ಬಜೆಟ್ ಮತ್ತು ಕೃಷಿ ವಿಚಾರ ಸಂಕಿರಣ ಮಾರ್ಚ್ 10ಕ್ಕೆ
ಬೆಂಗಳೂರು, ಮಾರ್ಚ್ 9: ಬೆಂಗಳೂರು ಪ್ರೆಸ್ ಕ್ಲಬ್ ನ ಮಿನಿ ಹಾಲ್ ನಲ್ಲಿ ಶುಕ್ರವಾರ (ಮಾರ್ಚ್ 10) ಬೆಳಗ್ಗೆ 11ಕ್ಕೆ ಬಜೆಟ್ ಮತ್ತು ಕೃಷಿ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಿವಣ್ಣ ಅವರು ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಮರಡಿ, ಆರ್ಥಿಕ ವಿಶ್ಲೇಷಕ ಕೆಸಿ ರಘು, ಸಹಾಯಕ ಪ್ರಾಧ್ಯಾಪಕ ಡಾ ಲಕ್ಷ್ಮಣ, ಆಸ್ಟ್ರೇಲಿಯಾದ ಪ್ರೊ ಎಸ್ ಆರ್ ರಾವ್ ವಿಷಯ ಮಂಡಿಸಲಿದ್ದಾರೆ.[ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

ಸದ್ಯದಲ್ಲೇ ಕರ್ನಾಟಕದ ಬಜೆಟ್ ಮಂಡನೆ ಆಗಲಿದ್ದು, ಆ ಹಿನ್ನೆಲೆಯಲ್ಲಿ ಕೃಷಿ ಕುರಿತಾದ ಈ ವಿಚಾರ ಸಂಕಿರಣ ಉಪಯುಕ್ತವಾಗಲಿದೆ. ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ದೂರವಾಣಿ ಸಂಖ್ಯೆ 080-40938025 ಸಂಪರ್ಕಿಸಬಹುದು. ಇನ್ನು ವೆಬ್ ಸೈಟ್ ವಿಳಾಸ
ಕಳೆದ ಬಾರಿ ಬಜೆಟ್ ನ ಕೃಷಿ ಸಂಬಂಧಿ ಪ್ರಮುಖಾಂಶಗಳು
* ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ, ಯೋಜನೆಯಡಿ 100 ಮಾದರಿ ಗ್ರಾಮಗಳ ಅಭಿವೃದ್ಧಿ
* 25 ಜಿಲ್ಲೆಗಳ 129 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆ ಯಶಸ್ವಿ
* ಕೃಷಿ ಇಲಾಖೆಗೆ 4,344 ಕೋಟಿ ರೂ. ಅನುದಾನ
* ಸಹಕಾರ ಇಲಾಖೆಗೆ 1463 ಕೋಟಿ ರೂ. ಅನುದಾನ ಮೀಸಲು
* ಶೇ 3ರಷ್ಟು ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಯೋಜನೆ
* ನೀರಾವರಿ ಇಲಾಖೆಗೆ 14,477 ಕೋಟಿ ಅನುದಾನ ಮೀಸಲು












Click it and Unblock the Notifications