CBSE 10ನೇ ತರಗತಿಯ 2ನೇ ಪರೀಕ್ಷೆ ಫಲಿತಾಂಶ ಪ್ರಕಟ: ನಿಮ್ಮ ಅಂಕಗಳನ್ನ ಡಿಜಿಲಾಕರ್‌ನಲ್ಲಿ ಹೀಗೆ ಚೆಕ್ ಮಾಡಿ


ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು 10ನೇ ತರಗತಿಯ ಎರಡನೇ ಬೋರ್ಡ್‌ ಪರೀಕ್ಷೆಯ ಫಲಿತಾಂಶವನ್ನಾ ಶನಿವಾರ (ಜುಲೈ 18)ದಂದು ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನ ಸುಧಾರಿಸಿಕೊಳ್ಳಲು ಬರೆದ ಎರಡನೇ ಪರೀಕ್ಷೆಯ ಫಲಿತಾಂಶ ಇದೀಗ ಲಭ್ಯವಿದ್ದು, ಕೇಂದ್ರ ಸರ್ಕಾರದ ಅಧಿಕೃತ 'ಡಿಜಿಲಾಕರ್' ರಿಸಲ್ಟ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದು.

Advertisement

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ, ಸಿಬಿಎಸ್‌ಇ ಮಂಡಳಿಯು 2026ನೇ ಶೈಕ್ಷಣಿಕ ಸಾಲಿನಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಬೋರ್ಡ್ ಪರೀಕ್ಷೆ ವ್ಯವಸ್ಥೆಯನ್ನ ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿತ್ತು. ಮೊದಲ ಬೋರ್ಡ್ ಪರೀಕ್ಷೆ 2026ರ ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ಯಶಸ್ವಿಯಾಗಿ ನಡೆದಿದ್ದವು.

Advertisement

Rain: ರಾಜ್ಯದ 157 ತಾಲೂಕುಗಳು ಬರಪೀಡಿತ! ಅಧಿಕಾರದ ಅಮಲಿನಲ್ಲಿ ಸರ್ಕಾರ: ಆರ್.ಅಶೊಕ್ ಆಗ್ರಹವೇನು?

ಆ ಬಳಿಕ, ಅಂಕಗಳನ್ನು ಸುಧಾರಿಸಿಕೊಳ್ಳಲು ಹಾಗೂ ಫೇಲ್‌ ಆದವರಿಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಮೇ 15 ರಿಂದ ಮೇ 21 ರವರೆಗೆ ಎರಡನೇ ಬೋರ್ಡ್ ಪರೀಕ್ಷೆಯನ್ನು ನಡೆಸಲಾಗಿತ್ತು. ಸಿಬಿಎಸ್‌ಇ ನಿಯಮದ ಪ್ರಕಾರ, ಈ ಎರಡು ಪರೀಕ್ಷೆಗಳಲ್ಲಿ ವಿದ್ಯಾರ್ಥಿಯು ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುತ್ತಾನೋ, ಅದೇ ಅಂಕಗಳನ್ನು ಅಂತಿಮ ಫಲಿತಾಂಶಕ್ಕಾಗಿ ಪರಿಗಣಿಸಲಾಗುತ್ತದೆ.

ಪರೀಕ್ಷೆಯ ಅಂಕಿ-ಅಂಶಗಳು

ಸಿಬಿಎಸ್‌ಇ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಎರಡನೇ ಬೋರ್ಡ್ ಪರೀಕ್ಷೆಗೆ ಒಟ್ಟು 6,64,027 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 6,63,777 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ವಿಶೇಷವೆಂದರೆ, ಮುಖ್ಯ ಪರೀಕ್ಷೆ ಹಾಗೂ ಎರಡನೇ ಪರೀಕ್ಷೆಯ ಫಲಿತಾಂಶಗಳನ್ನು ಬಳಿಕ, 2026ರ ಸಾಲಿನ 10ನೇ ತರಗತಿಯ ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 96.78% ರಷ್ಟು ದಾಖಲಾಗಿದೆ.

Advertisement

ತಮ್ಮ ಅಂಕಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಒಟ್ಟು 5,13,955 ವಿದ್ಯಾರ್ಥಿಗಳು ಎರಡನೇ ಪರೀಕ್ಷೆ ಬರೆದಿದ್ದರು. ಇವರಲ್ಲಿ 3,08,095 ಅಂದರೆ ಶೇ. 59.95%ರಷ್ಟು ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

DCET 2026: ಡಿಪ್ಲೊಮಾ ಸಿಇಟಿ ಫಲಿತಾಂಶ ಪ್ರಕಟ; ರ‍್ಯಾಂಕ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಲಿಂಕ್

ಇನ್ನು, ಕಂಪಾರ್ಟ್‌ಮೆಂಟ್ ವಿಭಾಗದಲ್ಲಿ 1,49,822 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 78,503 ಅಂದರೆ ಶೇ. 52.40%ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2025ರಲ್ಲಿ ಕಂಪಾರ್ಟ್‌ಮೆಂಟ್ ಪಾಸಿಂಗ್ ಪ್ರಮಾಣ ಕೇವಲ ಶೇ. 48.68 ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಂಪಾರ್ಟ್‌ಮೆಂಟ್ ವಿಭಾಗದಲ್ಲೂ ಉತ್ತಮ ಸಾಧನೆಯಾಗಿದೆ.

Advertisement

ಡಿಜಿಲಾಕರ್ ಮೂಲಕ ಫಲಿತಾಂಶ ನೋಡುವುದು ಹೇಗೆ?

ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಬೇರೆ ಯಾವುದೇ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ನೇರವಾಗಿ ಡಿಜಿಲಾಕರ್ ರಿಸಲ್ಟ್ ಪೋರ್ಟಲ್ http://results.digilocker.gov.in ಗೆ ಭೇಟಿ ನೀಡಿ. ಅಲ್ಲಿ ಸಿಬಿಎಸ್‌ಇ 10ನೇ ತರಗತಿಯ 2026ರ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರೋಲ್ ನಂಬರ್, ಶಾಲೆಯ ಸಂಖ್ಯೆ ಮತ್ತು ಅಡ್ಮಿಟ್ ಕಾರ್ಡ್ ಐಡಿಯನ್ನು ನಮೂದಿಸುವ ಮೂಲಕ ನಿಮ್ಮ ಅಂಕಪಟ್ಟಿಯನ್ನು ಸುಲಭವಾಗಿ ನೋಡಿ, ಡೌನ್‌ಲೋಡ್ ಮಾಡಿಕೊಳ್ಳಬಹುದು.

English Summary

The Central Board of Secondary Education has declared the Class X Second Board Examination 2026 results. Students can check their scores on the DigiLocker portal.