ಚಿಕ್ಕಮಗಳೂರು : ಎಸ್ಪಿ ಅಣ್ಣಾಮಲೈ ವರ್ಗಾವಣೆ ಮಾಡಿ
Recommended Video

ಚಿಕ್ಕಮಗಳೂರು, ಮಾರ್ಚ್ 07 : ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ವಿರುದ್ಧ ರೈತರು ಪ್ರತಿಭಟನೆ ಮಾಡಿದರು. ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಬಿಜೆಪಿ ನಾಯಕ, ಮಾಜಿ ಶಾಸಕ ಡಿ.ಎಸ್.ಸುರೇಶ್ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ತರೀಕೆರೆ ಬಂದ್ ನಡೆಸಲಾಗುತ್ತದೆ' ಎಂದು ಹೇಳಿದ್ದಾರೆ.
'ಅಣ್ಣಾಮಲೈ ಓರ್ವ ಪುಕ್ಕಲ, ಅವರು ಚಿಕ್ಕಮಗಳೂರು ಜಿಲ್ಲೆಗೆ ಬೇಡ, ಅವರನ್ನ ಕೂಡಲೇ ಜಿಲ್ಲೆಯಿಂದ ಕಿತ್ತೊಗೆಯಬೇಕು' ಎಂದು ಡಿ.ಎಸ್.ಸುರೇಶ್ ಆರೋಪಿಸಿದ್ದಾರೆ.

'ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಸ್ಪಿ ಅಣ್ಣಾಮಲೈ ಅವರು ಆಗಮಿಸಿ ರೈತರನ್ನು ನಿಂದಿಸಿದ್ದಾರೆ. ರೈತರು ಎಸ್ಪಿ ವಿರುದ್ಧ ಪ್ರತಿಭಟನೆ ನಡೆಸಿದಾಗ ಕಾರು ಹತ್ತಿಕೊಂಡು ಓಡಿ ಹೋದರು' ಎಂದು ಸುರೇಶ್ ಹೇಳಿದರು.
ಪ್ರತಿಭಟನೆ ಏಕೆ : ಭದ್ರಾ ಜಲಾಶಯ ಬಲದಂಡೆ ನಾಲೆಯಿಂದ ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳಲು ತಾಲೂಕು ಆಡಳಿತ ನಿಷೇಧ ಹೇರಿದೆ. ಇದನ್ನು ಖಂಡಿಸಿ ಇಂದು ದೋರನಾಶ್ ಗ್ರಾಮದಿಂದ ತರೀಕೆರೆ ಪಟ್ಟಣದ ವರೆಗೆ ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅಣ್ಣಾಮಲೈ ರೈತರನ್ನು ನಿಂದಿಸಿದ್ದಾರೆ ಎಂಬುದು ಆರೋಪವಾಗಿದೆ.












Click it and Unblock the Notifications