಹೇಳಿದ ಅಯ್‌ ಬ್ಲಸ್ಕೀವರ್‌ ಕಾವಲಿ ಎಲ್ಲಿ ಸಿಕ್ತದೆ ಅಂತ ಹುಡುಕಬೇಕು.

- ರಮ್ಯಾ ರಘುನಾಥ್‌; ಮಿಚಿಗನ್‌

*

ನಾವಿದನ್ನು ಗುಳಿಯಪ್ಪ ಎಂದು ಕರೆಯುತ್ತೇವೆ. ನಮ್ಮೆಲ್ಲರಿಗೂ ಇದು ತುಂಬಾ ಇಷ್ಟವಾದ ತಿಂಡಿ.

- ಸವಿತಾ ರವಿಶಂಕರ್‌; ನಾರ್ತ್‌ ಕೆರೊಲಿನಾ

*

'ಅಪ್ಪ" ಖಂಡಿತಾ ತಿಂದಿದ್ದೀವಿ. ಭಾರತದಿಂದ ವಿಶೇಷವಾಗಿ ಅದಕ್ಕೋಸ್ಕರ ಕಾವಲಿಯನ್ನು ತಂದಿದ್ದೇವೆ. ನನ್ನ ಯಜಮಾನರಿಗೆ ದೋಸೆಗಿಂತ ಗುಳಿಯಪ್ಪವೇ (ನಾವು ಹೇಳುವ ಹೆಸರು) ಇಷ್ಟ. ಅಂತೂ ವಿಚಿತ್ರಾನ್ನ ಓದುಗರ ಬಾಯಲ್ಲಿ ನೀರೂರಿಸದಿದ್ದರೆ ನಿಮಗೆ ನಿದ್ರೆ ಬರುವುದಿಲ್ಲ ಅನ್ನಿಸುತ್ತೆ :-)

- ಮಂಗಳಾ ಗೋಪಾಲಕೃಷ್ಣ; ಅಟ್ಲಾಂಟಾ

*

''ಅಪ್ಪ"" ವಿಚಿತ್ರಾನ್ನ ತುಂಬಾ ಚೆನ್ನಾಗಿದೆ. ನಾವು ಕೂಡ ಮಾಡುತ್ತೇವೆ. ಅದೇ ನೀವು ಹೇಳಿದ ಹಾಗೆ. ಅಕ್ಕಿ,ಉದ್ದು ಜೊತೆಗೆ ಹಸಿರು ಮೆಣಸಿನಕಾಯಿ, ಕರಿಬೇವು, ಕೊತ್ತುಂಬರಿ, ಹಸಿ ಕೊಬ್ಬರಿ, ಶುಂಠಿ ಎಲ್ಲಾ ಹಾಕಿ. ಆದರೆ ಇದು ನಮಗೆ ಸ್ವಲ್ಪ ಅಪರೂಪದ ತಿಂಡಿಯೇ. ಇನ್ನೊಂದು ಆಶ್ಚರ್ಯಕರ ವಿಷಯ ಪತ್ತೆಯಾಯಿತು. ನೀವು ಬರೆದಂತೆ ನಾವೇನು ''ಆಂಧ್ರಪ್ರದೇಶದ ರಾಯಲ ಸೀಮೆಯವರಲ್ಲದಿದ್ದರೂ"" ಈ ಅಪ್ಪಕ್ಕೆ ನಾವು ಕರೆಯುವ ಹೆಸರು ''ಗುಂಡು ಪೊಂಗಲು"" ಎಂದೇ! ಈ ಅಪ್ಪ ಎಲ್ಲಿಂದ ಬಂದು ಎಲ್ಲೆಲ್ಲಿ ನೆಲೆಸಿದ್ದಾನೋಪ್ಪ ವಂದನೆಗಳು.

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

*

''ಅಪ್ಪ""ದ ಬಗ್ಗೆ ಆರ್ಟಿಕಲ್‌ ಚೆನ್ನಾಗಿದೆ. ಈಗೇನು ''ಫ‚ೋರಮ್‌ ಮಾಲ್‌"" ನಲ್ಲೂ 'ಗುಳಿಯಪ್ಪ" ಸಿಗುತ್ತೆ! (ಮೈಸೂರು ದಾಸಪ್ರಕಾಶ್‌ನಲ್ಲಿ ಒಳ್ಳೆಯ ''ಅಪ್ಪ"" ಸಿಗುತ್ತದೆ! ಅಭ್ಯಾಸ ಇಲ್ಲ ಅಂದ್ರೆ ಕೊಬ್ಬರಿ ಎಣ್ಣೆ ಬೇಡಾ ರೆಗ್ಯುಲರ್‌ ಎಣ್ಣೆ ಉಪ್ಯೋಗಿಸಿ ಅಂತ ಹೇಳಬೇಕು ಅಷ್ಟೆ!)

- ಡಾ। ಎಸ್‌ ಎಸ್‌; ಬೆಂಗಳೂರು

*

ನಿಮ್ಮ ವಿಚಿತ್ರಾನ್ನ ತುಂಬಾ ಚೆನ್ನಾಗಿ ಇರುತ್ತೆ. ನಾನು ಪ್ರತೀ ವಾರ ತಪ್ಪದೆ ಓದುತ್ತೀನಿ. ಇವತ್ತು 'ಅಪ್ಪ" ಆರ್ಟಿಕಲ್‌ ಕೊನೆಗೆ ಅಪ್ಪ ಕಾವಲಿ ಸಿಗುವ ಲಿಂಕ್‌ ಕೊಟ್ಟದ್ದಕ್ಕೆ ನಿಮಗೆ ತುಂಬ ಥ್ಯಾಂಕ್ಸ್‌. ನಾನು ಅದು ಇಲ್ಲೆಲ್ಲಿ ಸಿಗುತ್ತದೆಯಾ ಎಂದು ಹುಡುಕುತ್ತಿದ್ದೆ.

- ಜ್ಯೋತಿ ಮಾದೇಶ್‌; ವರ್ಜೀನಿಯಾ

*

ಹೌದಪ್ಪ, ನಮಗೂ ಗೊತ್ತಿದೆ 'ಅಪ್ಪ". ಅಂದಹಾಗೆ ನಿಮ್ಮ ವಿಚಿತ್ರಾನ್ನವನ್ನು ನಾನು ತಪ್ಪದೆ ಓದುತ್ತಿದ್ದೇನೆ. ಬಹಳ ಸೊಗಸಾಗಿ ಬರೆಯುತ್ತೀರಿ!

- ಅನುಪಮಾ ಮಂಗಳವೇಢೆ; ಚಿಕಾಗೊ

*

'ಅಪ್ಪ"ನ ಪುರಾಣ ಓದಿದೆ. ನಮ್‌ ಕಡೆ ಇದಕ್ಕೆ 'ಪಡ್ಡು" ಅಂತ ಕರೀತಾರೆ. ನಿರ್ಲೇಪ್‌ ನವರ ನಾನ್‌ಸ್ಟಿಕ್‌ ಕಾವಲಿ ಬಂದಮೇಲಂತೂ ಭಾರಿ ಸುಲಭ ಆಗಿದೆ ಇದನ್ನ ಮಾಡೋದು(ಎಣ್ಣೆ ಹಾಕೋದು ಬೇಡ, ಬುಡ ಹಿಡಿಯುತ್ತೆ ಅನ್ನೋ ಯೋಚನೇನು ಇಲ್ಲ :-) ) ನಮ್ಮನೇನಲ್ಲಿ ಹಿಂದೆ ಬಳಪದ ಕಲ್ಲಿನ ಹಾಗು ಕಬ್ಬಿಣದ ಕಾವಲೀಲಿ ನಮ್ಮಮ್ಮ ಪಡ್ಡು ಮಾಡ್ತಿದ್ದದ್ದು ನೆನಪಾಯ್ತು.

- ಶುಭಶ್ರೀ ಗಿರೀಶ್‌; ವ್ಯಾಂಕೊವರ್‌, ಕೆನಡಾ

*

'ಅಪ್ಪ" ನನ್ನು ಓದಿದೆ. ಬಾಯಲ್ಲಿ ನೀರೂರಿತು, ನಮ್ಮಲ್ಲೂ ಒಂದು ಅಪ್ಪದಕಾವಲಿ ಇದೆ, ಒಮ್ಮೊಮ್ಮೆ ಅಪ್ಪ ಬರುತ್ತಾನೆ!

