Voice Translation: ವಿಡಿಯೋ ಕ್ರಿಯೇಟರ್‌ಗಳಿಗಾಗಿ ಮೆಟಾದಿಂದ ಹೊಸ AI ಫೀಚರ್, ಏನೆಲ್ಲ ಅನುಕೂಲ?
ವಿಡಿಯೋ ಕ್ರಿಯೇಟರ್‌ಗಳಿಗೆ ಮೆಟಾ ಭರ್ಜರಿ ಸಿಹಿಸುದ್ದಿ ನೀಡಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಾಗಿ ಎಐ ಚಾಲಿತ ಧ್ವನಿ ಭಾಷಾಂತರದ (Voice Translation) ಫೀಚರ್ ಈಗ ಜಾಗತಿಕವಾಗಿ ಲಭ್ಯವಿದೆ ಎಂದು ಹೇಳಿದೆ. ಇದು ಮೆಟಾ ಎಐ ಇರುವವರು ಬಳಸಬಹುದಾಗಿದೆ. ಆರಂಭದಲ್ಲಿ ಇದು ಇಂಗ್ಲಿಷ್‌ನಿಂದ ಸ್ಪ್ಯಾನಿಷ್ ಭಾಷೆಯನ್ನು ಮಾತ್ರ ಸಪೋರ್ಟ್ ಮಾಡುತ್ತಿದೆ. ಇದೀಗ ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಕ್ರಿಯೇಟರ್‌ಗಳಿಗಾಗಿ ಈ ಆಡಿಯೋ ಫೀಚರ್ ಹೊರತಂದಿದೆ. ಇದು ನಿಮ್ಮ ಧ್ವನಿಯ ಟೋನ್ ಅನ್ನು ಅನುಕರಿಸುವುದು ಮಾತ್ರವಲ್ಲದೆ, ಡಬ್ ಮಾಡಲಾದ ರೀಲ್ಸ್ ಎಂದು ಅನುಮಾನವೇ ಬಾರದಂತೆ ಮ್ಯಾಜಿಕ್ ಮಾಡಲಿದೆ.
ಕ್ರಿಯೇಟರ್‌ಗಳು ತಮ್ಮ ರೀಲ್‌ಗಳಿಗೆ Translate your voice with Meta AI ಅನ್ನು ಆಯ್ಕೆ ಮಾಡಿ, ತಮ್ಮ ಧ್ವನಿಯನ್ನು ಇನ್ನೊಂದು ಭಾಷೆಗೆ ಅನುವಾದ ಮಾಡಬಹುದು. ಡಬ್ ಮಾಡಿದ ನಂತರ ಅದನ್ನು ಪರಿಶೀಲಿಸಿ ನಂತರ ಟ್ರ್ಯಾಕ್‌ನೊಂದಿಗೆ ಪಬ್ಲಿಶ್ ಮಾಡಬಹುದು. ಈ ಆಡಿಯೋ ಟ್ರ್ಯಾಕ್ ನಿಮ್ಮ ಧ್ವನಿಯ ಟೋನ್ ಅನ್ನು ಸಂರಕ್ಷಿಸುತ್ತದೆ. ಅಗತ್ಯವಿದ್ದರೆ ಲಿಪ್-ಸಿಂಕ್ ಕೂಡ ಸೇರಿಸಬಹುದು. ಹೀಗಾಗಿ ವೀಡಿಯೊಗಳು ನೈಜವಾಗಿಯೂ ಕಾಣಿಸುತ್ತದೆ. ಎಡಿಟ್ ಮಾಡಿರುವುದಾಗಿ ಯಾರಿಗೂ ಅನುಮಾನ ಮೂಡಿಸುವುದಿಲ್ಲ. ನೀವು ವಿಡಿಯೋಗಳನ್ನು ಶೇರ್ ಮಾಡುವ ಮುನ್ನವೇ ಭಾಷಾಂತರಗೊಂಡ ಆಡಿಯೋ ಪ್ರಿವ್ಯೂ ಮಾಡಬಹುದು.

