ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?
ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ಬಹಳಷ್ಟು ಜನರಿಂದ ಚಾಪ್ಟರ್ ಅನ್ನಿಸಿಕೊಂಡಿರುತ್ತಾರೆ. ಏಕೆಂದರೆ ಅಷ್ಟೊಂದು ಧೈರ್ಯವಂತರು ಮತ್ತು ಬುದ್ಧಿವಂತರಿವರು. ಆದರೆ ಕೆಲವೊಮ್ಮೆ ಬುದ್ಧಿಗೇಡಿಗಳಾಗುವುದು ಇವರ ವೀಕ್ನೆಸ್. ಇಷ್ಟು ದಿನ ಗುರುಬಲದಿಂದ ಸ್ವಲ್ಪ ಲೈಫ್ ಸೆಟ್ಲ್ ಮಾಡಿಕೊಂಡಿದ್ದರು. ಈಗ ಗುರುಬಲ ಕೈ ಕೊಡುತ್ತಿರುವುದರಿಂದ ಲೈಫೇ ಡಿಸ್ಟರ್ಬ್ ಆಗ್ತಿದೆಯಲ್ಲಾ ಅನ್ನಿಸಲಾರಂಭಿಸುತ್ತದೆ.
ಇಷ್ಟು ದಿನ ಏನೇ ಕೇಳಿದರೂ "ನಾನೇಯಾ, ಇಲ್ಲಿ" ಎಂದವರು ಈಗ ನಾನ್ಯಾರು ಅಂದುಕೊಳ್ಳುವಂತಾಗುತ್ತದೆ. ಹೌದು, ಗುರುವಿನ ಪ್ರಭಾವವೇ ಅಂಥಹದ್ದು. ಸಾಡೇಸಾತಿಯ ಶನಿಕಾಟದಲ್ಲಿದ್ದರೂ ಸ್ವಲ್ಪ ಗುರುವಿನ ಕೃಪಾಕಟಾಕ್ಷ ಪಡೆದುಕೊಂಡಿದ್ದ ಇವರು ಈಗ ಗುರುವಿನ ಮಹತ್ವ ಅರಿತುಕೊಳ್ಳುವ ಸುಸಮಯ.
ಕಳೆದ ವರ್ಷದಿಂದ ನವಮ ಸ್ಥಾನದಲ್ಲಿದ್ದ ಗುರು ತನ್ನ ಉಚ್ಚ ಕ್ಷೇತ್ರದಿಂದ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾನೆ. ಈಗ ಅವನು ಸಿಂಹ ರಾಶಿಗೆ ಪ್ರವೇಶ ಮಾಡಿ ದಶಮನಾಗಿದ್ದಾನೆ. ಈ ಕ್ಷೇತ್ರದಲ್ಲಿ ಗುರುವು ವೃಶ್ಚಿಕ ರಾಶಿಯವರಿಗೆ ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚಿಸುತ್ತಾನೆ. ಮೇಲಾಗಿ ವೃಶ್ಚಿಕದವರಿಗೆ ಸಾಡೇಸಾತಿಯ ಶನಿಕಾಟ ಜೊತೆಗೆ ಗುರುಬಲವಿಲ್ಲದೇ ಒದ್ದಾಟದ ಪರಿಸ್ಥಿತಿ ಅನುಭವಿಸುವ ಸಮಯ. [ಗುರುಬಲ : ತುಲಾ ರಾಶಿಗೆ ಸೂಪರ್]

ಮುಂಬರುವ ಒಂದು ವರ್ಷ ಪರ್ಯಂತ ಹಾಕಿಕೊಂಡ ಯೋಜನೆಗಳು ನಿಧಾನವಾಗಲಾರಂಭಿಸುತ್ತವೆ. ಕಾರಣ ಹುಡುಕಿದರೂ ಗೊತ್ತಾಗುವುದಿಲ್ಲ. ಎಲ್ಲಿ ತೊಂದರೆಯಾಗಿತ್ತು ಎಂಬುದು ತಿಳಿಯುವುದಿಲ್ಲ. ಕುಟುಂಬದವರಂತೂ ಹಳೆಯ ತಪ್ಪುಗಳನ್ನು ಹುಡುಕಿಕೊಂಡು ಬಂದು ಕೆದಕಲಾರಂಭಿಸುತ್ತಾರೆ. ದೇಹಾರೋಗ್ಯದಲ್ಲೂ ಸ್ವಲ್ಪ ವ್ಯತ್ಯಾಸವಾಗಲಾರಂಭಿಸುತ್ತದೆ.
ಕೆಲವರಿಗೆ ಕೆಲಸದ ನಿಮಿತ್ತ ಪರಸ್ಥಳಗಳಲ್ಲಿ ವಾಸ ಮಾಡುವ ಸಂದರ್ಭ ಒದಗಿ ಬರುತ್ತದೆ. ಜೊತೆಗಿದ್ದವರೇ ಕಣ್ಣಿಡುವುದರಿಂದ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದರಲ್ಲೇ ಕಾಲಹರಣ ಮಾಡಬೇಕಾಗುತ್ತದೆ. ಯಾವುದರಲ್ಲೂ ಏಕಾಗ್ರತೆ ಸಾಧಿಸಲು ಆಗುವುದಿಲ್ಲ. ಹೀಗಾಗಿ ಮನಸ್ಸಿನ ಹತೋಟಿ ತಪ್ಪುತ್ತದೆ. [ರಾಶಿಗಳಿಗನುಗುಣವಾಗಿ ಗುರುಬಲ ಹೀಗಿದೆ]
ಜೊತೆ ಜೊತೆಗೆ ಶನಿಯು ಏಳರಾಟದಲ್ಲಿ ಮುನ್ನುಗ್ಗುತ್ತಿರುವುದರಿಂದ ಅದೂ ಜನ್ಮರಾಶಿಯಲ್ಲೇ. ಹೀಗಾಗಿ ಇತ್ತ ಶನಿಕಾಟವು ಹೆಚ್ಚುವುದು ಅತ್ತ ಗುರುಬಲವೂ ಹೋಗುತ್ತಿರುವುದು ಒಂಥರಾ ಬೇಸರಕರ ಸಂಗತಿಗಳೇ. ಆದರೆ, ಸ್ವಲ್ಪ ಆಲಸ್ಯತನ ಮತ್ತು ಸೋಮಾರಿತನವನ್ನು ಬಿಡುವುದು ಈ ರಾಶಿಯವರಿಗೆ ಸ್ವಲ್ಪ ನೆಮ್ಮದಿಯನ್ನು ತರಬಹುದು.
ಪರಿಹಾರವೇನು? : ಕೆಲ ರಾಶಿಯವರಿಗೆ ಶನಿಕಾಟವಿದ್ದರೂ ಗುರುಬಲವಿದೆ, ಕೆಲವರಿಗೆ ಗುರುಬಲ ಇಲ್ಲದಂತಾಗಿದೆ. ಇಂಥವರು ಏನು ಮಾಡಬೇಕು? ಈ ತೊಂದರೆಗಳಿಗೆಲ್ಲ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು? ಈ ಕುರಿತು ಈ ಸರಣಿ ಮುಗಿದ ನಂತರ ಒಂದು ಲೇಖನ ಪ್ರಕಟವಾಗಲಿದೆ. ನಿರೀಕ್ಷಿಸಿ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications