Get Updates
Get notified of breaking news, exclusive insights, and must-see stories!

ಶೇಂಗಾ ಬೆಳೆ; ಸುಧಾರಿತ ತಂತ್ರಜ್ಞಾನಗಳ ಮಾಹಿತಿ

ಚಿತ್ರದುರ್ಗ, ಫೆಬ್ರವರಿ 11: ಶೇಂಗಾ ಬೆಳೆ ಬೆಳೆಯುವ ರೈತರು ಅನುಸರಿಸಬೇಕಾದ ಸುಧಾರಿತ ತಂತ್ರಜ್ಞಾನಗಳ ಕುರಿತು ಪ್ರಾತ್ಯಕ್ಷಿಕೆ ತರಬೇತಿಯನ್ನು ಆಯೋಜನೆ ಮಾಡಲಾಗಿತ್ತು. ಏರುಮಡಿ ಪದ್ದತಿಯಲ್ಲಿ ಶೇಂಗಾ ಬೆಳೆಯುವ ಕುರಿತು ಟ್ರ್ಯಾಕ್ಟರ್ ಚಾಲಿತ ಉಪಕರಣದಿಂದ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಯಿತು.

ಅಖಿಲ ಭಾರತ ಸಮನ್ವಯ ಶೇಂಗಾ ಸಂಶೋಧನಾ ಪ್ರಾಯೋಜನೆ, ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧಾ ಕೇಂದ್ರ ಸಹಭಾಗಿತ್ವದಲ್ಲಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Ground Nut Farming New Technology Information For Farmers

ಈ ತರಬೇತಿ ಕಾರ್ಯಕ್ರಮದಲ್ಲಿ ಬಬ್ಬೂರುಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಏರುಮಡಿ ಪದ್ದತಿಯಲ್ಲಿ ಶೇಂಗಾ ಬೆಳೆಯಲು ಏರು ಮಡಿ ನಿರ್ಮಿಸುವ ಟ್ರ್ಯಾಕ್ಟರ್ ಚಾಲಿತ ಉಪಕರಣದಿಂದ ಪ್ರಾತ್ಯಕ್ಷಿಕೆ ನೀಡಲಾಯಿತು.

ಚಿತ್ರುರ್ಗ ಜಿಲ್ಲೆಯ ಹಿರಿಯೂರಿನ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿಶೇಂಗಾ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ತಂತ್ರಜ್ಞಾನಗಳು ಕುರಿತು ಒಂದು ದಿನದ ತರಬೇತಿ ತರಬೇತಿ ಕಾರ್ಯಕ್ರ ನಡೆಸಿ ರೈತರಿಗೆ ಮಾಹಿತಿ ನೀಡಲಾಯಿತು.

70ಕ್ಕೂ ಅಧಿಕ ರೈತರು ಭಾಗಿ; ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 70ಕ್ಕೂ ಹೆಚ್ಚು ಆಸಕ್ತ ರೈತ ಮತ್ತು ರೈತ ಮಹಿಳೆಯರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಮಾಹಿತಿ ಪಡೆದುಕೊಂಡರು.

ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಸುರೇಶ ಡಿ. ಏಕಬೋಟೆ ಮಾತನಾಡಿ, "ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆ ನಿವಾರಿಸಲು ಕೃಷಿ ಯಾಂತ್ರೀಕರಣ ಅನಿವಾರ್ಯವಾಗಿದೆ, ಶೇಂಗಾ ಬೆಳೆಯಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಲು ಜೈವಿಕ ಗೊಬ್ಬರವಾದ ರೈಜೋಬಿಯಂ ಮತ್ತು ಬೇರು ಮತ್ತು ಕಾಂಡ ಕೊಳೆ ರೋಗದ ಸಮಸ್ಯೆ ಕಡಿಮೆ ಮಾಡಲು ಜೈವಿಕ ಪೀಡೆ ನಾಶಕವಾದ ಟ್ರೈಕೋಡರ್ಮಾದಿಂದ ಬೀಜೋಪಚಾರ ಪ್ರಮುಖ ಪಾತ್ರವಹಿಸಿದೆ" ಎಂದರು.

"ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಿಂದ ಹೊರತಂದಿರುವ ಸಂಶೋಧನಾ ತಾಂತ್ರಿಕತೆಗಳನ್ನು ರೈತರು ಅನುಸರಿಸುವ ನಿಟ್ಟಿನಲ್ಲಿ ನಮ್ಮ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನಕೇಂದ್ರ, ಬಬ್ಬೂರು ಫಾರಂ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಸದಾ ಸಿದ್ಧವಿದೆ" ಎಂದು ಭರವಸೆ ನೀಡಿದರು.

ಶೇಂಗಾತಳಿ ವಿಜ್ಞಾನಿ ಡಾ. ಬಿ. ಎನ್. ಹರೀಶ್ ಬಾಬು ಕರ್ನಾಟಕ ರಾಜ್ಯದ ಮಧ್ಯ ಒಣವಲಯ ಪ್ರದೇಶಕ್ಕೆ ಸೂಕ್ತವಾದಂತಹ ಶೇಂಗಾ ತಳಿಗಳು ಮತ್ತು ರೈತರು ಅನುಸರಿಸಬೇಕಾದ ಸುಧಾರಿತ ಬೇಸಾಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇತ್ತೀಚಿಗೆ ಬಿಡುಗಡೆ ಮಾಡಲಾದ ಸುಧಾರಿತ ತಳಿಯಾದ ಡಿ.ಹೆಚ್256 ರೈತರು ಹೆಚ್ಚಾಗಿ ಬೆಳೆಯಬೇಕೆಂದು ಮನವಿ ಮಾಡಿದರು.

ಈ ನಿಟ್ಟಿನಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧಾ ಕೇಂದ್ರದಲ್ಲಿ ಪ್ರಸ್ತುತ ಡಿ.ಹೆಚ್256 ಶೇಂಗಾ ತಳಿಯ ಬೀಜಗಳು ಲಭ್ಯವಿದ್ದು, ಆಸಕ್ತ ರೈತರು ಸಂಶೋಧನಾ ಕೇಂದ್ರದಿಂದ ಖರೀದಿಸಬಹುದೆಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನಿಕಾಂತ ಮಾತನಾಡಿ, "ಶೇಂಗಾ ಜಿಲ್ಲೆಯ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು, ಬೀಜೋಪಚಾರ, ಪೋಷಕಾಂಶಗಳ ನಿರ್ವಹಣೆ, ಸೂಕ್ತ ಸಮಯದಲ್ಲಿ ಕೀಟ ರೋಗಗಳ ನಿರ್ವಹಣೆ ಮತ್ತು ನೀರಾವರಿ ಸೌಲಭ್ಯವುಳ್ಳವರು ಏರುಮಡಿ ಪದ್ದತಿಯನ್ನು ಅನುಸರಿಸಿ ಶೇಂಗಾ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಿ" ಎಂದು ಕೋರಿದರು.

ಈ ತರಬೇತಿ ಶಿಬಿರದಲ್ಲಿ ತಳಕು ಹೋಬಳಿಯ ಪ್ರಗತಿಪರ ರೈತ ಗುಡಿಹಳ್ಳಿ ಬಡಗಿರಂಗಪ್ಪ ಅವರು ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಡಿ.ಹೆಚ್256 ಮತ್ತು ಕದರಿ ಲೇಪಾಕ್ಷಿ ಶೇಂಗಾತಳಿಯಿಂದ ಉತ್ತಮ ಇಳುವರಿ ಪಡೆದ ಹಾಗೂ ಬಿಳಿರಾಗಿ ಬೆಳೆದ ಅನುಭವ ಹಂಚಿಕೊಂಡರು.

ತಳಕು ಹೋಬಳಿಯ ಪ್ರಗತಿ ಪರರೈತ ಶರಣಪ್ಪ ಅವರು ಹಾಲಿ ನೀರಾವರಿಯಲ್ಲಿ ಏರು ಮಡಿ ಪದ್ದತಿಯಲ್ಲಿ ಡಿ.ಹೆಚ್256 ಉತ್ತಮವಾಗಿ ಬೆಳೆದಿದ್ದು, ಎಕರೆಗೆ 10-12 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು ಎಂದು ರೈತರಿಗೆ ಬೇಸಾಯದ ಕುರಿತು ಮಾಹಿತಿ ಹಂಚಿಕೊಂಡರು.

ತಾಂತ್ರಿಕ ಅಧಿಕಾರಿ (ಕೀಟಶಾಸ್ತ್ರ) ವಿಜಯ ಎಸ್. ಧಾನರಡ್ಡಿ, ಶೇಂಗಾ ಬೆಳೆಗೆ ಬಾಧಿಸುವ ಪ್ರಮುಖಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಂಜಿನಿಯರ್ ಡಾ.ರಾಜಶೇಖರ್ ಡಿ. ಬಾರ್ಕರ್ ಅವರು ಶೇಂಗಾ ಬೆಳೆ ಬಿತ್ತನೆಯಿಂದ ಕೊಯ್ಲು ಮತ್ತು ಕೊಯ್ಲೋತ್ತರ ಚಟುವಟಿಗಳಿಗೆ ಸೂಕ್ತವಾದಂತಹ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+