ಪೊಲೀಸ್ ಇಲಾಖೆಯಲ್ಲಿ ಎಐ ಪಾತ್ರ ಹೇಗಿದೆ ಗೊತ್ತಾ?; ಇಲ್ಲಿದೆ ಮಾಹಿತಿ
ಜಗತ್ತಿನಾದ್ಯಂತ ಎಐ ತನ್ನ ಕ್ಷೇತ್ರವನ್ನು ವಿಸ್ತರಣೆ ಮಾಡಿಕೊಳ್ಳುತ್ತಲೇ ಇದೆ. ಹಾಗೆಯೇ ಇದೀಗ ಪೊಲೀಸ್ ಇಲಾಖೆಗೂ ಎಂಟ್ರಿ ಕೊಟ್ಟಿದೆ. ಹಾಗಾದ್ರೆ ಇಲಾಖೆಯಲ್ಲಿ ಇದರ ಪಾತ್ರ ಏನು ಹಾಗೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಸ್ತೆ ಅಪಘಾತ ಸಂಭವಿಸಿದರೆ, ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಾರೆ. ಸಾಕ್ಷ್ಯಗಳಿಗಾಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಅಪಘಾತದ ವಿವರ, ಅಪಘಾತಕ್ಕೀಡಾದ ವಾಹನಗಳು ಯಾವ ಕಡೆಯಿಂದ ಬಂದಿವೆ, ಅವುಗಳ ಬಣ್ಣಗಳು, ಸಂಖ್ಯೆಗಳು ಸೇರಿದಂತೆ ಇತ್ಯಾದಿ ವಿವರಗಳನ್ನು ದಾಖಲಿಸಿ ಎಫ್ಐಆರ್ನಲ್ಲಿ ನಮೂದಿಸಲಾಗುತ್ತದೆ. ಇದು ಪ್ರಸ್ತುತ ರಾಜ್ಯದಲ್ಲಿ ಪೊಲೀಸರು ಪಾಲನೆ ಮಾಡುತ್ತಿರುವ ವಿಧಾನ ಆಗಿದೆ.

ಆದರೆ, ಇದರಲ್ಲಿ ಕೆಲ ಸಮಸ್ಯೆಗಳಿದ್ದು, ಪುರಾವೆಗಳು ಕಾಣೆಯಾಗಿರುವೆ ಮತ್ತು ಯಾವುದೇ ಸಮಗ್ರತೆ ಇಲ್ಲ ಎಂದು ಪೊಲೀಸರು ಭಾವಿಸಿದ್ದಾರೆ. ಆದ್ದರಿಂದ ಕೃತಕ ಬುದ್ಧಿಮತ್ತೆ (AI) ಯೊಂದಿಗೆ ಆ ವಿವರಗಳನ್ನು ಕಂಡುಹಿಡಿಯಲು ಅವರು ಹೊಸ ತಂತ್ರಜ್ಞಾನವನ್ನು ಪ್ರಾರಂಭ ಮಾಡಿದ್ದಾರೆ ಎಂದು ಈ ಟಿವಿ ಭಾರತ್ ವರದಿ ಮಾಡಿದೆ.
ಘಟನೆಯ ಸಂಪೂರ್ಣ ದೃಶ್ಯವನ್ನು ಹಾಗೂ ಉತ್ತಮವಾಗಿ ತೆಗೆದ ಫೋಟೋವನ್ನು ಕಂಪ್ಯೂಟರ್‌ಗೆ ಅಪ್ಲೋಡ್ ಮಾಡುವಂತೆ AI ಹೇಳುತ್ತದೆ. ಎಲೂರು ಜಿಲ್ಲಾ ಪೊಲೀಸರು ಒಂದು ತಿಂಗಳಿನಿಂದ ಈ ಪ್ರಯೋಗವನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅಪಘಾತ ಹೇಗೆ ಸಂಭವಿಸಿತು? ಘಟನೆಯ ಸ್ಥಳದಲ್ಲಿ ಯಾವ ವಸ್ತುಗಳು ಮತ್ತು ಉಪಕರಣಗಳು ಇದ್ದವು ಎಂಬುದರ ಎಲ್ಲಾ ವಿವರಗಳನ್ನು ಇದು ಸಂಗ್ರಹಿಸುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಐ ಫೋಟೋ ಅಪ್ಲೋಡ್ ಮಾಡಿದ ಒಂದು ನಿಮಿಷದೊಳಗೆ ವಿವರಗಳನ್ನು ಒದಗಿಸುತ್ತದೆ. ಈ ಹಿಂದೆ ಕಾಗದರಹಿತ ದೂರುಗಳನ್ನು ಸ್ವೀಕರಿಸಲು ಈ ತಂತ್ರಜ್ಞಾನವನ್ನು ತಂದಿದ್ದ ಎಲೂರು ಪೊಲೀಸರು, ಇದೀಗ ರಸ್ತೆ ಅಪಘಾತಗಳು, ಕೊಲೆಗಳು, ಆತ್ಮಹತ್ಯೆಗಳು, ಕಳ್ಳತನಗಳು ಇತ್ಯಾದಿಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು AI ಅನ್ನು ಬಳಸುತ್ತಿದ್ದಾರೆ.
ಪೊಲೀಸರು ದಾಖಲೆಯನ್ನು ನೋಂದಾಯಿಸುವಾಗ ಏನನ್ನಾದರೂ ಮರೆತರೂ ಅಂತಿಮವಾಗಿ AI ಯಲ್ಲಿನ ಫೋಟೋದೊಂದಿಗೆ ಅದನ್ನು ಪರಿಶೀಲಿಸಿದರೆ ಎಲ್ಲವೂ ಬಹಿರಂಗಗೊಳ್ಳುತ್ತದೆ. ಈ ತಿಂಗಳ 8ರಂದು ಕಲಿದಿಂಡಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ಆಗಿತ್ತು. ಈ ಘಟನೆ ಸ್ಥಳದಲ್ಲಿ ಪೊಲೀಸರಿಗೆ ಕೆಲವು ಪುರಾವೆಗಳು ಸಿಗಲಿಲ್ಲ. ಅಲ್ಲಿ ತೆಗೆದ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾಗ ಎಐ ತುಂಬಾ ಮಾಹಿತಿಯನ್ನು ನೀಡಿದ್ದು, ಇದು ತನಿಖೆಗೆ ಸಹಾಯವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಅಂತಾ ವರದಿಯಾಗಿದೆ.
ಎಐ ನಮಗೆ ಯಾವ ಭಾಷೆಯಲ್ಲಿ ಮಾಹಿತಿ ಬೇಕೆಂದು ಹೇಳಿದರೆ ಸಾಕು ಅದು ನಮಗೆ ಆ ಭಾಷೆಯಲ್ಲಿ ಮಾಹಿತಿ ನೀಡುತ್ತದೆ. ಅನೇಕ ಪೊಲೀಸ್ ಅಧಿಕಾರಿಗಳಿಗೆ ಇಂಗ್ಲಿಷ್‌ನಲ್ಲಿ ಉತ್ತಮ ಹಿಡಿತ ಇಲ್ಲ. ಅವರಿಗೆ ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಲು ಕಷ್ಟ ಆಗುತ್ತದೆ. ನೀವು ಎಐಯೊಂದಿಗೆ ಯಾವುದೇ ಚಾರ್ಜ್‌ಶೀಟ್ ಅಥವಾ ರಿಮ್ಯಾಂಡ್ ವರದಿಯನ್ನು ಪರಿಶೀಲನೆ ಮಾಡಿದರೆ ಅದರಲ್ಲಿರುವ ತಪ್ಪುಗಳನ್ನು ಅದು ನಿಮಗೆ ತಿಳಿಸುತ್ತದೆ. ಅಲ್ಲದೆ, ಅವುಗಳನ್ನು ಸರಿಪಡಿಸಲು ಅತ್ಯಂತ ಶಕ್ತಿಶಾಲಿ ವ್ಯವಸ್ಥೆ ಇದಾಗಿದೆ ಎಂದು ಎಲೂರು ಎಸ್‌ಪಿ ಕೆ. ಪ್ರತಾಪ್ ಶಿವಕಿಶೋರ್ ಹೇಳಿದರು.












Click it and Unblock the Notifications