Get Updates
Get notified of breaking news, exclusive insights, and must-see stories!

ಕಲ್ಲಡ್ಕ ಮುಸ್ಲಿಂ ಯುವಕರ ಮೇಲೆ ದಾಳಿಯಲ್ಲಿ ಪ್ರಭಾಕರ್ ಭಟ್ ಕೈವಾಡ?

ಮಂಗಳೂರು, ಮೇ 30 : ಕಲ್ಲಡ್ಕ ಚೂರಿ ಇರಿತ ಪ್ರಕರಣದಲ್ಲಿ ಮಿಥುನ್ ಮತ್ತಿತರರು ಭಾಗಿಯಾಗಿಲ್. ಅವರ ಮೇಲೆ ದಾಖಲಿಸಿರುವ ಪ್ರಕರಣ ಕೈ ಬಿಡಬೇಕು ಎಂದು ಪ್ರಭಾಕರ ಭಟ್ ಪೊಲೀಸರ ಮೇಲೆ ಒತ್ತಡ ಹಾಕುತ್ತಿರುವುದು ಖಂಡನೀಯ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಆರೋಪಿಸಿದ್ದಾರೆ.

ಮೇ 26ರಂದು ನಮಾಝ್ ಮುಗಿಸಿ ಮನೆಗೆ ತೆರಳುತ್ತಿದ್ದ ಮುಹಮ್ಮದ್ ಹಾಶಿರ್ ಮತ್ತು ಮುಹಮ್ಮದ್ ಮಾಶೂಕ್ ಮೇಲೆ ಕಾರಿನಲ್ಲಿ ಬಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಕೃತ್ಯದಲ್ಲಿ ಪ್ರಭಾಕರ್ ಭಟ್ ಅವರ ಕೈವಾಡವಿರುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದರು. [ಕಲ್ಲಡ್ಕದಲ್ಲಿ ಮುಸ್ಲಿಂ ಯುವಕರ ಮೇಲೆ ಹಿಂದೂಗಳ ಹಲ್ಲೆ]

Prabhakar Bhat is Behind Kalladka Incident, He should be Arrested:SDPI

ಪೊಲೀಸ್ ಇಲಾಖೆ ಮಿಥುನ್ ನ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು ಮತ್ತು ಆತನನ್ನು ಗಡಿಪಾರು ಮಾಡಬೇಕು. ಇನ್ನು ಪ್ರಕರಣವನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆಗೆ ಅಭಿನಂದನೆ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+