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

*

ನನಗೆ ಅಪ್ಪ ಗೊತ್ತು! ನೊ ನೊ ನೀವು ಹೇಳಿದ ಅಪ್ಪ ಅಲ್ಲ, ನಮ್ಮ ತಂದೆ ಗೊತ್ತು! ನಾವು ಈ ತಿಂಡಿಗೆ ''ಪಡ್ಡು"" ಅಂತ ಕರಿತೀವಿ. ಮಾಡೊ ವಿಧಾನ ಎಲ್ಲ ನೀವು ಹೇಳಿದ ಅಪ್ಪ ದ ಹಾಗೆಯೆ. ಅಮ್ಮ ಈಗ್ಲು ಮಾಡ್ತರೆ, ಈ ಪಡ್ಡು ಮುಂದೆ ಯಾವ ಬರ್ಗರ್‌ ಪಿಜ‚ಾ್ಜನೂ ನಿಲ್ಲಲ್ಲ!

ಬಸವೇಶ್ವರನಗರದಲ್ಲಿ ಒಂದು ಕಡೆ ಮೆಣಸಿನಕಾಯಿ ಭಜಿ ಮಾಡೊ ಅಂಗಡಿಯಲ್ಲೇ ಈ ಪಡ್ಡು ಮಾಡಿ ಮಾರೊದು ನೋಡಿದೀನಿ. ಈಗ ಪಡ್ಡು ಕೂಡ ಕಮರ್ಷಿಯಲ್‌ ಆಗಿದೆ ಅನಿಸುತ್ತೆ. ರೂಪ ಒಂದು ನಾಮ ಹಲವು :-)

- ಸ್ಮಿತಾ ಟಿ ಟಿ; ಬೆಂಗಳೂರು

*

ನಮ್ಮಲ್ಲಿ (ಬಳ್ಳಾರಿ ಕಡೆಗೆ) 'ಅಪ್ಪ"ನಿಗೆ "ಗುಂಡು ಪೊಂಗಲು" ಅಂತಾರೆ. ಬಹುಶಃ ಅದನ್ನು ಇಷ್ಟ ಪಡದವ್ರು ಬಹಳ ಕಡಿಮೆಯೇನೊ! ಆಲ್ಮೋಸ್ಟ್‌ ಎಲ್ಲರ ಮನೆಯಲ್ಲೂ (ಬ್ರಾಹ್ಮಣರಲ್ಲಂತೂ ಹೌದೇ ಹೌದು) ಇವತ್ತಿಗೂ ಅದನ್ನು ಸವಿಯುತ್ತಾರೆ. ನೀವೆಂದಂತೆ ಅಕ್ಕಿ+ಉದ್ದಿನ ಹಿಟ್ಟಿನಲ್ಲಿ ಘಟ್ಟಿಯಾದ ದೋಸೆಹಿಟ್ಟಿನ ಹದದಲ್ಲಿ, ಇಷ್ಟವಿದ್ದವರು ಕೊತ್ತಂಬರಿಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಬೆರಸಿ 'ಘಮ್ಮ್‌" ಎನ್ನುವ ಗುಂಡುಪೊಂಗಲನ್ನು ಮಾಡ್ತಾರೆ. ಎರಡುಅ ವಾರಗಳ ಹಿಂದೆ ಮೈಸೂರಿನ "ದಾಸಪ್ರಕಾಶ್‌"ಗೆ ಹೋದಾಗ - ''ಈವತ್ತಿನ ಸ್ಪೆಷಲ್‌ ''ಗುಳಿಅಪ್ಪ""" ಎನ್ನುವ ಬೋರ್ಡ್‌ ನೋಡಿ ಏನಿರಬಹುದು ಅಂತ ಯೋಚಿಸಿ ಆರ್ಡರ್‌ ಮಾಡಿದಾಗ ಬಂದದ್ದು ನಮ್ಮ ಗುಂಡುಪೊಂಗಲ್‌!

- ಸಂಧ್ಯಾ ಶಾಮ್‌ಜೀ; ಹೈದರಾಬಾದ್‌

*

ನಾನು ಸಹ 'ಅಪ್ಪ" ಪ್ರೇಮಿ. ಆವಾಗಾವಾಗ ನಮ್ಮ ಮನೆಯಲ್ಲಿ ಅಪ್ಪ ಬೆಳಗಿನ ತಿಂಡಿ. ನಮ್ಮೆಲ್ಲರ ಅಚ್ಚುಮೆಚ್ಚಿನ ತಿಂಡಿ ಅಪ್ಪ. ನಿಮ್ಮ ಲೇಖನ ಬಹಳ ರುಚಿಯಾಗಿತ್ತು!

- ಉಮೇಶ್‌ ಜಿ ಕೆ; ಮೈಸೂರು

*

ಈ ವಾರದ ವಿಚಿತ್ರಾನ್ನದ ಜತೆಗೆ ಅಪ್ಪ ಬೇಯಿಸಿದ್ದಕ್ಕೆ ಧನ್ಯವಾದಗಳು. ಈ ಮಳೆಗಾಲದಲ್ಲಿ ಬಿರುಮಳೆಯಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತು ಬಿಸಿ ಅಪ್ಪ ತಿಂದಷ್ಟೇ ಸಂತೋಷವಾಯಿತು! ಆದರೆ ನೀವು ಮಧೂರು ದೇವಸ್ಥಾನದ 'ಅಪ್ಪ" ಪ್ರಸಾದದ ಬಗ್ಗೆ ಮೆನ್ಷನ್‌ ಮಾಡದೆ ಇರುವುದು ಸ್ವಲ್ಪ ಬೇಸರ ತಂದಿದೆ; ಯಾಕಂದ್ರೆ ಮಧೂರು ದೇವಸ್ಥಾನದ 'ಅಪ್ಪ" ವರ್ಲ್ಡ್‌ಫೇಮಸ್‌ ಸ್ವಾಮೀ!

ನಾವು ಹಾಸ್ಟೆಲ್‌ನಲ್ಲಿ ಇದ್ದಾಗ ಹಾಸ್ಟೆಲ್‌ನಿಂದ 7 ಕಿಮೀ ದೂರದಲ್ಲಿರುವ ಹೊಟೆಲ್‌ಗೆ ಹೋಗಿ ಅಪ್ಪ, ನೀರುದೋಸೆ ಸಿಗುತ್ತವೆ ಅಂತ ಹೋಗಿ ತಿನ್ನುತ್ತಿದ್ದೆವು. ಈಗ ಇಲ್ಲಿ ನಾನೇ ನಳಪಾಕ ಪ್ರಾರಂಭಿಸಿದ್ದೇನೆ; ನೀರುದೋಸೆ ಆಯಿತು, ಇನ್ನು 'ಅಪ್ಪ" ಟ್ರೈ ಮಾಡಬೇಕು!

- ಸನತ್‌ ಕೊಲಚಿಪ್ಪು; ಇನ್ಫೊಸಿಸ್‌, ಮೈಸೂರು

*

ಸರಸ್ವತಿಪೂಜೆಯ ದಿನ ಮಾಡುವ ಎರೆಯಪ್ಪನನ್ನೇ ಮರೆತಿರಲ್ಲ ಜೋಶಿಯವರೆ! ಬಿಡಿ, ಇನ್ನೇನು ಸರಸ್ವತಿ ಹಬ್ಬ ಈವರ್ಷ ಬಂದಾಗ ಮಾಡಿ(ಸಿ) ತಿಂದುಬಿಡಿ! ಇನ್ನು ಊತಪ್ಪ ಸವಿ ತಿಂದವ್ರೆ ಬಲ್ಲರು! ಅಬ್ಬ ನಾವೆಲ್ಲ ತಿಂಡಿಪೋತರು, ಹೀಗೇ ಬರೆಯುತ್ತಿರಿ, ಈ ತಿಂಡಿಗಳೆಲ್ಲ ಈದೇಶದ ಜಂಕ್‌ಫ‚ುಡ್‌ ಮುಂದೆ ಯಾವಾಗ 'ಆ್ಯಂಟಿಕ್‌" ಆಗಿಹೋಗ್ತವೊ ಏನೊ.

- ಶೈಲಜಾ ಗುಂಡೂರಾವ್‌; ಮೇರಿಲ್ಯಾಂಡ್‌

*

'ಅಪ್ಪ" ಖಂಡಿತ ಗೊತ್ತಪ್ಪ! ಈ ಅಪ್ಪವನ್ನು ಕಜ್ಜಾಯ, ಅತಿರಸ ಎಂದು ಬೇರೆ ಹೆಸರುಗಳಿಂದ ಕರೆಯುತ್ತಾರೆ ಅಲ್ಲವೇ? ನಾವು ಕಜ್ಜಾಯ/ಅತಿರಸವನ್ನೇ ಅಪ್ಪ ಎಂದು ಕರೀತಿವಿ. ಅಪ್ಪನ ದಿನಕ್ಕೆ ಅಪ್ಪನನ್ನು ಪರಿಚಯಿಸಿ ಬಾಯಲ್ಲಿ ನೀರೂರಿಸಿದ್ದಕ್ಕೆ ಧನ್ಯವಾದಗಳು!

- ಸಂಪಿಗೆ ಶ್ರೀನಿವಾಸ; ಬೆಂಗಳೂರು

*

ನಮ್ಮೂರು ಪುತ್ತೂರಲ್ಲಿ ನೀವು ಹೇಳಿರುವ ಅಪ್ಪದ ಜತೆಗೆ ಹಲಸಿನ ಹಣ್ಣಿನ ಅಪ್ಪ ಕೂಡ ಮಾಡ್ತಾರೆ ಮಾರಾಯ್ರೆ! ಅದು ಸಣ್ಣ ರೌಂಡ್‌ ಬಾಲ್ಸ್‌ ಮಾಡಿ ಎಣ್ಣೆಯಲ್ಲಿ ಫ‚ೆ್ರೃ ಮಾಡುವುದು. ಅದನ್ನು ನಾವು 'ಫೆಲಕ್ಕಾಯಿ ಅಪ್ಪ" ಅಂತ ಹೇಳುವುದು.

ಮಾರಾಯ್ರೆ ಒಮ್ಮೆ ನೀವು ಮೂಡೆ (ಕೇದಗೆ ಎಲೆಯಲ್ಲಿ ಇಡ್ಲಿಹಿಟ್ಟು ಹಾಕಿ ಮಾಡ್ತಾರಲ್ಲ, ಹಲಸಿನ ಎಲೆ ಒಂದಕ್ಕೊಂದು ಕೂಡಿಸಿ ಕೂಡ ಮಾಡಬಹುದು) ಬಗ್ಗೆ ಸಾಧ್ಯವಾದ್ರೆ ಬರೀರಿ. ತುಂಬ ಜನಕ್ಕೆ ಮೂಡೆ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ.

- ಮಹೇಶ್‌ ಮಾರ್ಪಳ್ಳಿ; ನ್ಯೂಜೆರ್ಸಿ

*

'ಹೌದಪ್ಪ" ಎಂದುತ್ತರಿಸಿ ಲೇಖನವನ್ನು ಮೆಚ್ಚಿದವರು :

- ಉಷಾರಾಣಿ ಎ. ಎಸ್‌; ಹೈದರಾಬಾದ್‌
- ದೀಪಕ್‌ ಡಿ"ಕುನ್ಹ; ಕುವೈಟ್‌
- ವಸಂತ್‌ ಕಜೆ; ಬೆಂಗಳೂರು
- ಗುರುದತ್ತ್‌ ಮರಾಠೆ; ಬೆಂಗಳೂರು
- ಜಗನ್ನಾಥ್‌ ಎನ್‌; ಊರು?
- ರಮ್ಯಾ ಮಂಜುನಾಥ್‌; ಬೆಂಗಳೂರು
- ಅರ್ಚನಾ ಕುಲದೀಪ್‌; ಬೆಂಗಳೂರು

'ಇಲ್ಲಪ್ಪ, ನಮಗೆ ಈ ತಿಂಡಿ ಗೊತ್ತಿಲ್ಲ" ಎಂದುತ್ತರಿಸಿದವರು

- ಶ್ರೀನಾಥ್‌ ಭಲ್ಲೆ; ರಿಚ್ಮಂಡ್‌, ವರ್ಜೀನಿಯಾ

*

Shabash! What a GOURMET essay on "Appa" you have served us here. All the "ingredients " you have used in this essay give this dish an unique taste, unlike the one I used to enjoy when my dear amma used to make it for my appa and their maris, in the sweet times past.

Thanks again for showing your readers/fans, like me, how to write an absolutely perfect essay on a humble subject like "Appa" thats taken for granted when it is on your plate, in your hands and in your mouth until you learn of its international fame and appeal, after reading your essay. Abba, yeshtu ruchi ee Appa! No doubt, you made your father/appa proud by writing this essay for this Fathers day. If by chance I had written this caliber of an essay, my father/appa would have offered thanks with a special abhisheka and "Appa "as prasada, at my native Kanakapura Ganesha temple.

Happy Fathers day to all the fathers that read Vichitranna. Best Wishes,

- G.S.Satya; San Jose, CA

*

Yes Appa is my favourite tindi. We call it Gundupangala (brahmanara maneyalli) and other people call it Paddu. Majavagideyalla hesaru? Gundupangala almost resembles telugu name for the Appa. Ditto dose hittannu gattiyagi kalisi, eerulli, menasinakai, kottambari haki madida Gundupangala tindare bale ruchi. I prefer to add ginger (halaku halaku) to it, but Vani opposes it outrightly. Thanks for the excellent article.

- Prasad Naik; Bangalore

*

We call appa as Paddu. There are around 2 or 3 varieties of Paddu. (Plain, with masala and with curry). In Davangere we have separate gadi (bandi) selling only paddu. (near Gundi choultary). They prepare it with butter. Didnt know that it has a history though! Thanks for the information.

- Swarna N P; Bangalore

*

I do pepare guliyappa here too. Good Article!

- Bhargavi Venkat; Arizona

*

First of all, I wish my father Happy fathers day … without appa (to be eaten). Your article on appa was OK…not that bad. After eating appa and enjoying you forgot the temple in Kasaragod, which is special for the appa? Where Muddappa Seva is a special festival. It was recently on 1992. Even Chinese and Malaysian have the appa and its utensils is called in different names!

- Smitha Thurthi; Bangalore

*

Yep, its also called as "Paddu" and usually kids like this a lot.Few people call it fried Idli too..;-)

I sampled a few of your vichitranna articles. They are good, keep up the same! Infact I sent that recipes of Golibhaje and Neerdose to my friends ;-)

Hey one more thing today we had an arguement with our northy friends about the sweets of karnataka(exclusive). For every other sweet we mentioned they used to relate it with one of the north indian sweets!!( Dharwad peda is a copied version of Mathura peda it seems, and so on, so on...) Please do write on some sweet which is known as kannada sweet!!(apart from Mysore pak) May be then I can mention that also in future in my arguments ;-)

- Kavitha Siddegowda; Bangalore

*

I read this appa story nice, but you have forgotten, this items was called as" PADDU" in central Karnataka, like Davanager/Shimoga dist. They will prepeare this with "Akki + Uddu" and also they add "Kadlebele, Erulli, Hasimenasu, Sabakki soppu, Kothambari, Karibevu..." Nenesikondre baayi niruruththe!

- G.N.Rao; Bangalore

*

"Appa" article is very nice! We call it as "Guliyappa" and we put lot of fried onion, green chillies and coriander leaves to the dosa batter. It will be very tasty. We also make "sweet appa" with halasina hannu and baale hannu. Nimage adara parichaya irabahudu. (normally sweet appa maduvudu thithige mathra). You should enjoy halasina appa with pure ghee!

- Manjula; City?

*

It is a nice article and I really enjoyed it. It’s interesting to see how same kind of dish is made in different parts of the world. I have made Appa many times. It’s our paddathi that we make Appa (it’s a dessert) for Narasimha Jayanthi. This Appa is made out of rice, coconut, and jaggery (these ingredients need to grinded and then deep fried like bonda). It looks similar to the one you have showed in the article.

- Geetha Rangachar; Maryland

*

I am Arun Bharadwaj, am a regular eater of your vichitranna. but am not a fan of it - dont feel bad - because usually chitrannas are made of yesterdays i.e, tannage aagiro anna. so if i too become a fan, it will become still cold. so I am not a fan but a heater of vichitranna :-) (just kidding).

Sir, this is my humble request that if possible(when ever) please write about the humours sanskrit shlokas. For example recently i heard a sloka -MARKATASYA SURAAPAANAM MADHYE VRISHCHIKA DAMSHADAM TANMADHYE BHOOTA SANCHARO YADVA TADVA BHAVISHYATI. Like this you may be knowing many more. Please write about it.

- Arun Bharadwaj; Bangalore

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+