ಹಣಕಾಸು ವಲಯದಲ್ಲೂ AI ಅಳವಡಿಕೆಗೆ ಆರ್‌ಬಿಐ ಸಮಿತಿ ಶಿಫಾರಸು
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಈಗಾಗಲೇ ಎಲ್ಲ ಕ್ಷೇತ್ರಗಳಿಗೆ ಕಾಲಿಟ್ಟಿದೆ. ಈಗ ಭಾರತದಲ್ಲಿ ಹಣಕಾಸು ವಲಯವನ್ನೂ ಪ್ರವೇಶಿಸಿದ್ದು, ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಮಿತಿ ಶಿಫಾರಸು ಮಾಡಿದೆ. ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯನ್ನು ಉತ್ತೇಜಿಸಲು ಆರ್‌ಬಿಐ ರಚಿಸಿದ ಸಮಿತಿಯು ಹಣಕಾಸು ವಲಯದ ದತ್ತಾಂಶ ಮೂಲಸೌಕರ್ಯ , ದತ್ತಾಂಶ ಆಡಳಿತ, ಗ್ರಾಹಕರ ರಕ್ಷಣೆ ಮತ್ತು ಸೈಬರ್ ಭದ್ರತಾ ಕ್ರಮಗಳು ಸೇರಿದಂತೆ ಹಲವಾರು ಕ್ರಮಗಳನ್ನು ಶಿಫಾರಸು ಮಾಡಿದೆ.
ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್‌ಬಿಐ ಸಮಿತಿ ರಚಿಸಿತ್ತು. ಆಗ ಈ ಪ್ರಸ್ತಾಪಗಳನ್ನು ಅದು ಮುಂದಿಟ್ಟಿತು. ಈ ಸಮಿತಿಯು ಆರು ಸ್ತಂಭಗಳನ್ನು ಆಧರಿಸಿದ 26 ಸಲಹೆಗಳನ್ನು ನೀಡಿದೆ. ಇದರಲ್ಲಿ ಮೂಲಸೌಕರ್ಯ, ನೀತಿ, ಸಾಮರ್ಥ್ಯ, ಆಡಳಿತ, ರಕ್ಷಣೆ ಕೂಡ ಸೇರಿದೆ.

ಈ ಸಮಿತಿಯು ಎಐ ನಾವೀನ್ಯತೆ ಸ್ಯಾಂಡ್‌ಬಾಕ್ಸ್ ಸ್ಥಾಪನೆ, ಸ್ಥಳೀಯ ಹಣಕಾಸು ವಲಯ-ನಿರ್ದಿಷ್ಟ ಎಐ ಮಾದರಿಗಳ ಅಭಿವೃದ್ಧಿ, ಹೊಂದಾಣಿಕೆ ಮತ್ತು ಸಕ್ರಿಯಗೊಳಿಸುವ ನೀತಿಗಳು, ಎಐ ಹೊಣೆಗಾರಿಕೆ ಚೌಕಟ್ಟನ್ನು ಅಳವಡಿಸಿಕೊಳ್ಳಲು ಸಹ ಶಿಫಾರಸು ಮಾಡಿದೆ. ಕಂಟ್ರೋಲ್ ಯುನಿಟ್‌ಗಳು ಹಾಗೂ ಸಿ ಸೂಟ್‌ಗಾಗಿ ಎಐ ಸಂಬಂಧಿತ ಆಡಳಿತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅದು ಸೂಚಿಸಿದೆ.
ಹಣಕಾಸು ವಲಯದ ನಿಯಂತ್ರಕರು ಮತ್ತು ಮೇಲ್ವಿಚಾರಕರು ಎಐ ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ತಿಳುವಳಿಕೆಯನ್ನು ಹೊಂದಿದ್ದಾರೆ. ಈಗ ಎಐಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಲು ತರಬೇತಿ ಮತ್ತು ಸಾಂಸ್ಥಿಕ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದೆ. ಆಡಳಿತ ರಚನೆ, ಹೊಣೆಗಾರಿಕೆ, ಕಾರ್ಯಾಚರಣೆಯ ಸುರಕ್ಷತೆಗಳು ಮತ್ತು ಗ್ರಾಹಕ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಮಂಡಳಿಯಿಂದ ಅನುಮೋದಿತ ಎಐ ನೀತಿಯನ್ನು ಸ್ಥಾಪಿಸಬೇಕು ಎಂದು ಸಮಿತಿಯು ಪ್ರಸ್ತಾಪಿಸಿದೆ.

ಎಐ ಅಳವಡಿಕೆಯನ್ನ ಖಚಿತಪಡಿಸಿಕೊಳ್ಳಲು ಡೇಟಾ ಇನ್‌ಪುಟ್‌ಗಳು, ಮಾದರಿ ಮತ್ತು ಅಲ್ಗಾರಿದಮ್ ಮತ್ತು ಔಟ್‌ಪುಟ್‌ಗಳನ್ನು ಒಳಗೊಂಡಂತೆ ಮಂಡಳಿಯಿಂದ ಅನುಮೋದಿತ ಎಐ ಆಡಿಟ್ ಚೌಕಟ್ಟನ್ನು ಕಾರ್ಯಗತಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಒಟ್ಟಾರೆ ಭಾರತದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಶೇ 46 ರಷ್ಟು ಸುಧಾರಿಸಲು ಕೃತಕ ಬುದ್ಧಿಮತ್ತೆ (ಎಐ) ಸಿದ್ಧವಾಗಿದೆ ಎಂದು ಹೇಳಿದೆ.
ಹಣಕಾಸು ಸೇವಾ ವಲಯದಲ್ಲಿ ಎಐ ಅನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಗ್ರಾಹಕರ ಅನುಭವವನ್ನು ಹೆಚ್ಚಿಸುವುದು, ಉದ್ಯೋಗಿ ಉತ್ಪಾದಕತೆಯನ್ನು ಸುಧಾರಿಸುವುದು, ಆದಾಯವನ್ನು ಹೆಚ್ಚಿಸುವುದು, ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುವುದು ಇದರಿಂದ ಅನುಕೂಲವಾಗಲಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಕಡಿಮೆ ಸೇವೆ ಪಡೆಯುವ ಜನರಿಗೆ ಕ್ರೆಡಿಟ್ ಪ್ರವೇಶವನ್ನು ವಿಸ್ತರಿಸಲು ಎಐ ಚಾಲಿತ ಪರ್ಯಾಯ ಕ್ರೆಡಿಟ್ ಸ್ಕೋರಿಂಗ್ ಮಾದರಿಗಳು ಕೂಡ ಸಹಾಯ ಮಾಡುತ್ತಿವೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications