ಸಿಮೆಂಟ್ ಶೀಟ್‌ನಲ್ಲೂ ಗೂಡು ಕಟ್ಟುತ್ತೆ ಜೇನು: ಪುತ್ತೂರು ಕೃಷಿಕನ ನೂತನ ಅವಿಷ್ಕಾರ
ಮಂಗಳೂರು, ಡಿಸೆಂಬರ್ 12: ಕೃಷಿಕರು ತನಗೆ ಅಗತ್ಯವಿರುವ ವಸ್ತುಗಳನ್ನು ತಾನೇ ಬೆಳೆಯುವ ಹಾಗೂ ತಯಾರಿಸುವಂತಹ ಸಾಮರ್ಥ್ಯವಿರುವವರು. ಈ ಕಾರಣಕ್ಕಾಗಿಯೇ ಕೃಷಿಕ ತನ್ನ ಅಗತ್ಯತೆಗಳಿಗಾಗಿ ಬೇರೆಯವರನ್ನು ಆಶ್ರಯಿಸುವುದು ಅತಿ ವಿರಳವೂ ಆಗಿದೆ. ಇಂಥಹುದೇ ಒರ್ವ ಕೃಷಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ.
ಮಂಗಗಳ ಹಾವಳಿಗೆ ಕೋವಿ, ಅಡಿಕೆಗೆ ಔಷಧಿ ಸಿಂಪಡಿಸಲು ಹೊಸ ವಿನೂತನ ಯಂತ್ರ ಸಿದ್ಧಪಡಿಸಿರುವ ಈ ಕೃಷಿಕ ಇದೀಗ ಕಡಿಮೆ ಖರ್ಚಿನ ಜೇನುಪೆಟ್ಟಿಗೆಯನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಈ ವಿನೂತನ ಪ್ರಯತ್ನ ಮಾಡಿದ್ದಾರೆ.

ತನ್ನ ಹೆಸರಿನಲ್ಲಿ ಇರುವ ಸಣ್ಣ ಜಮೀನಿನಲ್ಲಿ ತನಗೆ ಬೇಕಾದಂತೆ ಕೃಷಿ ಮಾಡಿಕೊಂಡು ಬದುಕುತ್ತಿರುವ ವಿಶೇಷ ಕೃಷಿಕ. ಜಮೀನಿನಲ್ಲಿ ಸ್ವಲ್ಪ ಅಡಿಕೆ, ಸ್ವಲ್ಪ ತೆಂಗು, ಬಾಳೆ, ಕರಿಮೆಣಸು, ಕಾಫಿ, ಜೇನು ಹೀಗೆ ಎಲ್ಲಾ ಪ್ರಕಾರದ ಬೆಳೆಗಳನ್ನು ಬೆಳೆಯುತ್ತಿರುವ ಇವರು ಒರ್ವ ಪ್ರಗತಿಪರ ಕೃಷಿಕರೂ ಆಗಿದ್ದಾರೆ. ತನ್ನ ಕೃಷಿಗೆ ಬೇಕಾದ ಸಲಕರಣೆಗಳನ್ನು ತಾವೇ ತಯಾರಿಸಿಕೊಳ್ಳುತ್ತಿರುವ ಇವರು ಮೊದಲಿಗೆ ಪರಿಚಯಿಸಿದ್ದು, ತನ್ನ ಅಡಿಕೆ ತೋಟಗಳಿಗೆ ಮರದ ಬುಡದಲ್ಲೇ ನಿಂತು ಔಷಧಿ ಬಿಡುವ ಸರಳ ತಂತ್ರವನ್ನು.
ಬಳಿಕ ತೋಟಗಳಿಗೆ ಲಗ್ಗೆಯಿಡುವ ಮಂಗಗಳನ್ನು ಓಡಿಸಲು ಇವರು ಕೋವಿಯನ್ನು ಹೋಲುವ ಪಟಾಕಿ ಸಿಡಿಸುವ ಗನ್ ಕೂಡಾ ಮಾಡಿದ್ದಾರೆ. ಆದರೆ ಇದೀಗ ತನ್ನ ಉಪಕಸುಬಾದ ಜೇನು ಸಾಕಾಣಿಕೆಗೂ ಹೊಸ ತಂತ್ರವನ್ನು ಇವರು ಪರಿಚಯಿಸಿದ್ದಾರೆ. ಹೆಚ್ಚಾಗಿ ಜೇನು ಪೆಟ್ಟಿಗೆಗಳನ್ನು ಮರದಲ್ಲೇ ತಯಾರಿಸಲಾಗುತ್ತಿದ್ದು, ಮರದ ಬದಲಿಗೆ ಇದೀಗ ಇವರು ಸಿಮೆಂಟ್ ಶೀಟನ್ನು ಬಳಸಿ ಪೆಟ್ಟಿಗೆ ತಯಾರಿಸಿದ್ದಾರೆ.
ಮರದ ಜೇನಿನ ಪೆಟ್ಟಿಗೆಗೆ 3 ರಿಂದ 3,500 ರೂಪಾಯಿ ಖರ್ಚಾದರೆ, ಸಿಮೆಂಟ್ ಶೀಟ್‌ನಲ್ಲಿ ತಯಾರಿಸಿದ ಪೆಟ್ಟಿಗೆಗೆ ಕೇವಲ 1 ಸಾವಿರ ಖರ್ಚಾಗುತ್ತಿದೆ. ಅಲ್ಲದೆ ಮರದ ಪೆಟ್ಟಿಗೆಗಳಿಗೆ ಬರುವ ಗೆದ್ದಲು ಹಾಗೂ ಇರುವೆಗಳ ಕಾಟವೂ ಈ ಪೆಟ್ಟಿಗೆಗಳಿಗಿಲ್ಲ. ಮಳೆಗಾಲದಲ್ಲೂ ಮಳೆ ನೀರಿನ ಸಮಸ್ಯೆ ಇದಕ್ಕಿಲ್ಲ ಎನ್ನುವುದು ಪೆರ್ನಾಜೆಯವರ ಅಭಿಪ್ರಾಯವಾಗಿದೆ.

ಸಿಮೆಂಟ್ ಶೀಟ್‌ನ ಪೆಟ್ಟಿಗೆಯ ಜೊತೆಗೆ ಕಬ್ಬಿಣದ ಸರಳುಗಳ ಮೂಲಕ ಅದನ್ನು ನಿಲ್ಲಿಸುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಮೂಲಕ ಪೆರ್ನಾಜೆ ಪರಿಸರ ಉಳಿವಿಗೂ ತನ್ನ ಕೊಡುಗೆಯನ್ನು ನೀಡಿದ್ದಾರೆ. ಲಕ್ಷಾಂತರ ಜೇನುಪೆಟ್ಟಿಗೆಗಳು ಪ್ರತಿವರ್ಷ ತಯಾರಾಗುತ್ತಿದ್ದು, ಇವುಗಳಿಗಾಗಿ ನೂರಾರು ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಸಿಮೆಂಟ್ ಶೀಟ್‌ನಿಂದಾಗಿ ಈ ಮರಗಳ ಬಳಕೆ ತಪ್ಪಲಿದೆ ಎನ್ನುವ ವಿಶ್ವಾಸವೂ ವ್ಯಕ್ತವಾಗಿದೆ.
ಸಿಮೆಂಟ್ ಶೀಟ್‌ನಿಂದ ತಯಾರಿಸಿದ ಪೆಟ್ಟಿಗೆಗಳು ಬಿಸಿಲಿನ ಶಾಖ ಹೆಚ್ಚಿಸಿದರೂ, ತಂಪು ಪ್ರದೇಶವಿರುವ ಗ್ರಾಮೀಣ ಭಾಗದಲ್ಲಿ ಈ ಪೆಟ್ಟಿಗೆಗಳು ಯಶಸ್ವಿಯಾಗಲಿದೆ ಎನ್ನುವ ಅಭಿಪ್ರಾಯವೂ ಇದೀಗ ಕೇಳಿ ಬರುತ್ತಿದೆ. ಯಾವುದೇ ಲಾಭ ಗಳಿಸುವ ಉದ್ಧೇಶವಿಲ್ಲದೆ ತನ್ನ ತೋಟಕ್ಕೆ ಬೇಕಾದ ಸಲಕರಣೆಗಳನ್ನು ಮಾಡುತ್ತಿರುವ ಕುಮಾರ್ ಪೆರ್ನಾಜೆ ಕೃಷಿಯಲ್ಲಿ ಹೊಸತನವನ್ನೂ ಪರಿಚಯಿಸಿದವರಾಗಿದ್ದಾರೆ. ಇದೀಗ ಸಿಮೆಂಟ್ ಶೀಟ್‌ನ ಜೇನು ಪೆಟ್ಟಿಗೆಯ ಮೂಲಕ ಮತ್ತೊಮ್ಮೆ ಪೆರ್ನಾಜೆ ಸುದ್ದಿಯಲ್ಲಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications