38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpg195645ಪ್ರೇಮಕವಿಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ/literature/poem/2009/26-kannada-poet-ks-narasimha-swamy-turns95.htmlಪ್ರೇಮಕವಿ ಎಂದೇ ಖ್ಯಾತರಾದ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ ಪ್ರೇಮದ ವಿಷಯಗಳಲ್ಲದೆ ಉಳಿದ ವಿಷಯಗಳ ಮೇಲೂ ಅದ್ಭುತವಾದ ಕವನಗಳನ್ನು ಕಟ್ಟಿದ್ದರು. ಆದರೆ ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಮುಂದೆ ಉಳಿದ ಕವನ ಸಂಕಲನಗಳು ಮಂಕಾದವು. ಇಂದು ಕನ್ನಡ ಈ ಮಹಾನ್ ಕವಿಯ 95 ನೇ ಹುಟ್ಟುಹಬ್ಬ. ಜನ ಸಾಮಾನ್ಯರ ಕವಿಯ 'ಸಂಜೆ ಹಾಡು' ಕವನ ಸಂಕಲನದಿಂದ ಆಯ್ದ 'ಬದುಕು 34295http://kannada.oneindia.com/img/2009/01/26-ksn4.jpg195645ಪ್ರೇಮಕವಿಕಾಲವಳಿಸದ ನೆಲದ ಚೆಲುವಿಗೆ.../column/manikanth/2009/0319-remembering-ks-narasimhaswamy-love-poet.htmlನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. 35351http://kannada.oneindia.com/img/2009/03/19-ksn4.jpg195645ಪ್ರೇಮಕವಿಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ/literature/people/2009/0827-ks-narasimhaswamy-wife-venkamma-passes-away.htmlಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಸ್ತಮಾ ಮತ್ತು 38851http://kannada.oneindia.com/img/2009/08/27-ksna-venkamma.jpg195645ಪ್ರೇಮಕವಿಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ/column/manikanth/2009/0923-ks-narasimhaswamy-and-modern-lovers.htmlಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ 39341http://kannada.oneindia.com/img/2009/09/23-ksn4.jpg195647ಮೈಸೂರು ಮಲ್ಲಿಗೆಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ/literature/poem/2009/26-kannada-poet-ks-narasimha-swamy-turns95.htmlಪ್ರೇಮಕವಿ ಎಂದೇ ಖ್ಯಾತರಾದ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ ಪ್ರೇಮದ ವಿಷಯಗಳಲ್ಲದೆ ಉಳಿದ ವಿಷಯಗಳ ಮೇಲೂ ಅದ್ಭುತವಾದ ಕವನಗಳನ್ನು ಕಟ್ಟಿದ್ದರು. ಆದರೆ ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಮುಂದೆ ಉಳಿದ ಕವನ ಸಂಕಲನಗಳು ಮಂಕಾದವು. ಇಂದು ಕನ್ನಡ ಈ ಮಹಾನ್ ಕವಿಯ 95 ನೇ ಹುಟ್ಟುಹಬ್ಬ. ಜನ ಸಾಮಾನ್ಯರ ಕವಿಯ 'ಸಂಜೆ ಹಾಡು' ಕವನ ಸಂಕಲನದಿಂದ ಆಯ್ದ 'ಬದುಕು 34295http://kannada.oneindia.com/img/2009/01/26-ksn4.jpg195647ಮೈಸೂರು ಮಲ್ಲಿಗೆಕಾಲವಳಿಸದ ನೆಲದ ಚೆಲುವಿಗೆ.../column/manikanth/2009/0319-remembering-ks-narasimhaswamy-love-poet.htmlನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. 35351http://kannada.oneindia.com/img/2009/03/19-ksn4.jpg195647ಮೈಸೂರು ಮಲ್ಲಿಗೆಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ/literature/people/2009/0827-ks-narasimhaswamy-wife-venkamma-passes-away.htmlಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಸ್ತಮಾ ಮತ್ತು 38851http://kannada.oneindia.com/img/2009/08/27-ksna-venkamma.jpg195647ಮೈಸೂರು ಮಲ್ಲಿಗೆಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ/column/manikanth/2009/0923-ks-narasimhaswamy-and-modern-lovers.htmlಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ 39341http://kannada.oneindia.com/img/2009/09/23-ksn4.jpgnews"> ಕಾಲವಳಿಸದ ನೆಲದ ಚೆಲುವಿಗೆ... | Poet KS Narasimha Swamy | KSNa | Mysuru Mallige | Love - ಕಾಲವಳಿಸದ ನೆಲದ ಚೆಲುವಿಗೆ... - Kannada Oneindia

ಕಾಲವಳಿಸದ ನೆಲದ ಚೆಲುವಿಗೆ...

KS Narasimha Swamy
ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ
ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!

ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. ಅದು ಪ್ರೀತಿಯೂ ಆಗಿತ್ತು. ಅದೇ ಖುಷಿಯಲ್ಲಿ ಗೆಳತಿಯೊಂದಿಗೆ ಮಾತಿಗೆ ಕೂತು-ಸಾಯುವವರೆಗೂ ನಾವು ಜತೆಯಾಗಿಯೇ ಇರೋಣ. ಒಂದಾಗಿ ಬಾಳೋಣ. ಸುಖ-ದುಃಖ ಹಂಚಿಕೊಳ್ಳೋಣ. ಹುಸಿಮುನಿಸು ದೂರವಿಡೋಣ ಮತ್ತು ಜಗಳವನ್ನು ಆಡದೇ ಇರೋಣ ಎಂದು ಆಣೆ-ಪ್ರಮಾಣ ಮಾಡುತ್ತಿದ್ದೆವಲ್ಲ? ಹೀಗೆ ಮಾತಾಡಿಕೊಂಡ ತಾಸೆರಡು ತಾಸಿಗೇ ಯಾವುದೋ ಕಾರಣಕ್ಕೆ ಗೆಳತಿ ಮುನಿದು ಕೂತಾಗ, ರಾಜಿಗೆ ನಿಂತಿದ್ದೆವಲ್ಲ? ಕಡೆಗೂ ಆ ಗೆಳತಿ ಮುನಿಸು ಮರೆತು, ಹುಸಿಮುನಿಸು ತೋರುತ್ತಲೇ ಎದುರು ನಿಂತಾಗ ನಾವೆಲ್ಲರೂ ಹಾಡಿದ್ದ ಹಾಡೇ ಅದು-ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ, ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ!

ಜಗತ್ತಿಗೇ ಗೊತ್ತಿರುವ ಹಾಗೆ-ನಕ್ಕ ಹಾಗೆ ನಟಿಸಬೇಡ' ಹಾಡು ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಆದರೆ, ಅವರ ಬಹುಪಾಲು ಪದ್ಯಗಳನ್ನು ಓದಿದಾಗೆಲ್ಲ-ಅರೆ, ಇದು ನಮ್ಮೆದೆಯ ಪಿಸುಮಾತೇ ಅಲ್ಲವೇ? ಅದೆಷ್ಟೋ ಸಂದರ್ಭಗಳಲ್ಲಿ ಒಲಿದು ಬಂದವಳ ನೆನಪಲ್ಲಿ' ನಾವೆಲ್ಲ ಅಂಥ ಹಾಡುಗಳಲ್ಲೇ ತೇಲಿಬಂದವರಲ್ಲವೆ? ಅವಳ' ಮುಂದೆ ಮಂಡಿಯೂರಿ ಕೂತು ಬೇಡಿಕೊಂಡವರೇ ಅಲ್ಲವೆ? ನಮ್ಮೊಳಗಿನ ಹಾಡು ಅಲ್ಲೆಲ್ಲೋ ಕೂತು ಪದ್ಯ ಬರೆದ ನರಸಿಂಹಸ್ವಾಮಿಯವರಿಗೆ ಹೇಗೆ ಕೇಳಿಸಿತು? ಅಥವಾ ನಮ್ಮೊಳಗೆ ಬಂದಂಥ ಭಾವನೆ ಕೆ.ಎಸ್.ನ. ಅವರನ್ನೂ ಕಾಡಿತ್ತೇ? ಅವರು ಪ್ರತಿಯೊಂದನ್ನೂ ಅನುಭವಿಸಿ ಬರೆದರೋ ಅಥವಾ ಯಾರನ್ನೋ ಅವಾಹಿಸಿಕೊಂಡು ಬರೆದರೋ...? ಎಂಬ ಪ್ರಶ್ನೆಗಳು ಬಿಡದೆ ಕಾಡುತ್ತವೆ.

