Get Updates
Get notified of breaking news, exclusive insights, and must-see stories!

ತಿಂಥಣಿ ಬ್ರಿಜ್‌ : ಜ.12ರಿಂದ ಹಾಲುಮತ ಸಂಸ್ಕೃತಿ ವೈಭವ 2017

ರಾಯಚೂರು, ಜನವರಿ. 10 : ಶ್ರೀ ಸಿದ್ದರಾಮಾನಂದ ಪುರಿ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಗುಲ್ಬರ್ಗ ವಿಭಾಗದ ವತಿಯಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ನಲ್ಲಿ ಜನವರಿ 12, 13 ಮತ್ತು 14ರಂದು 'ಹಾಲುಮತ ಸಂಸ್ಕೃತಿ ವೈಭವ-2017'ನಡೆಯಲಿದೆ.

ಜನವರಿ 12ರಂದು ಮೊದಲನೇ ದಿನ 'ಹಾಲುಮತ ಸಂಸ್ಕೃತಿ ವೈಭವ 2017 ಕಾರ್ಯಮದ ದಿವ್ಯ ಸಾನಿಧ್ಯವನ್ನುಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

Halumatha Samskruti Vaibhava 2017 at Thintini bridge from January 12 to 14

ಕಾರ್ಯಕ್ರಮದ ಅಂಗವಾಗಿ ಜನವರಿ 12ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ,ಟಗರು ಕಾಳಗ, ರಕ್ತದಾನ, ನೇತ್ರ ತಪಾಸಣೆ ಸೇರಿದಂತೆ ಆರೋಗ್ಯ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಜನವರಿ 13ರಂದು 12ನೇ ರಾಷ್ಟ್ರೀಯ ಗೊಂಡ ಸಮಾವೇಶ ಸಹ ನಡೆಯಲಿದೆ. ಜನವರಿ 14ರಂದು ಕೊನೆದಿನ ಸಂಕ್ರಾಂತಿ ಹಬ್ಬದ ಅಂಗವಾಗಿ ಎತ್ತುಗಳಿಗೆ ಭಾರ ಎಳೆಯುವ ಸ್ಪರ್ಧೆ ಅಲ್ಲದೇ, ಮೂರು ದಿನಗಳ ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+