ಮೈಸೂರು : ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ

ಮೈಸೂರು, ಅಕ್ಟೋಬರ್ 14 : ಹುಲಿ ದಾಳಿಗೆ ದನ ಮೇಯಿಸುಯತ್ತಿದ್ದ ರೈತನೊಬ್ಬ ಬಲಿಯಾದ ಘಟನೆ ನಂಜನಗೂಡಿನಲ್ಲಿ ಮಂಗಳವಾರ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.

ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪದ ಹಾದನೂರ ಒಡೆಯನಪುರ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಮೃತ ರೈತನನ್ನು ನಾಗರಾಜು (38) ಎಂದು ಗುರುತಿಸಲಾಗಿದೆ. ರೈತ ನಾಗರಾಜು ಅವರು ಶಿವಣ್ಣ ಮತ್ತು ವೆಂಕಟೇಶ ಎಂಬುವರೊಂದಿಗೆ ದನ ಮೇಯಿಸುತ್ತಿದ್ದ ಸಂದರ್ಭದಲ್ಲಿ ಹುಲಿ ದಾಳಿ ಮಾಡಿದೆ. [ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]

farmer

ನಾಗರಾಜು ಅವರ ಜೊತೆಗಿದ್ದ ಶಿವಣ್ಣ ಮತ್ತು ವೆಂಕಟೇಶ ಅವರು ಮರದ ಅಡಿಯಲ್ಲಿ ಕುಳಿತಿದ್ದರು. ಒಂಟಿಯಾಗಿ ಕುಳಿತಿದ್ದ ನಾಗರಾಜುವಿನ ಮೇಲೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದೆ. ಇದನ್ನು ನೋಡಿದ ವೆಂಕಟೇಶ ಮತ್ತು ಶಿವಣ್ಣ ಅವರು ಕಿರುಚಿ ಹುಲಿಯತ್ತ ಕಲ್ಲು ಎಸೆದಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ಆದರೆ, ಇಬ್ಬರನ್ನು ನೋಡಿದ ಹುಲಿ ನಾಗರಾಜು ಅವರನ್ನು ಎಳೆದುಕೊಂಡು ಹೋಗಿದೆ. ಜೋರಾಗಿ ಕೂಗಿ ಸದ್ದು ಮಾಡಿದ ಇಬ್ಬರು ಹುಲಿ ಬಾಯಿಯಿಂದ ನಾಗರಾಜು ಅವರ ದೇಹವನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ನಾಗರಾಜು ಅವರು ಮೃತಪಟ್ಟಿದ್ದರು. [ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿಲ್ಲ]

ನಾಗರಾಜು ಅವರು ಮೃತಪಟ್ಟು 4 ತಾಸು ಕಳೆದರೂ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂಡಿಪುರ ಅರಣ್ಯ ವಲಯದ ಸಿಸಿಫ್ ಡಿ.ಬಿ.ಮಲ್ಲೇಶ್ ಮತ್ತು ಸಿಬ್ಬಂದಿಗಳು ತಡವಾಗಿ ಆಗಮಿಸಿದರು.

ಅರಣ್ಯ ಇಲಾಖೆಯವರು ಸ್ಥಳದಲ್ಲಿಯೇ 2 ಲಕ್ಷ ರೂ.ಗಳ ಪರಿಹಾರದ ಚೆಕ್‌ ನೀಡಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. 10 ಲಕ್ಷ ಪರಿಹಾರ ನೀಡಬೇಕು ಮತ್ತು ನಾಗರಾಜು ಅವರ ಮಕ್ಕಳಾದ ಅಶ್ವಿನಿ ಮತ್ತು ಹರ್ಶನ್‍ ಅವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

tiger

ಸಿಸಿಎಫ್ ಅವರು 5 ಲಕ್ಷ ರೂ.ಗಳ ಪರಿಹಾರ ನೀಡಿದರು ಮತ್ತು ಪ್ರಥಮ ಪಿಯುಸಿ ಓದುತ್ತಿರುವ ಮೃತ ನಾಗರಾಜುವಿನ ಮಗಳಾದ ಅಶ್ವಿನಿಗೆ ಉದ್ಯೋಗ ನೀಡುವ ಭರವಸೆ ನೀಡಿದರು. ಇದರಿಂದ ಗ್ರಾಮಸ್ಥರ ಆಕ್ರೋಶ ಸ್ವಲ್ಪ ಕಡಿಮೆಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+