ಹೌದು. ಕೆ.ಎಸ್.ನ. ಅವರ ನಂತರ ಅವರನ್ನು ಸರಿಗಟ್ಟುವಂಥ ಇನ್ನೊಬ್ಬ ಕವಿ ಬರಲೇ ಇಲ್ಲ ಅನಿಸಿದಾಗ ಮಾತ್ರ ಅವರ ಪದ್ಯಗಳೆಲ್ಲ ಅನುಭವದ ಮಲ್ಲಿಗೆಯ ತೋಟದಲ್ಲಿ' ಅರಳಿದಂಥವೇ ಎಂಬುದು ಖಚಿತವಾಗುತ್ತದೆ. ಅವರ ಪದ್ಯಗಳು ಈಗಲೂ ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆ- ಅವರ ಪದ್ಯಗಳು ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ನೆನಪಾದಾಗ ಮಾತ್ರ ಮನಸ್ಸು ಅನಿರ್ವಚನೀಯ ಆನಂದದ ಕಡಲಲ್ಲಿ ಮಿಂದು ಉದ್ಗರಿಸುತ್ತದೆ: ಕೆ.ಎಸ್.ನ. ಅವರಿಗೆ ನಮಸ್ಕಾರ!

***
ದೀಪವೂ ನಿನ್ನದೆ, ಗಾಳಿಯೂ ನಿನ್ನದೆ- ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ-ಮುಳುಗದಿರಲಿ ಬದುಕು

ಎಂದು ಬರೆದವರು ಕೆಎಸ್‌ನ. ಸ್ವಾರಸ್ಯದ ಸಂಗತಿ ಎಂದರೆ ತಮ್ಮ ಎಲ್ಲ ಪದ್ಯಗಳಿಗೂ ಅವರು ಪತ್ನಿ ವೆಂಕಮ್ಮ ಅವರನ್ನೇ ನಾಯಕಿ' ಮಾಡಿಕೊಂಡು ಬರೆದರು. ಪದ್ಯಗಳ ಸಂಖ್ಯೆ ಹೆಚ್ಚುತ್ತ ಹೋದಂತೆಲ್ಲ ಕವಿಗೂ, ಅವರ ಪತ್ನಿಗೂ ವಯಸ್ಸಾಯಿತು. ಆದರೆ ಅವರ ಪ್ರೀತಿಗೆ ವಯಸ್ಸಾಗಲಿಲ್ಲ! ಅವರ ಕಥಾನಾಯಕಿಗೂ ವಯಸ್ಸಾಗಲಿಲ್ಲ! 80ರ ದಶಕದಲ್ಲಿ ಅನಂತನಾಗ್-ಲಕ್ಷ್ಮಿ ಜೋಡಿಯ ಅಮರಾ ಮಧುರಾ ಪ್ರೇಮ'ದ ಸಿನಿಮಾಗಳಿದ್ದವಲ್ಲ? ಬಹುಶಃ ಬದುಕಿಡೀ ಕೆಎಸ್‌ನ-ವೆಂಕಮ್ಮ ದಂಪತಿ ಹಾಗೇ ಬದುಕಿದರು.

ಅವರು ಪರಸ್ಪರರ ಮೇಲೆ ಸಿಡುಕಿದ್ದು ಯಾರಿಗೂ ಗೊತ್ತಾಗಲಿಲ್ಲ. ಸಂಕಟದ ಸಂದರ್ಭದಲ್ಲಿ ಇಬ್ಬರೂ ಬಿಕ್ಕಳಿಸಿದರು ನಿಜ. ಆಗಲೂ ಸದ್ದಾಗಲಿಲ್ಲ. ಆದರೆ, ಒಂದೊಂದು ಹೊಸ ಪದ್ಯದಲ್ಲೂ ಅವರ ದಾಂಪತ್ಯದ ನರುಗಂಪಿತ್ತು. ಕೆಎಸ್‌ನ ಅವರಿಗೆ ತಮ್ಮ ಪತ್ನಿಯ ಮೇಲೆ ಅದೆಂಥ ಮೋಹವಿತ್ತೆಂದರೆ-ಅವರು ಕನಸಿನಲ್ಲಿ ಸಹ ಆಕೆಯನ್ನೇ ಬಯಸಿದರು. ಆಕೆಯೊಂದಿಗೇ ಮಾತಾಡಿದರು. ಅದನ್ನೇ ಒಂದಿರುಳ ಕನಸಿನಲಿ ನನ್ನವಳ ಕೇಳಿದೆನು' ಎಂದು ಬರೆದೂ ಬಿಟ್ಟರು! ಅದೊಂದು ಸಂದರ್ಭದಲ್ಲಿ, ಮಾಸ್ತಿ ಅವರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಕೆ.ಎಸ್.ನ.-ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು' ಕವನ ಓದಿದಾಗ ಮಾಸ್ತಿ ಎಂಥ ಮುಗ್ಧನಪ್ಪಾ ನೀನು? ಕನಸಿನಲ್ಲೂ ನಿನ್ನ ಹೆಂಡತಿಯೇ ಬೇಕೆ?' ಎಂದು ತಮಾಷೆ ಮಾಡಿದ್ದರಂತೆ! ಪ್ರಾಮಾಣಿಕವಾಗಿ ಒಪ್ಪಿಕೊಳ್ಳೋಣ: ಕನಸಿನಲ್ಲಿ ಹೆಂಡತಿಯ ಬದಲು ಬೇರೆ ಹೆಂಗಸೇ ಬರಲಿ ಎಂಬುದು ನಮ್ಮ ನಿಮ್ಮೆಲ್ಲರ ಕಳ್ಳ ಆಸೆ. ಆದರೆ ಕನಸಿನಲ್ಲೂ ಹೆಂಡತಿಯನ್ನೇ ಬಯಸಿದರಲ್ಲ ಕೆಎಸ್‌ನ? ಅವರು ಗ್ರೇಟ್ ಮತ್ತು ಗ್ರೇಟೆಸ್ಟ್ ಅನ್ನಲು ಮತ್ಯಾವ ಸಾಕ್ಷಿ ಬೇಕು?

ಕವಿಯಾಗಿದ್ದ ಅಷ್ಟೂ ದಿನ ಕೆಎಸ್‌ನ ಯಾವ ಪಂಥಕ್ಕೂ ಸೇರಲಿಲ್ಲ. ಯಾರನ್ನೋ ಮೆಚ್ಚಿಸಲು ಬರೆಯಲಿಲ್ಲ. ಅಷ್ಟೇ ಅಲ್ಲ, ಆರು ದಶಕಗಳ ಕಾವ್ಯಯಾತ್ರೆಯಲ್ಲಿ ಪ್ರೀತಿಯ ವಿಷಯ ಬಿಟ್ಟು ಬೇರೇನನ್ನೂ ಬರೆಯಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ಅವರ ವಾರಿಗೆಯ ಕವಿಮಿತ್ರರು, ಗಂಡ-ಹೆಂಡತಿಯ ಸರಸ-ಸಲ್ಲಾಪವನ್ನೇ ಅದೆಷ್ಟು ದಿನಾಂತ ಬರೀತೀರಿ? ಬೇರೆ ಏನಾದ್ರೂ ಯೋಚಿಸಿ ಅಂದರಂತೆ! ಆಗ ಕೂಡ ಕೆಎಸ್‌ನರ ಕಾವ್ಯಸ ವಸ್ತು-ಧಾಟಿ ಬದಲಾಗಲಿಲ್ಲ. ಇತ್ತ, ಬುದ್ಧಿ ಹೇಳಿದವರೂ ತೆಪ್ಪಗಿರಲಿಲ್ಲ. ಕೆಎಸ್‌ನರನ್ನು ರೇಗಿಸಿದರು. ಪದ್ಯ ಬರೆದು ಟೀಕಿಸಿದರು. ಯಾವಾಗ್ಲೂ ಅದೇ ಹೂವು, ಚಂದ್ರ, ಮಲ್ಲಿಗೆಯ ಕುರಿತೇ ಬರೀತಾನಲ್ಲಪಾ, ಅವನ ಅನುಭವ ತೆಳವು' ಅಂದೂಬಿಟ್ಟರು. ಈವಾಗಿನ ಕವಿಗಳಾಗಿದ್ದರೆ ಒಂದು ಪತ್ರಿಕಾಗೋಷ್ಠಿ ಕರೆದು ಟೀಕಿಸಿದವರ ಜನ್ಮ ಜಾಲಾಡುತ್ತಿದ್ದರೋ ಏನೋ? ಆದರೆ ಕೆಎಸ್‌ನ ಹಾಗೆ ಮಾಡಲಿಲ್ಲ, ಬದಲಿಗೆ-ಇವನ ಅನುಭವ ತೆಳುವು' ಎಂದ ಟೀಕೆಗೆ ನಕ್ಕೆ/ ಎಂಟು ಮಕ್ಕಳು ನನಗೆ, ಉತ್ತರಿಸಿದೆ/ ಅಂದವರ ಬಾಯಿಗಿದೊ ನಾನು ಬೇವಿನ ಚಕ್ಕೆ/ ನನ್ನ ದನಿಯನು ಕೂಡ ಎತ್ತರಿಸಿದೆ' ಎಂದು ಬರೆದರು!

****
ಒಂದು ಒಳ್ಳೆಯ ಪದ್ಯ ಬರೆದು ಮರುಕ್ಷಣವೇ ಅವರು ಇನ್ನೊಂದು ಪದ್ಯ ಕುರಿತು ಧ್ಯಾನಿಸುತ್ತಿದ್ದರು. ಕೆಎಸ್‌ನ ಅವರೊಳಗಿದ್ದ ಕವಿ ಅದೆಷ್ಟು ದೂರದೃಷ್ಟಿ ಹೊಂದಿದ್ದ ಅಂದರೆ- ಅವರು ನಾಲ್ಕು ದಶಕಗಳ ಹಿಂದೆ ಬರೆದ ಪದ್ಯಗಳೇ ಇಂದಿನ ತರುಣ-ತರುಣಿಯರ ಎದೆಯಾಳದ ಹಾಡಾಗಿವೆ. ಅವರ ದಾಂಪತ್ಯ ಗೀತೆ ಮನೆ ಮನೆಯ ಮಾತಾಗಿದೆ. ಅವರ ಕವನಗಳಲ್ಲಿನ ಕೋರಿಕೆ ಎಲ್ಲ ಪ್ರೇಮಾತ್ಮಗಳ ಮನದ ಬೇಡಿಕೆಯೂ ಆಗಿದೆ!

ಕೆಎಸ್‌ನ ಈಗ ನಮ್ಮೊಂದಿಗಿಲ್ಲ ಅಂದರೆ, ಲೋಕ ಒಪ್ಪುವುದಿಲ್ಲ. ಎಲ್ಲಿಯವರೆಗೆ ಈ ಜಗತ್ತಿನಲ್ಲಿ ಮಲ್ಲಿಗೆಯ ಕಂಪು, ಒಲವಿನ ಮಾಧುರ್‍ಯ, ಪಿಸುಮಾತಿನ ಸಂವೇದನೆ, ಪ್ರೀತಿಯ ಮನಸುಗಳ ಕಲರವ ಇರುತ್ತದೋ ಅಲ್ಲಿಯವರೆಗೂ ಕೆಎಸ್‌ನ ಇದ್ದೇ ಇರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೆಂಡತಿಯನ್ನು ನೆನೆದು-ನೆನೆಯುತ್ತ ನಿನಗಲ್ಲಿ ತುಂಬು ನಿದ್ದೆಯು ಬರಲಿ/ ಹೊಂಗನಸು ನಿದ್ದೆಯಲಿ ಕಂಡು ಬರಲಿ/ ನೀ ಮುಡಿದ ಹೂವು ಬಾಡದೆ ಇರಲಿ, ಸುಖವಿರಲಿ/ ನಿನ್ನೊಲವೆ ನಿನ್ನನ್ನು ಕಾಪಾಡಲಿ' ಎಂದು ಬರೆದವರು ಅವರು.

ಅವರನ್ನು ನಿನ್ನ ಪ್ರೀತಿಗೆ ಅದರ ರೀತಿಗೆ/ ಕಣ್ಣ ಹನಿಗಳೆ ಕಾಣಿಕೆ/ ಕಾಲವಳಿಸದ ನೆಲದ ಚಲುವಿಗೆ/ ನಿನ್ನ ಪ್ರೀತಿಯೆ ಹೋಲಿಕೆ' ಎಂಬ ಅವರದೇ ಪದ್ಯದೊಂದಿಗೆ ನೆನಪಿಸಿಕೊಂಡು ನಮಸ್ಕರಿಸೋಣ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+