ರಮ್ಯಾ ವಿರುದ್ಧ ಮಂಡ್ಯ ಕಾಂಗ್ರೆಸಿಗರ ದೂರು
ಮಂಡ್ಯ, ಜುಲೈ 20 : ಮಂಡ್ಯದ ಮಾಜಿ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡದ ರಮ್ಯಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಮ್ಯಾ ಅವರು ಸಾಂತ್ವನ ಹೇಳಲು ಆಗಮಿಸಿಲ್ಲ. ಇಂತಹ ನಾಯಕರು ನಮಗೆ ಬೇಡ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. [ನೊಂದ ರೈತರ ಮನೆಗೆ ಅಂತೂ ಇಂತೂ ಭೇಟಿ ಇತ್ತ ಸಿಎಂ]

ದೂರಿನಲ್ಲೇನಿದೆ? : ಮಂಡ್ಯದಲ್ಲಿ ವಿವಿಧ ಕಾರಣಗಳಿಗಾಗಿ ಇದುವರೆಗೂ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಮಾಜಿ ಸಂಸದೆ ರಮ್ಯಾ ಅವರು ಜಿಲ್ಲೆಗೆ ಆಗಮಿಸಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ. ರಮ್ಯಾ ಅವರ ಈ ವರ್ತನೆಯಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]
ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ರಮ್ಯಾ ಅವರು ಉಪ ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ನಾವು ಗೆಲ್ಲಿಸಿದ್ದೇವೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಅವರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಅವರು ಭಾರತದಲ್ಲಿದ್ದಾರೋ?, ವಿದೇಶದಲ್ಲಿದ್ದಾರೋ? ತಿಳಿದಿಲ್ಲ. [ಸೋಲಿನ ಸೇಡು ತೀರಿಸಿಕೊಂಡ ಮಂಡ್ಯದ ಪುಟ್ಟ]
ಪಕ್ಷದ ಜಿಲ್ಲಾ ನಾಯಕರ ಜೊತೆ ಅವರು ಸಂಪರ್ಕದಲ್ಲಿಲ್ಲ, ಪಕ್ಷದ ಅಧ್ಯಕ್ಷರ ಜೊತೆಯೂ ಅವರು ಸಂಪರ್ಕದಲ್ಲಿರುವಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಹಲವಾರು ಘಟನೆಗಳು ನಡೆದಾಗ ಅವರು ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಇಂತಹ ನಾಯಕರು ನಮಗೆ ಬೇಡ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. [ಸಂಸತ್ತಿನಲ್ಲಿ ಮಂಡ್ಯ ಸಂಸದೆ ರಮ್ಯಾ ಪ್ರಪ್ರಥಮ ಭಾಷಣ]












Click it and Unblock the Notifications