• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನಾದರೂ ಓದಲೇಬೇಕಾದ ಯಾರಿಗೂ ಬೇಡದ ಸಾಹಿತ್ಯ

By Staff
|

ಹೆಚ್ಚಿನಮಟ್ಟಿಗೆ ಎಲ್ಲ ನೆಟ್ಟಿಗರಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬಗೆಯ ಸಾಹಿತ್ಯವನ್ನು ಒಮ್ಮೆಯಾದರೂ ಗಂಭೀರವಾಗಿ ಓದಿ ಕೆಲವೊಂದು ಅಂಶಗಳನ್ನಾದರೂ ಜಾರಿಗೆ ತಂದರೆ ನಿಮ್ಮ ದಟ್ಸ್‌ಕನ್ನಡ ಇನ್ನೂ ಸುಂದರವಾಗುತ್ತದೆ.

ಎಸ್ಕೆ. ಶಾಮಸುಂದರ, ಸಂಪಾದಕ.

S.K. Shama Sundara, Editor - ThatsKannadaಯಾರಿಗೂ ಬೇಡ ಆದರೆ ಎಲ್ಲರಿಗೋಸ್ಕರ ಬರೆಯಲಾಗಿದೆ ಎನ್ನುವ ಸಾಹಿತ್ಯ ಯಾವುದು? ನಿಮಗೆ ನಮಗೆ ಬೇಕೋಬೇಡವೋ ಅಂತೂ ಈ ಸಾಹಿತ್ಯ ಪ್ರತಿನಿತ್ಯ ಕಣ್ಣಿಗೆ ಬಿದ್ದೇ ಬೀಳುತ್ತದೆ. ಕಣ್ಮುಂದೆನೆ ಇರುತ್ತದೆ. ಆದರೂ ಇದ್ದೂ ಇಲ್ಲದಂತೆ ಇದ್ದುಬಿಡುತ್ತದೆ. ಈ ಸಾಹಿತ್ಯವನ್ನು ಯಾರೂ ಓದುವುದಿಲ್ಲ. ಓದಿದರೆ ಅವನು ಸಾವಿರಕ್ಕೆ ಒಬ್ಬ ಎನಿಸಿಕೊಳ್ಳುತ್ತಾನೆ. ಓದಿಕೊಂಡು ಆ ಸಾಹಿತ್ಯದ ಪ್ರಯೋಜನ ಪಡೆದರೆ ಆತ ಅಥವಾ ಆಕೆ ಲಕ್ಷಕ್ಕೊಬ್ಬಳು ಎನಿಸಿಕೊಳ್ಳುತ್ತಾಳೆ.

ಇದು ಯಾಕೆ ಹೀಗಾಗುತ್ತದೆಂದರೆ ಇಂಥ ಸಾಹಿತ್ಯ ಮುಖ್ಯವಾಹಿನಿಯಿಂದ ಹೊರಗೇ ಉಳಿದಿರುತ್ತದೆ. ಇನ್ನೊಂದು ಕಾರಣ ಅದು ಸಣ್ಣ ಅತಿ ಸಣ್ಣ ತೀರ ಸಣ್ಣ ಸೈಜಿನ ಅಕ್ಷರಗಳಲ್ಲಿ ಪ್ರಿಂಟಾಗಿರುತ್ತದೆ. ದೃಷ್ಟಿ ಚೆನ್ನಾಗಿದ್ದವರಿಗೂ ಓದುವುದಕ್ಕೆ ತ್ರಾಸದಾಯಕವಾಗಿರುತ್ತದೆ. ಅಯ್ಯೋ ಎಲ್ಲಾರು ಬರೆದಿರುವ ಬದನೆಕಾಯಿಯೇ ಎಂದು ಉಡಾಫೆ ಮಾಡುವವರೇ ಜಾಸ್ತಿ.

ನೀವು ಯಾವುದೇ ಪದಾರ್ಥ ಕೊಂಡುಕೊಳ್ಳಿ, ಅಥವಾ ಅದು ಉಚಿತವಾಗಿದ್ದರೂ ಪರವಾಗಿಲ್ಲ. ಪ್ರಾಡಕ್ಟ್ ‌ಜತೆಗೆ ಒಂದು ಪಾಂಪ್ಲೆಟ್‌ ಮಡಿಚಿ ಇಟ್ಟಿರುತ್ತಾರೆ. ಪದಾರ್ಥವನ್ನು ಎತ್ತಿಕೊಂಡು ಆ ಮಾಹಿತಿ ಸೂಚನಾಪತ್ರವನ್ನು ಬಿಸಾಕುವುದು ನಾವು ಮಾಡುವ ಮೊದಲ ಕೆಲಸ.

ನಮ್ಮ ದೈನಂದಿನ ಜೀವನದಲ್ಲಿ ಎಡತಾಕುವ ಈ ಬಗೆಯ ಸಾಹಿತ್ಯಗಳ ಪಟ್ಟಿ ದೊಡ್ಡದಿದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ. ಇಮೇಲ್‌ಗಳಲ್ಲಿ ಕಾಣಿಸುವ Disclamier, terms of service and privacy policy, licence agreement; ವೆಬ್‌ಸೈಟು ಬ್ಲಾಗುಗಳಲ್ಲಿ ಇಣುಕುವ About us; ಕಾರು, ಕ್ರೇನು, ಲೇಥ್‌, ಬುಲ್ಡೋಜರ್‌ ಖರೀದಿಸಿದರೆ ಉಚಿತವಾಗಿ ಅವರು ನಿಮಗೆ ಕೊಡುವ Manual; ಇನ್ನು ಮಿಕ್ಸಿ, ಗ್ರೈಂಡರು, ಮೊಬೈಲು ಫೋನು, ಬ್ರೆಡ್‌ ಟೋಸ್ಟರ್‌ ಮುಂತಾದ, ಕೊನೆಗೊಮ್ಮೆ ಗ್ಯಾರಂಟಿಯಾಗಿ ಮೂಲೆಗುಂಪಾಗುವ ಗ್ಯಾಡ್ಜೆಟ್ಗಳ ಜತೆಗೆ ಸಿಗುವ Guarantee card, Warranty information; ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಏನಾದರೂ ತೀವ್ರತರ ಭಿನ್ನಾಭಿಪ್ರಾಯ ಬಂದಾಗ ಬೇಕಾಗುವ Legal Jurisdiction;

ಇವಿಷ್ಟೆ ಅಲ್ಲ. ಔಷಧಿಯ ಜತೆಗೆ ಇರುವ ಪರಿಪತ್ರಗಳಲ್ಲಿ compounds, percentage, dosage, manufacturing date, expiry date ಇದನ್ನೆಲ್ಲ ಓದುವುದಕ್ಕೆ ಭಾರಿ ಕಷ್ಟ. ಏನೋ ಪ್ರಾಣ ಹೋಗ್ತಾಯಿದೆ ಅಂದಾಗ ಮಾತ್ರ ಸಿರಪ್ಪಿನ ಬಾಟಲಿಯನ್ನು ಬೆಳಕಿಗೆ ಹಿಡಿದು ಬಗ್ಗಿ ಓದ್ತೀವಿ. ನಮ್ಮ ವೆಬ್‌ಸೈಟಿನ ಕತೆಯೂ ಇಷ್ಟೇನೆ. ಈ ಕತೆಯನ್ನು ಬ್ರೀಫಾಗಿ ಹೇಳುವುದಕ್ಕೋಸ್ಕರ ಇವತ್ತು ಕೆಂಡಸಂಪಿಗೆ ಬರೆಯಬೇಕಾಯಿತು.

ಅಂತರ್‌ಜಾಲ ಓದುಗನ ಜಾಡುಹಿಡಿದು ಹೊರಡುವುದಕ್ಕೆ ಇಂಟರ್‌ನೆಟ್‌ ತಂತ್ರಜ್ಞಾನ ಅನೇಕ ಪರಿಕರ ಸೌಲಭ್ಯಗಳನ್ನು ಕಲ್ಪಿಸಿದೆ. ಒಂದು ವೆಬ್‌ಸೈಟನ್ನು ಓದಿ ತಿರುವಿಹಾಕಲು ಯಾರು, ಎಲ್ಲಿಂದ ಬಂದರು? ಯಾವ ಬಾಗಿನ ಮೂಲಕ ಒಳಹೊಕ್ಕರು, ಯಾವ ತಾರೀಕು, ಎಷ್ಟುಗಂಟೆಗೆ ಬಂದಿದ್ದರು, ಇಲ್ಲಿ ಎಲ್ಲೆಲ್ಲಿ ಸುತ್ತುಹಾಕಿದರು, ನಮ್ಮ ಪುಟಗಳನ್ನು ನೋಡುತ್ತಾ ಎಷ್ಟು ಹೊತ್ತು ಕಾಲ ಕಳೆದರು? ಕೊನೆಗೆ ಯಾವ ಕಿಟಕಿಯಿಂದ ಜಿಗಿದು ಹೊರಹೋದರು? ಇಂಥ ಅನೇಕಾನೇಕ ಸಂಗತಿಗಳು ಚಾಚೂತಪ್ಪದೆ ದಾಖಲಾಗುತ್ತವೆ.

ಸಾಧ್ಯವಾದರೆ ನನ್ನನ್ನು ನಂಬಿ. ನಮ್ಮ ನಿಮ್ಮೆಲ್ಲರ ಪ್ರೀತಿಯ ದಟ್ಸ್‌ಕನ್ನಡ ‌ಡಾಟ್‌ ಕಾಂ ವಾಹಿನಿಯನ್ನು ಸುಮಾರು ಜನ ಓದುತ್ತಾರೆ. ಏಳು ಖಂಡಗಳ 2768 (IP cities) ನಗರಗಳಿಂದ ಕನ್ನಡಿಗರು ತಮಗೆ ಅನ್ನಿಸಿದಾಗಲೆಲ್ಲ , ಪುರುಸೊತ್ತಾದಾಗಲೆಲ್ಲ ಅಥವಾ ಬಿಡುವು ಮಾಡಿಕೊಂಡು ಬಂದುಹೋಗಿ ಮಾಡುತ್ತಿರುತ್ತಾರೆ. ಓದುತ್ತಾರೆ, ಬರೆಯುತ್ತಾರೆ, ಹೊಗಳುತ್ತಾರೆ, ತೆಗಳುತ್ತಾರೆ, ಕೊಳ್ಳುತ್ತಾರೆ, ಮಾರುತ್ತಾರೆ, ಹುಡುಕುತ್ತಾರೆ, ತಡಕಾಡುತ್ತಾರೆ, ಗೆಳೆತನ ವೃಧ್ಧಿಸಿಕೊಳ್ಳುತ್ತಾರೆ, ಹಗೆತನ ಸಾಧಿಸುತ್ತಾರೆ..ಏನೇನೋ ಮಾಡುತ್ತಾರೆ. ಒಟ್ಟಾರೆ, ಎಲ್ಲ ಪುಟಗಳಿಗೂ ತನ್ನದೇ ಆದ ಓದುಗರು ಇದ್ದಾರೆ.

ಆದರೆ,ತಮಾಷೆಯೆಂ ದರೆ ದಟ್ಸ್‌ಕನ್ನಡ ಡಾಟ್‌ ಕಾಂನಲ್ಲಿ ಅತಿಕಡಿಮೆ ಓದಿಸಿಕೊಳ್ಳುವ ಪುಟವೆಂದರೆ ಹಲೋ ಫ್ರೆಂಡ್ಸ್‌ ಮತ್ತು ನಮ್ಮ ಅಂತರ್‌ಜಾಲ ಪತ್ರಿಕೆಯಲ್ಲಿ ನಮೂದಿಸಲಾಗಿರುವ Comments policy. ಆದಕಾರಣ, ಈ ಮಾಹಿತಿ ಎಲ್ಲರ ಕಣ್ಣಿಗೆ ಢಾಳಾಗಿ ಬೀಳಲಿ ಎಂಬ ಏಕಮಾತ್ರ ಉದ್ದೇಶದಿಂದ ನನ್ನ ಅಂಕಣದಲ್ಲಿ, ಸಂಪಾದಕರ ಮಾತುಕತೆಗೆ ಮೀಸಲಾದ ಜಾಗದಲ್ಲಿ ಅಚ್ಚುಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more