Darshan Thoogudeepa Horoscope: ನಟ ದರ್ಶನ್‌ಗೆ ಶನಿ ಕಾಟ: ಗ್ರಹಗತಿಗಳಿಂದ ಗಂಡಾಂತರ- ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ!
ಸಿನಿಮಾ, ನಟನೆ, ಮಾತು, ಗತ್ತಿಗೆ ಹೆಸರಾದ ನಟ ದರ್ಶನ್ ಈಗ ಪೊಲೀಸ್ ವಶದಲ್ಲಿದ್ದಾರೆ. ಸದಾ ವಿವಾದದ ಸುಳಿಯಲ್ಲಿ ಸಿಲುಕಿರುವ ದರ್ಶನ್‌ಗೆ ಅದ್ಯಾಕೋ ಸಮಯ ಸರಿಯಾಗಿಲ್ಲ. ಯಾಕೆ ಹೀಗಾಯಿತು? ರಾಜನಂತಿದ್ದ ನಟ ವಿವಾದದ ಸುಳಿಯಲ್ಲಿ ಯಾಕಾಗಿ ಸಿಲುಕಿಕೊಂಡರು? ದರ್ಶನ್ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿಗಳು ಏನು ಹೇಳುತ್ತಾರೆ ಎಂದು ತಿಳಿಯೋಣ.
ಎಂಥಹ ಕಠಿಣ ಡೈಲಾಗ್ ಇರಲಿ ತಮ್ಮದೇ ಶೈಲಿಯಲ್ಲಿ ಹೇಳುತ್ತಾ ಅಭಿಮಾನಿಗಳನ್ನು ರಂಜಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆರಂಭದಲ್ಲಿ ಸಣ್ಣ ಪುಟ್ಟ ಸಿನಿಮಾ ಮಾಡಿ ಈಗ ಸಾಗರದಂತೆ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಅವರ ಯಾವುದೇ ಸಿನಿಮಾ ಬರಲಿ ಹಿಟ್ ಆಗುವಷ್ಟು ದರ್ಶನ್ ಬೆಳೆದು ನಿಂತಿದ್ದಾರೆ. ಅವರ ಸಿನಿ ಜರ್ನಿ ಬೆಳೆದಂತೆ ಅವರ ವೈಯಕ್ತಿಕ ವಿಚಾರಗಳು ಸುದ್ದಿಯಲ್ಲಿವೆ. ಹಾಗಾದರೆ ದರ್ಶನ್ ವಿವಾದದಲ್ಲಿ ಯಾಕಾಗಿ ಸಿಲುಕಿಕೊಂಡರು?

ದರ್ಶನ್ ಒಬ್ಬ ಖ್ಯಾತ ನಟ. ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅದೆಷ್ಟೋ ಜನ ಅವರ ಹೆಸರು ಹಾಗೂ ಚಿತ್ರವನ್ನು ದೇಹದ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ದರ್ಶನ್ ಅಂದರೆ ಸಾಕು ಪ್ರಾಣ ಬಿಡುವಷ್ಟು ಹತ್ತಿರದಲ್ಲಿ ಅಭಿಮಾನಿಗಳು ಅವರಿಗಿದ್ದಾರೆ. ಆದರೆ ದರ್ಶನ್ ವೈವಾಹಿಕ ಜೀವನ ಸರಿಯಾಗಿಲ್ಲ. ಇದು ದರ್ಶನ್ ಅವರಿಗೆ ಬಹುದೊಡ್ಡ ಕಪ್ಪು ಚುಕ್ಕೆಯಾಗಿದೆ. ಹಾಗಾದರೆ ದರ್ಶನ್ ಜೀವನದಲ್ಲಿ ಆಗುತ್ತಿರುವ ಸಮಸ್ಯೆಗಳೇನು? ಅವರ ಗ್ರಹಗತಿಗಳು ಹೇಗಿವೆ? ಇದಕ್ಕೂ ಮೊದಲು ದರ್ಶನ್ ಹುಟ್ಟಿದ್ದು ಯಾವಾಗ ಎಲ್ಲಿ ತಿಳಿಯೋಣ..
