499762dramaಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ?/column/manikanth/2009/0525-typical-tp-kailasam-by-cr-simha.htmlಕನ್ನಡಕ್ಕೊಬ್ಬರೇ ಕೈಲಾಸಂ ಹೇಗೋ, ಕನ್ನಡಕ್ಕೊಬ್ಬರೇ ಸಿಆರ್ ಸಿಂಹ ಕೂಡ. ಕಳೆದ 25 ವರ್ಷಗಳಿಂದ ಟಿಪಿಕಲ್ ಟಿಪಿ ಕೈಲಾಸಂ ಏಕಪಾತ್ರಾಭಿನಯದ ಮುಖಾಂತರ ಸಿಂಹ ಅವರು ಕೈಲಾಸಂ ಅವರ ಪಾತ್ರಗಳನ್ನು ಮತ್ತು ಸ್ವತಃ ಕೈಲಾಸಂ ಅವರನ್ನೇ ರಂಗಭೂಮಿಯ ಮೇಲೆ ಜೀವಂತವಾಗಿರಿಸಿದ್ದಾರೆ, ಒಬ್ಬರನ್ನೊಬ್ಬರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ. ಕೈಲಾಸಂ ಪಾತ್ರಗಳೊಳಗೆ ಟಿಪಿಕಲ್ ಆಗಿ ಪರಕಾಯ ಪ್ರವೇಶ ಮಾಡುವ ರೀತಿಗೆ ಸಿಂಹ 36867http://kannada.oneindia.com/img/2009/05/25-cr-simha2.jpg499762dramaಪ್ರಶಸ್ತಿಗೆ ನನಗಿಂತ ಹಿರಿಯರಿದ್ದಾರೆ : ಕಾಂತೇಶ್/cj/pasha/2009/0804-nataka-academy-awardee-kantesh-kadarmandalagi.htmlಶಿವಮೊಗ್ಗ, ಆ. 4 : ಪ್ರಶಸ್ತಿಯನ್ನು ತಕ್ಷಣಕ್ಕೆ ಬಯಸಿರಲಿಲ್ಲ. ರಂಗಭೂಮಿಯಲ್ಲಿ ನನಗಿಂತ ಹಿರಿಯರಿದ್ದಾರೆ. ಅವರಿಗೆ ಈ ಪ್ರಶಸ್ತಿ ಬರಬೇಕಿತ್ತು. ಆದರೂ ನನಗೆ ಹುಡುಕಿ ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಸಂತೋಷಗೊಂಡಿದ್ದೇನೆ. ಈ ಪ್ರಶಸ್ತಿ ಸಹ್ಯಾದ್ರಿ ರಂಗತರಂಗಕ್ಕೆ ದಕ್ಕಿದ ಪ್ರಶಸ್ತಿ ಎಂದು ಪ್ರಶಸ್ತಿ ವಿಜೇತ ಕಾಂತೇಶ್ ಕದರಮಂಡಲಗಿ ತಮ್ಮ ಸಂತೋಷವನ್ನು ಪತ್ರಿಕೆಯ ಜೊತೆ ಹಂಚಿಕೊಂಡರು.ನಾಟಕ ಅಕಾಡೆಮಿ ನೀಡುವ 2008-09ನೇ ಸಾಲಿನ 38414http://kannada.oneindia.com/img/2009/08/04-kantesh-kadaramandalagi1.jpg499762dramaಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ : 'ಗುಪ್ತಗಾಮಿನಿ' ಮಂಜು/cj/pasha/2009/0804-nataka-academy-awardee-manjunath-hegade.htmlಶಿವಮೊಗ್ಗ, ಆ. 4 : "ಪ್ರಶಸ್ತಿ ತಕ್ಷಣಕ್ಕೆ ಖುಷಿ ನೀಡಿದೆ. ಇನ್ನೂ ರಂಗಭೂಮಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಿತ್ತು. ಆನಂತರದಲ್ಲಿ ಈ ಪ್ರಶಸ್ತಿ ನನಗೆ ಬರಬೇಕಿತ್ತು ಎಂದು ಎನಿಸುತ್ತಿದೆ. ಪ್ರಶಸ್ತಿ ಬಂದ ನಂತರದಲ್ಲಾದರೂ ಮತ್ತೆ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆ ಮೂಡಿದೆ. ಇಲ್ಲದಿದ್ದರೆ, ಪ್ರಶಸ್ತಿಗೆ ನಾನೇ ಮರ್ಯಾದೆ ನೀಡಿದಂತಾಗುವುದಿಲ್ಲ." ಹೀಗೆಂದವರು, ಕರ್ನಾಟಕ ನಾಟಕ ಅಕಾಡೆಮಿಯ 2008-09ನೇ ಸಾಲಿನ ವಾರ್ಷಿಕ 38415http://kannada.oneindia.com/img/2009/08/04-manjunath-hegade1.jpg499762dramaಮೈಸೂರಿನ ಪತ್ರಕರ್ತರಿಂದ ಸಂಕ್ರಾಂತಿ ನಾಟಕ/news/2009/08/18/sankranti-drama-mysuru-journalists-association.htmlಮೈಸೂರು, ಆ.18 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಸುದ್ದಿಯ ನಡುವೆ ಸದ್ದಿಲ್ಲದೇ ಸೊರಗಿ ಹೋಗುವ ಪತ್ರಕರ್ತರು ನಾಟಕ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಅದೂ ಲಂಕೇಶ್ ಅವರ ಸಂಕ್ರಾಂತಿ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ. ಇದರ ಹೊಣೆಯನ್ನು ನಾಡಿನ ಹೆಸರಾಂತ ನಟ, ರಂಗ ಕಲಾವಿದ ಮಂಡ್ಯ ರಮೇಶ್ ಅವರು ಹೊತ್ತಿದ್ದಾರೆ. ಇದಲ್ಲದೆ 38695http://kannada.oneindia.com/img/2009/08/18-sankrati-drama-mysore1.jpg38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpg38244ಮಣಿಕಾಂತ್ಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38244ಮಣಿಕಾಂತ್ಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38244ಮಣಿಕಾಂತ್ಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38244ಮಣಿಕಾಂತ್ಹೊಸ ನಿರ್ದೇಶಕರ ಕಥೆಗಳ ಕಗ್ಗೊಲೆ/movies/headlines/2009/01/08-young-kannada-movie-director-speaks-satyam.htmlನಾನು ಒಬ್ಬ ಸಿನೆಮಾ ನಿರ್ದೇಶಕ. ನಿಮ್ಮ ವೆಬ್ಬಿನಲ್ಲಿ ಬಂದ 'ಹೊಸ ನಿರ್ದೇಶಕರಿಗೆ ಕಿವಿಮಾತು' ಲೇಖನವನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿದ್ದೇನೆ. ನೀವು ನಿಷ್ಪಕ್ಷಪಾತವಾಗಿ ನನ್ನ ಅಭಿಪ್ರಾಯವನ್ನು ಪ್ರಕಟಿಸುತ್ತೀರೆಂದು ನಂಬಿದ್ದೇನೆ.ಇಂತು ವಿಶ್ವಾಸಿವಿಜಯ್ಸ್ವಾಮಿ. ನಿಮ್ಮ ಕಿವಿಮಾತಿಗೆ ಧನ್ಯವಾದಗಳು. ಆದರೆ ಇಲ್ಲಿ ಕೆಲವೊಂದು ಅಂಶ ನಿಮ್ಮ ಗಮನ ಬಿಟ್ಟು ಹೋಗಿರುವಂತೆ ಕಾಣುತ್ತದೆ. ಅದನ್ನೂ ಹೇಳಿ ಬಿಡೋಣ ಅಂತ ಬರೀತಿದೇನೆ. ನನ್ನದು ತಪ್ಪಾದರೆ ಕ್ಷಮಿಸಿಬಿಡಿ. 33951http://kannada.oneindia.com/img/2009/01/08-director-cut-action1e.jpg38244ಮಣಿಕಾಂತ್ಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpgnews"> ಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ? | Typical TP Kailasam | CR Simha | Kannada dramatist | Theatre - ಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ? - Kannada Oneindia

ಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ?

CR Simha as TP Kailasam
ಕನ್ನಡಕ್ಕೊಬ್ಬರೇ ಕೈಲಾಸಂ ಹೇಗೋ, ಕನ್ನಡಕ್ಕೊಬ್ಬರೇ ಸಿಆರ್ ಸಿಂಹ ಕೂಡ. ಕಳೆದ 25 ವರ್ಷಗಳಿಂದ ಟಿಪಿಕಲ್ ಟಿಪಿ ಕೈಲಾಸಂ ಏಕಪಾತ್ರಾಭಿನಯದ ಮುಖಾಂತರ ಸಿಂಹ ಅವರು ಕೈಲಾಸಂ ಅವರ ಪಾತ್ರಗಳನ್ನು ಮತ್ತು ಸ್ವತಃ ಕೈಲಾಸಂ ಅವರನ್ನೇ ರಂಗಭೂಮಿಯ ಮೇಲೆ ಜೀವಂತವಾಗಿರಿಸಿದ್ದಾರೆ, ಒಬ್ಬರನ್ನೊಬ್ಬರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ. ಕೈಲಾಸಂ ಪಾತ್ರಗಳೊಳಗೆ ಟಿಪಿಕಲ್ ಆಗಿ ಪರಕಾಯ ಪ್ರವೇಶ ಮಾಡುವ ರೀತಿಗೆ ಸಿಂಹ ಅವರಿಗೆ ಸಿಂಹ ಅವರೇ ಸಾಟಿ.

* ಎ.ಆರ್. ಮಣಿಕಾಂತ್

ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದೆರಡು ಸ್ಯಾಂಪಲ್‌ಗಳು ಹೀಗಿವೆ. ಸ್ಯಾಂಪಲ್ ಒಂದು: ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.

ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ-ಮಾನ್ಯ ಪರೀಕ್ಷಕರೆ, ಯಾವುದಾದರೂ ಹತ್ತು ಉತ್ತರಗಳಿಗೆ ಮಾರ್ಕ್ಸ್ ಕೊಡಿ' ಎಂದು ಬರೆದಿದ್ದರಂತೆ!

ಸ್ಯಾಂಪಲ್ ಎರಡು: ಕೈಲಾಸಂ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಪಾಠ ಕಲಿತಿದ್ದಕ್ಕಿಂತ ಹೆಚ್ಚಾಗಿ ನಾಟಕ, ಸಂಗೀತ ಕಲಿತರು. ಈ ಮಧ್ಯೆಯೇ ಗುಂಡು ಸೇವನೆಯೂ ಆಗುತ್ತಿತ್ತು. ಅದೊಂದು ದಿನ ಕ್ಲಬ್‌ನಲ್ಲಿ ಹಾಡಿದ ಗಾಯಕನೊಬ್ಬ ತನ್ನ ಸಂಗೀತ ಜ್ಞಾನ, ಕಂಠಸಿರಿಯ ಬಗ್ಗೆ ತಾನೇ ಹೆಮ್ಮೆ ಪಡುತ್ತ- ಧೈರ್ಯವಿದ್ದರೆ ಇಲ್ಲಿರುವ ಸಭಿಕರ ಪೈಕಿ ಯಾರಾದ್ರೂ ನನ್ನ ಥರಾನೇ ಹಾಡಿ ನೋಡೋಣ' ಅಂದನಂತೆ.

ಈ ಛಾಲೆಂಜ್ ಸ್ವೀಕರಿಸಲು ಬ್ರಿಟಿಷರೇ ಹಿಂದೆ ಮುಂದೆ ನೋಡುತ್ತಿದ್ದಾಗ-ಛಕ್ಕನೆ ಮೇಲೆದ್ದ ಕೈಲಾಸಂ-ಒಂದಿಷ್ಟೂ ತಡವರಿಸದೆ ಆತನಂತೆಯೇ ಹಾಡಿ, ಎಲ್ಲರ ಶಹಭಾಷ್‌ಗಿರಿಯ ಜತೆಗೆ ಬಹುಮಾನವನ್ನೂ ಗಿಟ್ಟಿಸಿದರಂತೆ...

ಕೈಲಾಸಂ ಹೇಗಿದ್ದರು ಎಂದು ವಿವರಿಸುತ್ತಾ ಹೀಗೆಲ್ಲ ಹೇಳುವ ಜನರೇ ಮತ್ತೂ ಒಂದು ಸಾಲು ಸೇರಿಸುತ್ತಾರೆ: ಕೈಲಾಸಂ ಒಂದು ಕೈಲಿ ಬುಸಬುಸನೆ ಸಿಗರೇಟು ಸೇದುತ್ತಾ, ಆಕಾಶಕ್ಕೆ ಹೊಗೆ ಬಿಡುತ್ತಾ, ತಮ್ಮ ನಾಟಕದ ಪಾತ್ರಗಳ ಸಂಭಾಷಣೆಯನ್ನು ಹೇಳ್ತಾ ಹೋಗ್ತಿದ್ರು. ಅವರ ಶಿಷ್ಯಂದಿರು ಅದನ್ನು ಬರೆದುಕೊಳ್ತಿದ್ರು. ಕೈಲಾಸಂ ಅವರಿಂದ ಡಿಕ್ಟೇಷನ್ ಪಡೆಯುವುದೇ ಸೌಭಾಗ್ಯ ಎಂದು ನಂಬಿದವರ ದೊಡ್ಡ ಹಿಂಡೇ ಅವರ ಸುತ್ತಮುತ್ತ ಇತ್ತು...'

***
ಈಗ ನಮ್ಮೊಂದಿಗಿಲ್ಲದ ಒಬ್ಬ ವ್ಯಕ್ತಿಯ ಕುರಿತು ಇಂಥದೇ ಕತೆ'ಗಳನ್ನು ಕೇಳಿದಾಗ, ಆತ ಹೀಗಿದ್ದನೇನೋ; ಹೀಗೆ ಮಾತಾಡುತ್ತಿದ್ದನೇನೋ; ಹೀಗೆ ನಡೆದಾಡುತ್ತಿದ್ದನೇನೋ ಎಂಬ ಅಂದಾಜಿನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಅಂಥ ವ್ಯಕ್ತಿಯೊಬ್ಬನ ಪಾತ್ರವನ್ನು ರಂಗದ ಮೇಲೆ ತರುವುದಿದೆಯಲ್ಲ? ಅದು ನಿಜಕ್ಕೂ ಸವಾಲಿನ ಕೆಲಸ.

ಇಂಥದೊಂದು ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಟ ಸಿ.ಆರ್. ಸಿಂಹ ಅವರ ಹೆಚ್ಚುಗಾರಿಕೆ. ಕೈಲಾಸಂ ಅವರ ವ್ಯಕ್ತಿಚಿತ್ರವನ್ನು ಟಿಪಿಕಲ್ ಟಿ.ಪಿ. ಕೈಲಾಸಂ' ಎಂಬ ನಾಟಕದಲ್ಲಿ ಅಕ್ಷರ ರೂಪದಲ್ಲಿ ತೆರೆದಿಟ್ಟವರು ನಾಟಕಕಾರ, ನಿರ್ದೇಶಕ ಟಿ.ಎನ್. ನರಸಿಂಹನ್. ವೇದಿಕೆ ತಂಡದಿಂದ ನಟ ಸಿ.ಆರ್. ಸಿಂಹ ಆ ನಾಟಕವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಅದು ಒನ್‌ಮ್ಯಾನ್ ಶೋ. ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಕೈಲಾಸಂ' ಆಗಿ ಸಿಂಹ ಇಡೀ ವೇದಿಕೆಯನ್ನೆ ಆಕ್ರಮಿಸಿಕೊಳ್ಳುವ ಪರಿಯಿದೆಯಲ್ಲ? ವಾಹ್, ಅದೊಂದು ಅದ್ಭುತ, ಅದೊಂದು ಸೋಜಿಗ, ಅದೊಂದು ಬೆರಗು ಮತ್ತು ಅದು ವರ್ಣನೆಗೆ ನಿಲುಕಲಾಗದ ಆನಂದ.

