• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಉಳ್ಳಾಗಡ್ಡಿ

|

ಬೆಂಗಳೂರು, ಡಿಸೆಂಬರ್ 09: ಈಜಿಪ್ಟ್ ಈರುಳ್ಳಿ ನಗರದ ಮಾರುಕಟ್ಟೆಗೆ ಪ್ರವೇಶ ಮಾಡಿದರೇನು ಬೆಲೆ ಏನು ಕಡಿಮೆಯಾಗಿಲ್ಲ. ಸಗಟು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದು, ಪ್ರತಿ ಕೆ.ಜಿ ಈರುಳ್ಳಿ 200 ರು ನಂತೆ ಮಾರಾಟಕ್ಕಿಡಲಾಗಿದೆ. ಸೂಪರ್ ಬಜಾರ್, ಮಾಲ್ ಗಳಲ್ಲಿನ ತರಕಾರಿ ವಿಭಾಗದಲ್ಲೂ ರಿಯಾಯಿತಿ ಕಳೆದು 150ರು ತನಕ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಈ ನಡುವೆ ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಬಂದಿದೆ. ಸೋಮವಾರದಿಂದ ಬೆಂಗಳೂರಿನ ಈಜಿಪ್ಟ್‌ನಿಂದ ಆಮದಾಗಿರುವ ಈರುಳ್ಳಿ ರುಚಿಯನ್ನು ಸವಿಯಬಹುದು ಎಂಬ ಸುದ್ದಿಯನ್ನು ಒನ್ಇಂಡಿಯಾದಲ್ಲಿ ಓದಿರುತ್ತೀರಿ.

ಬೆಂಗಳೂರಲ್ಲಿ ಈಜಿಪ್ಟ್‌ ಈರುಳ್ಳಿ; ಕೆಜಿಗೆ ಎರಡು ಮಾತ್ರ, ದರ ಎಷ್ಟು?

ಆದರೆ, ನಗರದ ರೀಟೈಲ್ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ. ಜಿ.ಗೆ 190 ರಿಂದ 200 ರೂ. ಆಗಿದೆ. ಈರುಳ್ಳಿ ಖರೀದಿ ಮಾಡಲು ಮಾರುಕಟ್ಟೆಗೆ ಹೋದವರು ಬರಿಗೈಯಲ್ಲಿ ವಾಪಸ್ ಬರುತ್ತಿದ್ದಾರೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ತಳ್ಳೋಗಾಡಿಯವನು ಈರುಳ್ಳಿ ಬೋರ್ಡ್ ಕೆಳಗೆ ಇಂಟರೆಸ್ಟಿಂಗ್ ಒಕ್ಕಣೆ ಬರೆದುಕೊಂಡಿದ್ದ

ಆದರೆ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ 5,500 ರು ನಿಂದ 14,000 ರು ನಷ್ಟಿದೆ ಎಂದು ರಾಜ್ಯ ಕೃಷಿ ಮಾರುಕಟ್ಟೆ ಅಧಿಕಾರಿ ಸಿದ್ದಗಂಗಯ್ಯ ಹೇಳಿದ್ದಾರೆ.

ಜನವರಿ ಮಧ್ಯಭಾಗದ ತನಕ ಬೆಲೆ ಏರಿಕೆ

ಜನವರಿ ಮಧ್ಯಭಾಗದ ತನಕ ಬೆಲೆ ಏರಿಕೆ

ಜನವರಿ ಮಧ್ಯಭಾಗದ ತನಕ ಬೆಲೆ ಏರಿಕೆ ಇದೇ ರೀತಿ ಮುಂದುವರೆಯಲಿದೆ. ಈರುಳ್ಳಿ ದಾಸ್ತಾನು ಕೊರತೆ ಎದುರಾಗಿದ್ದು, ಪೂರೈಕೆ ಹೆಚ್ಚಾದರೆ ಬೆಲೆ ತಗ್ಗಲಿದೆ ಎಂದು ಹೇಳಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ದರದಲ್ಲಿ ವ್ಯತ್ಯಾಸವಿದೆ. ಕೋಲಾರದಲ್ಲಿ 140 ರಿಂದ 150, ದಾವಣಗೆರೆಯಲ್ಲಿ 150, ಮೈಸೂರಿನಲ್ಲಿ 165 ರಿಂದ 170, ಕಲಬುರಗಿಯಲ್ಲಿ 100, ಚಿಕ್ಕಮಗಳೂರಿನಲ್ಲಿ ಕೆ. ಜಿ. ಗೆ 140 ರೂ. ದರವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ದರ 165 ರೂ. ಗಡಿ ದಾಟಿದೆ.

150 ಲಕ್ಷ ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬೇಡಿಕೆ

150 ಲಕ್ಷ ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬೇಡಿಕೆ

ಭಾರತಕ್ಕೆ ವಾರ್ಷಿಕ 150 ಲಕ್ಷ ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬೇಡಿಕೆಯಿದೆ. ಕರ್ನಾಟಕದಲ್ಲಿ ಸರಾಸರಿ 20.19 ಲಕ್ಷ ಮೆಟ್ರಿಕ್ ಟನ್ ನಷ್ಟು ಉತ್ಪಾದನೆಯಾಗುತ್ತದೆ. ಕೇಂದ್ರ ಸರ್ಕಾರ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಈಜಿಪ್ಟ್‌ ಈರುಳ್ಳಿ ಗಾತ್ರದಲ್ಲಿ ದೊಡ್ಡದು. ಸುಮಾರು 750 ಗ್ರಾಂ ತೂಕವಿರುವ ಈರುಳ್ಳಿ ಒಂದು ಕೆ. ಜಿ.ಗೆ ಎರಡು ಮಾತ್ರ ಬರುತ್ತದೆ ಎಂಬ ಮಾತಿದೆ.

ಈರುಳ್ಳಿ ಬೆಲೆ ದಿಢೀರ್ ಏರಿಕೆಗೆ ಕಾರಣ

ಈರುಳ್ಳಿ ಬೆಲೆ ದಿಢೀರ್ ಏರಿಕೆಗೆ ಕಾರಣ

ಆಪತ್ಕಾಲದ ಶೇಖರಣೆಯಾಗಿರುವ 57,000 ಟನ್ ಈರುಳ್ಳಿಯಲ್ಲಿ ಶೇ 25 ರಷ್ಟು ನಷ್ಟವನ್ನು ಸರ್ಕಾರ ಎದುರಿಸುತ್ತಿದೆ. ಇದರಲ್ಲಿ ದಾಸ್ತಾನು ಸಮಸ್ಯೆಯೇ ಮುಖ್ಯ ಕಾರಣವಾಗಿದೆ. ಭಾರತದ ಶೇ 60ರಷ್ಟು ಈರುಳ್ಳಿ ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಅನಿಯಮಿತ ಮಳೆ, ಅಕಾಲಿಕ ಮಳೆ, ಜಲ ಪ್ರವಾಹ ಎಲ್ಲವೂ ಈರುಳ್ಳಿ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿವೆ. ಪ್ರತಿಕೂಲ ಹವಾಮಾನ, ಬೆಳೆ ಪದ್ಧತಿ ಅವಧಿ ಮೇಲಿನ ನಿಯಂತ್ರಣ ಎಲ್ಲವೂ ಸರ್ಕಾರದ ಹಿಡಿತದಲ್ಲಿಲ್ಲ, ಆದರೆ, ಕೈಲಿರುವ ಈರುಳ್ಳಿ ಉಳಿಸಿಕೊಳ್ಳುವುದು, ರಫ್ತು ಮಾಡುವುದು, ಆಮದು ಮೇಲೆ ನಿಯಂತ್ರಣ ಹೊಂದುವುದು ಸರ್ಕಾರದ ಕೈಲಿದೆ.

ಈರುಳ್ಳಿ ಉಗ್ರಾಣ ವ್ಯವಸ್ಥೆ

ಈರುಳ್ಳಿ ಉಗ್ರಾಣ ವ್ಯವಸ್ಥೆ

ಈರುಳ್ಳಿ ಉಗ್ರಾಣ ವ್ಯವಸ್ಥೆಯಲ್ಲಿ ಸರಿಯಾದ ಗಾಳಿ, ಬೆಳಕು ಇಲ್ಲದ ದೊಡ್ಡ ದೊಡ್ಡ ಉಗ್ರಾಣಗಳಲ್ಲಿ ಟನ್ ಗಟ್ಟಲೇ ತುಂಬಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಶೇ 20-40 ರಷ್ಟು ನಷ್ಟವೇ ಅಧಿಕವಾಗಿರುತ್ತದೆ. ಜೊತೆಗೆ ಪ್ರತಿಕೂಲ ಹವಾಮಾನವೂ ದೊಡ್ಡ ಸವಾಲು ನೀಡುತ್ತದೆ. ಸೂಕ್ತ ತಂತ್ರಜ್ಞಾನ ಬಳಕೆಯಿಂದ ಹಾಲಿ ಉಗ್ರಾಣದಲ್ಲೇ ಶೇ 5 ರಿಂದ 10 ರಷ್ಟು ನಷ್ಟ ತಗ್ಗಿಸಬಹುದು. ತೇವಾಂಶ ನಿಯಂತ್ರಣ, ಸ್ವಚ್ಛತೆ, ಪ್ರತ್ಯೇಕತೆ ಮುಂತಾದ ಸರಳ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯ.

English summary
Prices of Onion shot up to a whopping Rs 200 per KG in Bengaluru due to severe short supply in the market. Some retail shops in Bengaluru selling Onions at this price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X