ಕ್ರಿಯೇಟರ್‌ಗಳಿಗೆ ಭಾರೀ ಅನುಕೂಲ
ಮೊದಲಿಗೆ ಇಂಗ್ಲಿಷ್-ಸ್ಪ್ಯಾನಿಷ್ ಮಾತ್ರ ಸಪೋರ್ಟ್ ಮಾಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಭಾಷೆಗಳು ಈ ಫೀಚರ್‌ನಲ್ಲಿ ಸೇರ್ಪಡೆ ಆಗಲಿವೆ. ಪ್ರತಿ ಭಾಷೆಯಲ್ಲಿರುವ ವೀಕ್ಷಣೆಗಳನ್ನು ಟ್ರ್ಯಾಕ್ ಮಾಡಲು ಇದು ಉಪಯೋಗವಾಗುತ್ತದೆ. ಈ ವೈಶಿಷ್ಟ್ಯವು ಕನಿಷ್ಠ 1,000 ಫಾಲೋವರ್ಸ್ ಹೊಂದಿರುವ ಹಾಗೂ ಇನ್‌ಸ್ಟಾಗ್ರಾಂ ಪಬ್ಲಿಕ್ ಖಾತೆಗಳನ್ನು ಹೊಂದಿರುವ ಫೇಸ್‌ಬುಕ್ ಕ್ರಿಯೇಟರ್‌ಗಳಿಗೆ ಲಭ್ಯವಾಗಲಿದೆ. ಫೇಸ್‌ಬುಕ್ ಕ್ರಿಯೇಟರ್‌ಗಳು ಬಿಸಿನೆಸ್ ಸೂಟ್ ಮೂಲಕ 20 ಕಸ್ಟಮ್ ಡಬ್ ಮಾಡಿದ ಆಡಿಯೊ ಟ್ರ್ಯಾಕ್‌ಗಳನ್ನು ಅಪ್‌ಲೋಡ್ ಮಾಡಬಹುದು. ಇದು ಲಿಪ್-ಸಿಂಕ್ ಇಲ್ಲದೆ ಎಐ ಅನುವಾದ ಮಿತಿಗಳನ್ನು ಮೀರಿ ತಲುಪಲು ಅವರಿಗೆ ಅವಕಾಶ ನೀಡುತ್ತದೆ.
ಒಟ್ಟಾರೆ ಮೆಟಾ ತನ್ನ ಎಐ ಟ್ರಾನ್ಸ್‌ಲೇಷನ್ ಟೂಲ್ ಮೂಲಕ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಗೆ ಈ ಫೀಚರ್ ಪರಿಚಯಿಸಿದೆ. ಈ ಉಚಿತ ಫೀಚರ್ ಬಳಕೆದಾರರಿಗೆ ತಮ್ಮದೇ ಆದ ಧ್ವನಿ ಮತ್ತು ಸ್ವರವನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಡಬ್ ಮಾಡಲು ಸಹಾಯ ಮಾಡುತ್ತದೆ. ಅವರ ಆದ್ಯತೆಯ ಭಾಷೆಗೆ ಹೊಂದಿಕೆಯಾಗುವ ರೀಲ್‌ಗಳನ್ನು ಅವರ ಫೀಡ್‌ನಲ್ಲಿ ತೋರಿಸಲಾಗುತ್ತದೆ.

ರೀಲ್ ಅನ್ನು ಪೋಸ್ಟ್ ಮಾಡುವ ಮೊದಲೇ ನಿಮ್ಮ ಧ್ವನಿಯನ್ನು ಮೆಟಾ ಎಐ ಜೊತೆಗೆ ಅನುವಾದದ ಆಯ್ಕೆ ಮಾಡುವ ಮೂಲಕ ಕ್ರಿಯೇಟರ್‌ಗಳು ಈ ಫೀಚರ್ ಬಳಸಬಹುದು. ಅವರು ಪೋಸ್ಟ್ ಮಾಡುವ ಮೊದಲು ಭಾಷಾಂತರ ಹಾಗೂ ಲಿಪ್ ಸಿಂಕ್‌ಗಳನ್ನು ಪೂರ್ವವೀಕ್ಷಣೆ ಮಾಡಬಹುದು. ತಮ್ಮ ಮೂಲ ವೀಡಿಯೋ ಮೇಲೆ ಪರಿಣಾಮ ಬೀರದಂತೆ ಯಾವುದೇ ಎಡಿಟ್ ಮಾಡಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ರೀಲ್ ಎಐನಿಂದ ಅನುವಾದಿಸಲಾಗಿದೆ ಎಂದು ದೃಢೀಕರಿಸಿದೆ ಎಂಬ ಖಚಿತ ಮಾಹಿತಿಯೂ ನಿಮಗೆ ಸಿಗಲಿದೆ.












Click it and Unblock the Notifications