ಕೈಲಾಸಂ, ಚಟಪಟ ಮಾತಿನ; ಅಂಥದೇ ಬಿರುಸಿನ ಓಡಾಟದ ಆಸಾಮಿ. ಈ ಇಳಿವಯಸ್ಸಿನಲ್ಲಿ ಆ ಪಾತ್ರ ಮಾಡಲು ಸಿಂಹ ಅವರಿಗೆ ಸಾಧ್ಯವೇ? ಮೊನ್ನೆ, ಮೇ 12ರ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕಕ್ಕೆ ಬಂದ ಎಲ್ಲರನ್ನೂ ಈ ಅನುಮಾನದ ಮುಳ್ಳು ಕಾಡುತ್ತಲೇ ಇತ್ತು. ವಯಸ್ಸಿನ ಕಾರಣದಿಂದ ಡೈಲಾಗ್ ಹೇಳುವಾಗ, ನಡೆದಾಡುವಾಗ, ಕೈಲಾಸಂ ಶೈಲಿಯಲ್ಲಿ ಡ್ಯಾನ್ಸ್ ಮಾಡಬೇಕಾಗಿ ಬಂದಾಗ ಸಿಂಹ ತಡವರಿಸಬಹುದು. ಈ ಕಾರಣದಿಂದಲೇ ನಾಟಕ ಸ್ವಲ್ಪ ಸಪ್ಪೆ ಅನ್ನಿಸಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ, ಹಾಗಾಗಲಿಲ್ಲ. ಸಿಂಹ-ಅದ್ಭುತವಾಗಿ ನಟಿಸಿದರು. ಅಲ್ಲಲ್ಲ, ಕೈಲಾಸಂ ಅವರೇ ಸಿಂಹ ಅವರ ವೇಷದಲ್ಲಿ ಬಂದು, ಕಲಾಕ್ಷೇತ್ರದ ಆ ಮೂಲೆಯಿಂದ ಈ ಮೂಲೆಯವರೆಗೂ ಪಾದರಸದಂತೆ ಓಡಾಡಿ, ತಮ್ಮ ಇಂಗ್ಲಿಷ್‌ಗನ್ನಡ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಒಂದೊಂದು ದೃಶ್ಯ ಮುಗಿದಾಗಲೂ ಇದೆಲ್ಲಾ ಕೈಲಾಸಂ, ಇದೆಲ್ಲ ಸಿಂಹ ಎಂದು ಖುಷಿಯಿಂದ ಚೀರುವಂತಾಗುತ್ತಿತ್ತು. ಒಂದು ವಿಶೇಷವೆಂದರೆ ನಾಟಕ ನಡೆದಷ್ಟೂ ಹೊತ್ತು ಸಿಂಹ ಅವರ ಮೊಗದ ತುಂಬಾ ಕೈಲಾಸಂ ಮುಖದ ಹೋಲಿಕೆಯೇ ಕಾಣುತ್ತಿತ್ತು. ಸಭಿಕರಿಗೆ ಒರಿಜನಲ್ ಸಿಂಹ, ಅವರ ಮುಖಾರವಿಂದ ಕಾಣಿಸಿದ್ದು ನಾಟಕ ಮುಗಿದ ಇಪ್ಪತ್ತು ನಿಮಿಷದ ನಂತರ! ಅದನ್ನು ಕಂಡು ಪ್ರೇಕ್ಷಕರೊಬ್ಬರು ಖುಷಿಯಿಂದ ಉದ್ಗರಿಸಿದರು: ಕನ್ನಡಕೊಬ್ಬನೇ ಕೈಲಾಸಂ ಮತ್ತು ಕನ್ನಡಕ್ಕೊಬ್ಬರೇ ಸಿಂಹ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+