ಹೆಸರು : ದರ್ಶನ್ ತೂಗುದೀಪ್
ಹುಟ್ಟಿದ ದಿನಾಂಕ: ಗುರುವಾರ, ಫೆಬ್ರವರಿ 17, 1977
ಹುಟ್ಟಿದ ಸಮಯ: 12:00:00
ಹುಟ್ಟಿದ ಸ್ಥಳ: ಮೈಸೂರು
ರೇಖಾಂಶ: 76 E 37
ಅಕ್ಷಾಂಶ: 12 N 18
ಸಮಯ ವಲಯ (Zone): 5.5
ದರ್ಶನ್ ಜಾತಕದಲ್ಲಿ ಶನಿ ಪ್ರವೇಶ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರದ್ದು ಅದ್ಬುತ ಜೋಡಿ. ಈ ಜೋಡಿಯನ್ನು ನೋಡಿ ದರ್ಶನ್ ಅಭಿಮಾನಿಗಳು ಇದ್ದರೆ ಹೀಗಿರಬೇಕು ಅಂದುಕೊಳ್ಳುತ್ತಾರೆ. ಅದೆಷ್ಟೋ ಅಭಿಮಾನಿಗಳು ಈ ಜೋಡಿಯನ್ನೇ ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಆದರೆ ಈ ಜೋಡಿ ಈಗ ದೂರವಾಗಿ ಹೋಗಿದೆ. ವಿಜಯಲಕ್ಷ್ಮಿ ಹಾಗೂ ದರ್ಶನ್ ನಡುವೆ ಬಿರುಕು ಉಂಟಾಗಿ ಡಿವೋರ್ಸ್ ತೆಗೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಇದಕ್ಕೆ ದರ್ಶನ್ ಜಾತಕದಲ್ಲಿ ಶನಿ ಪ್ರವೇಶವಾಗಿರುವುದು. ಹೀಗಾಗಿ ದರ್ಶನ್ ಹಾದಿಗಳು ಇನ್ನುಮುಂದೆ ಸುಗಮವಾಗಿಲ್ಲ.
ಹೌದು.. ದರ್ಶನ್ ಪತ್ನಿ ಮೇಲೆ ಕೈ ಮಾಡಿದ್ದಾರೆ, ದರ್ಶನ್ ಗಲಾಟೆ ಮಾಡಿಕೊಂಡಿದ್ದಾರೆ, ದರ್ಶನ್ ವಿವಾಹೇತರ ಸಂಬಂಧದಲ್ಲಿ ಇದ್ದಾರೆ, ದರ್ಶನ್ ತಪ್ಪು ಮಾತುಗಳನ್ನಾಡಿದ್ದಾರೆ ಹೀಗೆ ಅವರ ಮೇಲಿದ್ದ ಆರೋಪಗಳು ಒಂದಲ್ಲಾ ಎರಡಲ್ಲ. ಇದೆಲ್ಲದರಿಂದ ದರ್ಶನ್ ಸುಲಭವಾಗಿ ಹೊರ ಬಂದಿದ್ದು. ಆದರೀಗ ಅವರು ಸುಲಭವಾಗಿ ಹೊರಬರುವುದು ಸಾಧ್ಯವಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.
ಯಾಕೆಂದರೆ ದರ್ಶನ್ ಗ್ರಹಗತಿಗಳು ಸರಿಯಾಗಿಲ್ಲ. ಅವರ ಜಾತಕದಲ್ಲಿ ಶನಿ ಕಾಟ ಶುರುವಾಗಿದೆ. ಸಾಡೇಸಾತ್ ಆರಂಭವಾಗಿದೆ. ಹೀಗಾಗಿ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಸುಲಭವಾಗಿ ಹೊರಬರಲು ಸಾಧ್ಯವಿಲ್ಲ ಎನ್ನುತ್ತಾರೆ ಖ್ಯಾತ ಜ್ಯೋತಿಷಿಗಳು. ಹೀಗಾಗಿ ದರ್ಶನ್ ಅವರಿಗೆ ಸಂಕಷ್ಟದ ಸಮಯಗಳು ಆರಂಭವಾಗಿವೆ ಅಂತಲೇ ಅರ್ಥ.

ನಟನ ಮೇಲೆ ನೂರಾರು ಆರೋಪಗಳು
ಅಲ್ಲದೇ ದರ್ಶನ್ ಮೇಲೆ ಆರೋಪಗಳು ಹೆಚ್ಚಾಗಲಿವೆ. ಅವರಿಗೆ ಹಿಂದೆ ಇದ್ದ ಸಹಕಾರ ಈ ಪ್ರಕರಣದಲ್ಲಿ ಸಿಗುವುದು ಕಷ್ಟ. ಗ್ರಹಗತಿಗಳು ಅವರ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿ ಇಲ್ಲದ ಕಾರಣ ಅವರಿಗೆ ಮುಂದಿನ ದಿನಗಳು ತುಂಬಾ ಕಠಿಣವಾಗಿರುತ್ತವೆ. ಅವರು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ.
ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. ಅವರು ಮುಂಬರುವ ಸಿನಿಮಾಗಳು ನಿರೀಕ್ಷೆಯಂತೆ ಕೈಹಿಡಿಯುವ ಸಾಧ್ಯತೆ ತೀರಾ ಕಡಿಮೆ ಇದೆ. ವೈಯಕ್ತಿಕ ಕಾರಣಗಳಿಗಾಗಿ ದರ್ಶನ್ ಮೇಲೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಅವರು ಮೊದಲಿನಂತಾಗಲು ತುಂಬಾ ಶ್ರಮ ವಹಿಸಬೇಕು ಎನ್ನುತ್ತದೆ ಜ್ಯೋತಿಷ್ಯ.
ದರ್ಶನ್ ಕಾರಿನ ನಂಬರ್ ಸರಿಯಿಲ್ಲ- ಆರ್ಯವರ್ಧನ ಗುರೂಜಿ
ಅಲ್ಲದೆ ದರ್ಶನ್ ಕಾರಿನ ನಂಬರ್ ಡೆಂಜರ್ ನಂಬರ್ ಎನ್ನುತ್ತಾರೆ ಆರ್ಯವರ್ಧನ ಗುರೂಜಿ. KA 04 NA 0006 ದರ್ಶನ್ ಕಾರಿನ ನಂಬರ್. ಇದರಲ್ಲಿ ಬರುವ ಸಂಖ್ಯೆ '6' ತುಂಬಾ ತೊಂದರೆಯನ್ನು ಉಂಟುಮಾಡುತ್ತದೆ. ಅಪಘಾತ, ಕಾರಿಗೆ ಡ್ಯಾಮೇಜ್ ಆಗಬಹುದು. ಕಾರಿನ ಒಳಗಿರುವವರಿಗೂ ತೊಂದರೆಯಾಗಬಹುದು.
ಡಿಕೆ ಶಿವಕುಮಾರ್ ಅವರು ಈ ಸಂಖ್ಯೆಯ ಕಾರನ್ನು ಹೊಂದಿದ್ದರು. ಕಾಲನಂತರದಲ್ಲಿ ಅವರು ಈ ನಂಬರ್ ಕಾರನ್ನು ಬದಲಾಯಿಸಿದರು. ಅಲ್ಲದೆ ರೇವಣ್ಣ ಕಾರ್ ನಂಬರ್ ಅಲ್ಲೂ '6' ಇದೆ. ಹೀಗಾಗಿ ಸಂಖ್ಯೆ '6' ಇಂಗ್ಲಿಷ್ ರೆಟರ್ 'R' ತುಂಬಾ ಜಾಗರೂಕತೆಯಿಂದ ಹ್ಯಾಂಡಲ್ ಮಾಡಬೇಕು. ಇದು ಅಪಾಯದ ನಂಬರ್ ಆಗಿದೆ ಎನ್ನುತ್ತಾರೆ.
ಆರ್ಆರ್ ನಗರದಲ್ಲಿ ಮನೆಯಿದ್ದರೆ ಸಮಸ್ಯೆ
ಈ ಹಿಂದೆ ಖ್ಯಾತ ಜ್ಯೋತಿಷಿ ಆರ್ಯವರ್ಧನ ಗುರೂಜಿ ಅವರು ನುಡಿದ ಭವಿಷ್ಯದಲ್ಲಿ ಆರ್‌ಆರ್‌ನಗರದಲ್ಲಿ ಮನೆ ಇರುವವರಿಗೆ ಗಂಡಾಂತರ ಇದೆ. ಅವರು ಒಂದಿಲ್ಲಾ ಒಂದು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಯಾಕೆಂದರೆ ಆ ನಗರದ ದಿಕ್ಕು ಸರಿಯಾಗಿಲ್ಲ. ಆ ಲೇಔಟ್ ಮಾಡಿದವರ ಮೇಲೆ ಈ ಬಗ್ಗೆ ಜನ ಪ್ರಶ್ನೆ ಮಾಡಿದ್ದರು. ಆರ್‌ಆರ್‌ನಗರದಲ್ಲಿ ಇರುವ ಮನೆಗಳ ದಿಕ್ಕು ಸರಿಯಾಗಿ ಇಲ್ಲ ಎಮದು ಹೇಳಿದ್ದರು. ಉದಾಹರಣೆಯಾಗಿ ಗುರೂಜಿ ದರ್ಶನ್ ಅವರನ್ನು ತೆಗೆದುಕೊಂಡಿದ್ದರು.
ಈಗ ಈ ಹೇಳಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ದರ್ಶನ್ ಒಂದಲ್ಲಾ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಏನಾಗಲಿದೆ? ದರ್ಶನ್ ಸುಲಭವಾಗಿ ಹೊರಬರುತ್ತಾರೆ? ಎಂದಿನಂತಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications