ಶುಕ್ರನ ನಕ್ಷತ್ರ ಸಂಕ್ರಮಣ ಈ ರಾಶಿಯವರಿಗೆ ಅಶುಭ :ಕಾಡುವುದು ಸೋಲಿನ ಭೀತಿ, ಸಂಬಂಧಗಳಲ್ಲಿ ಮೂಡುವುದು ಬಿರುಕು

ಜುಲೈ 16, 2026ರ ಗುರುವಾರ ಶುಕ್ರನು ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶುಕ್ರನ ಸ್ಥಾನ ಬದಲಾವಣೆ, ಸಂಚಾರ ಎಲ್ಲಾ 12 ರಾಶಿಯವರ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಹಾಗಾಗಿ ಶುಕ್ರ ಸಂಕ್ರಮಣಕ್ಕೆ ವಿಶೇಷ ಮಹತ್ವ ಇದೆ. ಈ ಬಾರಿ ಶುಕ್ರನ ನಕ್ಷತ್ರ ಸಂಕ್ರಮಣವಾಗುತ್ತಿರುವುದು ಕೂಡಾ ನಾಲ್ಕು ರಾಶಿಯವರ ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚು ಮಾಡಬಹುದು.

ಶುಕ್ರನನ್ನು ಶುಭ ಗ್ರಹವೆಂದು ಕರೆಯಲಾಗುತ್ತದೆ. ಹಾಗಂತ ಶುಕ್ರ ಎಂದರೆ ಕೇವಲ ಶುಭವನ್ನೇ ಕರುಣಿಸುವ ಗ್ರಹವಲ್ಲ. ಅದರ ಚಲನೆಗೆ ಆಧಾರವಾಗಿ ಅಶುಭ ಫಲವನ್ನೂ ನೀಡುತ್ತಾನೆ. ಪ್ರೀತಿ ಮತ್ತು ಸಂಪತ್ತಿನ ಕರ್ತನಾದ ಈ ಗ್ರಹವು ಕೆಲವೊಮ್ಮೆ ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಕೂಡಾ ಬೀರಬಹುದು. ಶುಕ್ರನ ರಾಶಿ ನಕ್ಷತ್ರ ಬದಲಾವಣೆ ಕೆಲವು ರಾಶಿಯವರ ಕೆಟ್ಟ ದಿನಗಳ ಆರಂಭಕ್ಕೆ ಸಾಕ್ಷಿಯಾಗಬಹುದು.

Venus Star Transit

ಜ್ಯೋತಿಷ್ಯದ ಪ್ರಕಾರ, ಶುಕ್ರನು ಜುಲೈ 16, 2026 ರಂದು ಅಂದರೆ ನಾಳೆ ಸಂಜೆ 7:11 ಕ್ಕೆ ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜುಲೈ 20, 2026 ರವರೆಗೆ ಇದೇ ನಕ್ಷತ್ರದಲ್ಲಿ ಶುಕ್ರನ ಸಂಚಾರ ಇರಲಿದೆ. ಶುಕ್ರನು ತನ್ನದೇ ಆದ ಪೂರ್ವಫಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸುವುದು ಬಹಳ ಶುಭ ಜ್ಯೋತಿಷ್ಯ ಘಟನೆ. ಆದರೂ ಈ ಬಾರಿ ಶುಕ್ರನ ಈ ನಕ್ಷತ್ರ ಬದಲಾವಣೆಯು ನಾಲ್ಕು ರಾಶಿಯವರಿಗೆ ಮಾತ್ರ ಸವಾಲಿನಿಂದ ಕೂಡಿರಲಿದೆ. ಎಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೂ ಸಾಕಾಗುವುದಿಲ್ಲ. ಶುಕ್ರನ ನಕ್ಷತ್ರದಲ್ಲಿನ ಬದಲಾವಣೆಯಿಂದಾಗಿ ಈ ನಾಲ್ಕು ರಾಶಿಯವರು ತೊಂದರೆಗಳನ್ನು ಎದುರಿಸಬಹುದು. ಕಷ್ಟಗಳು ಹೆಚ್ಚಾಗಬಹುದು.

ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಬೇಕು? ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡಗಿದೆ ಬಣ್ಣಗಳ ಅದೃಷ್ಟದ ರಹಸ್ಯ
ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಬೇಕು? ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡಗಿದೆ ಬಣ್ಣಗಳ ಅದೃಷ್ಟದ ರಹಸ್ಯ

ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ಆಪತ್ತು:

ವೃಷಭ ರಾಶಿ (Taurus):

ಶುಕ್ರನ ನಕ್ಷತ್ರ ಬದಲಾವಣೆಯ ಫಲವಾಗಿ ವೃಷಭ ರಾಶಿಯವರ ತೊಂದರೆ ಹೆಚ್ಚಾಗಬಹುದು. ಯಾವ ಕೆಲಸ ಮಾಡುವಾಗಲೂ ಮನಸ್ಸು ಗೊಂದಲದಲ್ಲಿಯೇ ಇರುವುದು. ಚಂಚಲ ಮನಸ್ಸಿನಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕಷ್ಟ ನಷ್ಕ್ಕೆ ದಾರಿ ಮಾಡಿಕೊಡುವುದು. ಮನೆಯಲ್ಲಿ ಕೂಡಾ ಪರಿಸ್ಥಿತಿ ಸರಿ ಇರುವುದಿಲ್ಲ. ಜಗಳ ಕಿರಿಕಿರಿ ಹೆಚ್ಚಾಗಬಹುದು. ಸಣ್ಣಪುಟ್ಟ ವಿಷಯಗಳನ್ನು ಕೂಡಾ ನಿರ್ಲಕ್ಷಿಸಬೇಡಿ. ಕೆಲಸದಲ್ಲಿ ಜಾಗರೂಕರಾಗಿರಿ. ನೀವು ಮಾಡುವ ಒಂದು ತಪ್ಪು ಕೂಡಾ ನಿಮ್ಮ ಕೆಲಸಕ್ಕೆ ಅಪಾಯವನ್ನುಂಟು ಮಾಡಬಹುದು.

ಕನ್ಯಾ ರಾಶಿ (Virgo):

ಶುಕ್ರನ ಸಂಚಾರವು ಕನ್ಯಾ ರಾಶಿಯವರಿಗೆ ಸವಾಲಿನಿಂದ ಕೂಡಿರಬಹುದು. ಕುಟುಂಬದಲ್ಲಿ ಮನಸ್ತಾಪ, ಜಗಳ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿನ ಅಂತರ ಹೆಚ್ಚಾಗುವ ಸಾಧ್ಯತೆಯೂ ಇದೆ. ನಿಮ್ಮ ಸಂಗಾತಿಯೊಂದಿಗೆ ವಾದ ವಿವಾದಗಳು ಉಂಟಾಗಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಕೋಪದ ಕೈಗೆ ಬುದ್ದಿ ಕೊಡಲು ಹೋಗಬೇಡಿ. ಮಾನಸಿಕ ಶಾಂತಿ ಹಾಳಾಗುವುದು. ನೆಮ್ಮದಿ ಇಲ್ಲದಂತಾಗುವುದು. ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ, ಏಕೆಂದರೆ ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಅತ್ತೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಈ ರಾಶಿಯ ಹೆಣ್ಣುಮಕ್ಕಳು
ಅತ್ತೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಈ ರಾಶಿಯ ಹೆಣ್ಣುಮಕ್ಕಳು

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರವು ನಷ್ಟವನ್ನು ಉಂಟುಮಾಡಬಹುದು. ವೃಶ್ಚಿಕ ರಾಶಿಯವರು ಜಾಗರೂಕರಾಗಿರಬೇಕು. ಆರ್ಥಿಕ ಸ್ಥಿತಿ ಒಮ್ಮೆಲೆ ಬದಲಾಗಬಹುದು. ಹಣಕಾಸಿನ ಸಮಸ್ಯೆ ಎದುರಾಗಬಹುದು. ಎಲ್ಲವೂ ಸರಿ ಇದೆ ಅಂದುಕೊಳ್ಳುವಾಗಲೇ ತೊಂದರೆ ಆಗಬಹುದು. ವ್ಯವಹಾರಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಸಣ್ಣ ನಿರ್ಲಕ್ಷ್ಯವು ಕೂಡಾ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ತಾಳ್ಮೆಯಿಂದ ಮುಂದುವರೆಯಿರಿ.

ಮೀನ ರಾಶಿ (Pisces):

ಮೀನ ರಾಶಿಯಲ್ಲಿ ಶುಕ್ರನ ಸಂಚಾರವು ನಿಮಗೆ ನಿರಾಶಾದಾಯಕ ಸಮಯವನ್ನು ತರಬಹುದು. ವ್ಯವಹಾರದಲ್ಲಿ ನಷ್ಟವೇ ಹೆಚ್ಚಾಗುವದ ಸೂಚನೆ ಇದೆ. ಆದ್ದರಿಂದ ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿರಿ. ಆರ್ಥಿಕ ಒತ್ತಡ, ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗಬಹುದು. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಕೌಟುಂಬಿಕ ವಿವಾದಗಳನ್ನು ತಪ್ಪಿಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+