ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕಾದ ಎಡಿಸನ್ ನಲ್ಲಿ ಕೃಷ್ಣಾವತಾರ

ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಮಾತ್ರವಲ್ಲದೆ ಅಟ್ಲಾಂಟಿಕ್ ಸಾಗರವನ್ನು ದಾಟಿ ಅಮೆರಿಕಾದ ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 05 : ಶ್ರೀಕೃಷ್ಣ ದೇಗುಲ ಎಂದರೆ ಉಡುಪಿ. ಕನಕದಾಸರಿಗೊಲಿದ ಉಡುಪಿಯ ಶ್ರೀಕೃಷ್ಣ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿದ ಇತಿಹಾಸವಿದೆ. ಇದೀಗ ಇತಿಹಾಸ ಮರುಕಳಿಸಲಿದೆ.

ಹೌದು, ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಮಾತ್ರವಲ್ಲದೆ ಅಟ್ಲಾಂಟಿಕ್ ಸಾಗರವನ್ನು ದಾಟಿ ಅಮೆರಿಕಾದ ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

ಏನಪ್ಪಾ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದಲ್ಲಿ ಕೃಷ್ಣನ ಪ್ರತಿಮೆಯೇ ಎಂದು ನೀವು ಅಚ್ಚರಿಪಡಬಹುದು. ಆದರೆ ಇದು ಉಡುಪಿಯಲ್ಲಿ ಆಚಾರ್ಯ ಮಧ್ವಾಚಾರ್ಯರು 700 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಕೃಷ್ಣನಲ್ಲ.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣನ ಮೂರ್ತಿಯನ್ನು ಜೂನ್ 08 ರಂದು ಪ್ರತಿಷ್ಠಾಪಿಸಲಿದ್ದಾರೆ. ಇದರ ವಿಶೇಷಗಳೇನು? ಈ ವಿಗ್ರಹ ಪ್ರತಿಸ್ಠಾಪನೆಗೆ ತಗುಲಿರುವ ವೆಚ್ಚ ಇತರೆ ಮಾಹಿತಿಗೆ ಮುಂದೆ ಓದಿ.

35 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

35 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

ಅಮೆರಿಕಾದಲ್ಲಿ ತಲೆ ಎತ್ತಲಿರುವ ಈ ಪ್ರಥಮ ಕೃಷ್ಣ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಸುಮಾರು 35 ಕೋಟಿ ರು. ಅಧಿಕ ವೆಚ್ಚದಲ್ಲಿ 4.50 ಎಕರೆ ವಿಸ್ತೀರ್ಣವುಳ್ಳ ಅರಮನೆಯಂತಹ ಬೃಹತ್ ಚರ್ಚ್ ವೊಂದನ್ನು ಖರೀದಿಸಿದ್ದು, ಅದರಲ್ಲಿ ಈ ಸಾಲಿಗ್ರಾಮದಿಂದ ಮಾಡಲ್ಪಟ್ಟ ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ನಡೆಯಲಿದೆ.

ಶ್ರೀಕೃಷ್ಣ ವಿಗ್ರಹದ ವೈಶಿಷ್ಟ್ಯ

ಶ್ರೀಕೃಷ್ಣ ವಿಗ್ರಹದ ವೈಶಿಷ್ಟ್ಯ

ಸುಮಾರು ಮೂರೂವರೆ ಅಡಿ ಎತ್ತರದ ಕುಡುಗೋಲುಧಾರಿ ಶ್ರೀಕೃಷ್ಣನ ವಿಗ್ರಹವನ್ನು ನೇಪಾಳದ ಗಂಡಕಿ ನದಿಯ ಗೋಶಾಲೆ ಬಳಿಯೊಂದರಲ್ಲಿ ದೊರಕಿದ ಸಾಲಿಗ್ರಾಮ ಶಿಲೆಯಿಂದ ಕರಾವಳಿಯ ಶಿಲ್ಪಿಗಳು ರಚಿಸಿದ್ದಾರೆ. ಈ ಕೃಷ್ಣನ ಮೂರ್ತಿ ಮಾಡಲು ಆರು ತಿಂಗಳ ಕಾಲ ಕರಾವಳಿಯ ಶಿಲ್ಪಿಗಳು ಶ್ರಮಪಟ್ಟು ಮೂರ್ತಿ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಪ್ರತಿಷ್ಠಾಪನೆ

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಪ್ರತಿಷ್ಠಾಪನೆ

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣನ ಮೂರ್ತಿಯನ್ನು ಜೂನ್ 08 ರಂದು ಪ್ರತಿಷ್ಠಾಪಿಸಲಿದ್ದಾರೆ.

ಪೇಜಾವರ ಶ್ರೀಗಳಿಂದ ವಿಶೇಷ ಪೂಜೆ

ಪೇಜಾವರ ಶ್ರೀಗಳಿಂದ ವಿಶೇಷ ಪೂಜೆ

ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಅಮೆರಿಕಾದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀಕೃಷ್ಣನ ಮೂರ್ತಿಯನ್ನು ಬುಧವಾರ ಉಡುಪಿಯಲ್ಲಿ ಸರ್ವ ಗೌರವಗಳೊಂದಿಗೆ ಆದರದಿಂದ ಸ್ವಾಗತಿಸಲಾಯಿತು. ಶ್ರೀಕೃಷ್ಣನ ಮೂರ್ತಿಯನ್ನು ನವರತ್ನ ಖಚಿತ ರಥದಲ್ಲಿಟ್ಟು, ರಥಬೀದಿಯಲ್ಲಿ ಮೆರವಣಿಗೆ ಮಾಡಿ ಬಳಿಕ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ, ಪರ್ಯಾಯ ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಪೂಜಿಸಲಾಯಿತು.

English summary
The idol of Lord Sri Krishna sculpted out of saligrama shile, which will be installed at Sri Krishna Vrindavana at the branch mutt of Puttige Mutt at Edison in New Jersey, U.S., was given a rousing welcome here on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X