AI ಚಾಲಿತ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅಪ್ಲಿಕೇಶನ್ ಬಿಡುಗಡೆ, ಏನಿದು?...Central Govt
ಬೆಂಗಳೂರು/ನವದೆಹಲಿ, ಸೆಪ್ಟೆಂಬರ್ 2: ದೇಶದ ಅತಿ ದೊಡ್ಡ ಡಿಜಿಟಲ್ ತಂತ್ರಜ್ಞಾನ ಮೇಳವಾದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025 ಗೆ ಹೆಚ್ಚಿನ ತಂತ್ರಜ್ಞಾನಿ ಅನುಭವ ಒದಗಿಸುವ ಉದ್ದೇಶದಿಂದ, ಕೇಂದ್ರ ಸಂವಹನ ಮತ್ತು ಈಶಾನ್ಯಾಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು AI ಆಧಾರಿತ ಇಂಟರಾಕ್ಟಿವ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.
9ನೇ ಆವೃತ್ತಿಯ IMC 2025 ಅಕ್ಟೋಬರ್ 8ರಿಂದ 11ರವರೆಗೆ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್, ದ್ವಾರಕದಲ್ಲಿ ನಡೆಯಲಿದೆ. ಈ ಅಪ್ಲಿಕೇಶನ್ ಲೈವ್‌ಸ್ಟ್ರೀಮಿಂಗ್, 'IMC Suggest' ಎಂಬ ವೈಯಕ್ತಿಕ ಸಲಹೆ ಸಾಧನ, ನೆಟ್ವರ್ಕಿಂಗ್, ಮೀಟಿಂಗ್ ಶೆಡ್ಯೂಲ್ ಮತ್ತು AI ಆಧಾರಿತ ಸ್ನಿಪೆಟ್ ವಿಡಿಯೋ ಹೈಲೈಟ್ಸ್ ಸೇರಿದಂತೆ ಅನೇಕ ನೂತನ ವೈಶಿಷ್ಟ್ಯಗಳನ್ನು ಈ ಅಪ್ಲಿಕೇಷನ್ ಹೊಂದಿದೆ.

ಅಪ್ಲಿಕೇಶನ್ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು, ಇಂಡಿಯಾ ಮೊಬೈಲ್ ಕಾಂಗ್ರೆಸ್ ಕೇವಲ ಒಂದು ಕಾರ್ಯಕ್ರಮವಲ್ಲ. ಅದು ಅಪಾರ ಅವಕಾಶಗಳ ವೇದಿಕೆ. ಈ ಅಪ್ಲಿಕೇಶನ್ ಆ ಅವಕಾಶಗಳನ್ನು ಸಂಪರ್ಕ, ಸಹಕಾರ ಮತ್ತು ಫಲಿತಾಂಶಗಳಾಗಿ ರೂಪಿಸುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ದೃಷ್ಟಿಗೆ ಅನುಗುಣವಾಗಿ, 2047ರೊಳಗೆ ಭಾರತದ ಜಯಶೀಲ ಭವಿಷ್ಯ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ ಇಡಲಿದೆ. IMC 5G, 6G, AI, IoT ಮುಂತಾದ ತಂತ್ರಜ್ಞಾನಗಳ ಬಗ್ಗೆ ಮಾತ್ರವಲ್ಲದೆ ರೈತರು, ವಿದ್ಯಾರ್ಥಿಗಳು, MSMEಗಳು ಮತ್ತು ಸಮಾಜದ ಪ್ರತಿಯೊಬ್ಬರಿಗೂ ಹೊಸ ಭರವಸೆ ನೀಡುವ ಬಗ್ಗೆ ಚರ್ಚಿಸುವ ವೇದಿಕೆಯಾಗುತ್ತದೆ ಎಂದು ತಿಳಿಸಿದರು.
IMC 2025 ಅಪ್ಲಿಕೇಶನ್ ಮೂಲಕ ಭಾಗವಹಿಸುವವರು ರಿಯಲ್-ಟೈಮ್ ಚಾಟ್, ಮೀಟಿಂಗ್ ಬುಕ್ಕಿಂಗ್, ಹೂಡಿಕೆದಾರರು-ಸ್ಟಾರ್ಟ್‌ಅಪ್ ಸಂಪರ್ಕ, ಫೋಟೋ ಬೂತ್, ಲೈವ್ ಪೋಲ್ ಮತ್ತು ಸ್ಪರ್ಧೆಗಳು ಸೇರಿದಂತೆ ಹಲವಾರು ಅನುಭವಗಳನ್ನು ಪಡೆಯಬಹುದು. ವಿದ್ಯಾರ್ಥಿ ಮತ್ತು ಯುವ ಸ್ನೇಹಿ ವಿನ್ಯಾಸದ ಈ ಅಪ್, ತಂತ್ರಜ್ಞಾನವನ್ನು ಸುಲಭವಾಗಿ ಪರಿಚಯಿಸುವುದರೊಂದಿಗೆ ಅವರ ಭವಿಷ್ಯ ಗುರಿಗಳಿಗೆ ಸ್ಪೂರ್ತಿ ನೀಡಲಿದೆ. IMC 2025ಗೆ ಪ್ರತಿನಿಧಿಗಳು, ಮಾಧ್ಯಮ ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ಅಕಾಡೆಮಿಕ್ ವಲಯದವರು ಈಗಲೇ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿ ಮಾಡಿಕೊಳ್ಳುವವರು ಈ ಅಧಿಕೃತ ವೆಬ್‌ಸೈಟ್‌ಗೆ www.indiamobilecongress.com. ಕೋರಲಾಗಿದೆ.












Click it and Unblock the Notifications