ಮೂರನೇ ಸ್ಥಾನಕ್ಕೆ ಕುಸಿದ ಡಿಎಂಕೆ: ಕಾರ್ಯಕರ್ತರ ಕಣ್ಣೀರು
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಸೋಮವಾರ (ಮೇ 4) ಹೊರಬೀಳುತ್ತಿದೆ. ಎಲ್ಲರ ಚಿತ್ತಗಳು ತಮಿಳುನಾಡಿನ ಫಲಿತಾಂಶದ ಮೇಲೆ ನೆಟ್ಟಿದ್ದವು. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕ್ಕಿರುವ ವಿಜಯ್ ದಳಪತಿ ಅವರ ಟಿವಿಕೆ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದೆ. ಚುನಾವಣೆಯಲ್ಲಿ ವಿಜಯ್ ಸುನಾಮಿಗೆ ಬೇರೆ ಪಕ್ಷಗಳು ಕಂಗಾಲಾಗಿವೆ.
ಡಿಎಂಕೆಯ ಭದ್ರಕೋಟೆಗಳಾದ ಚೆನ್ನೈ, ತಿರುಚಿ ಮತ್ತು ಉತ್ತರ ಜಿಲ್ಲೆಗಳಲ್ಲಿ ಆ ಪಕ್ಷ ಹಿನ್ನಡೆ ಅನುಭವಿಸುತ್ತಿದೆ. ಚೆನ್ನೈನ ಡಿಎಂಕೆ ಕೇಂದ್ರ ಕಚೇರಿಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಆರಂಭಿಕ ಹಿನ್ನಡೆಯನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಪಕ್ಷ ಮಹಿಳೆಯರಿಗೆ ಹಾಗೂ ಜನರಿಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದರೂ ಹಿನ್ನಡೆ ಅನುಭವಿಸಿದೆ. ಅಧಿಕಾರದಲ್ಲಿದ್ದ ಡಿಎಂಕೆ ಪಕ್ಷದ ಹೀನಾಯ ಪ್ರದರ್ಶನ ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಈಗಿನ ಮುನ್ನಡೆಯ ಆಧಾರದ ಮೇಲೆ ಅಧಿಕಾರದಲ್ಲಿರುವ ಡಿಎಂಕೆ ಮೂರನೇ ಸ್ಥಾನದಲ್ಲಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) 103 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಎಐಎಡಿಎಂಕೆ 70 ಸ್ಥಾನಗಳಲ್ಲಿ ಮುನ್ನಡೆದಿದೆ. ಇನ್ನು ಡಿಎಂಕೆ 61 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.












Click it and Unblock the Notifications