Ukraine Power: ಉಕ್ರೇನ್ ವಿರುದ್ಧ ಮತ್ತೆ ರಷ್ಯಾ ಸೇನೆಯ ಭೀಕರ ದಾಳಿ, ಕೋಟ್ಯಂತರ ಜನ ಕತ್ತಲೆಯಲ್ಲಿ
ರಷ್ಯಾ ತನ್ನ ಸೇನೆಯ ಸಹಾಯದಿಂದ ವೀಕೆಂಡ್ ದಾಳಿ ನಡೆಸಿ, ಉಕ್ರೇನ್ ನೆಲದಲ್ಲಿ ಮತ್ತಷ್ಟು ಕತ್ತಲೆ ಆವರಿಸುವಂತೆ ಮಾಡಿದೆ. ಶನಿವಾರ ದಿಢೀರ್ ರಷ್ಯಾ ಸೇನೆ ಉಕ್ರೇನ್ ದೇಶದ ಇಂಧನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿ ದಾಳಿ ಮಾಡಿದೆ. ಹೀಗೆ ರಷ್ಯಾ ಸೇನೆಯಿಂದ ದಿಢೀರ್ ಎದುರಾಗಿರುವ ದಾಳಿಯನ್ನು ಕಂಡು ಸ್ವತಃ ಉಕ್ರೇನ್ ಜನರು ಓಡಿ ಹೋಗುವ ವಾತಾವರಣ ನಿರ್ಮಾಣ ಆಗಿತ್ತು. ಈ ಮೂಲಕ ಉಕ್ರೇನ್‌ನಲ್ಲಿ ಮತ್ತಷ್ಟು ಕತ್ತಲು ಆವರಿಸಿದ್ದು, ಮೊದಲೇ ಚಳಿಯಲ್ಲಿ ಒದ್ದಾಡುತ್ತಿದ್ದ ಉಕ್ರೇನ್ ಜನರಿಗೆ ಈಗ ಇನ್ನಷ್ಟು ಸವಾಲು ಎದುರಾಗಿದೆ.
ರಷ್ಯಾ ಈಗಾಗಲೇ ಉಕ್ರೇನ್‌ನ ಬಹುತೇಕ ವಿದ್ಯುತ್ ಸರಬರಾಜು ವಲಯವನ್ನು ಧ್ವಂಸಗೊಳಿಸಿದ್ದು, ಈ ಹಿನ್ನೆಲೆ ತನಗೆ ಬೇಕಾಗಿರುವ ವಿದ್ಯುತ್ ಪಡೆಯಲು ಉಕ್ರೇನ್ ಯುರೋಪ್ ದೇಶದ ಸ್ನೇಹಿತ ದೇಶಗಳ ಕಾಲು ಹಿಡಿಯುತ್ತಿದೆ. ಮತ್ತೊಂದು ಕಡೆ ಉಕ್ರೇನ್‌ನ ಕೆಲವು ಭಾಗದಲ್ಲಿ ವಿದ್ಯುತ್ ಸರಬರಾಜು ಇದ್ದ ಕಾರಣಕ್ಕೆ ಜನರು ಅಲ್ಲಿಗೆ ವಲಸೆ ಬರುತ್ತಿದ್ದರು. ಆದರೆ ಇದೀಗ ಇನ್ನುಳಿದ ಭಾಗದಲ್ಲಿ ಕೂಡ ರಷ್ಯಾ ಸೇನೆ ದಾಳಿ ಮಾಡುತ್ತಿದ್ದು, ಉಕ್ರೇನ್ ದೇಶದ ಬಹುತೇಕ ಭಾಗದಲ್ಲಿ ಕರೆಂಟ್ ಕೈಕೊಡುವಂತೆ ಪ್ಲಾನ್ ಮಾಡಿದೆ. ದೂರದ ಯುಎಇ ನೆಲದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಮಾತುಕತೆಗಳು ನಡೆಯುವ ಸಮಯದಲ್ಲೇ ಇಂತಹ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಚಳಿ.. ಚಳಿ.. -10 ಡಿಗ್ರಿ ಸೆಲ್ಸಿಯಸ್ ತಾಪಮಾನ!
ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಉಕ್ರೇನ್ ನೆಲದಲ್ಲಿ ಭೀಕರ ಚಳಿ ಆರಂಭವಾಗಿ, ಜನರಿಗೆ ಬದುಕಲು ಆಗದ ಪರಿಸ್ಥಿತಿ ಎದುರಾಗಿದೆ. ಈಗ -10 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಚಳಿಯು ಅಲ್ಲಿದೆ. ಹೀಗಿದ್ದಾಗ, ವಿದ್ಯುತ್ ಇಲ್ಲದೇ ಜೀವನ ಮಾಡುವುದೇ ಕಷ್ಟದ ಕೆಲಸ. ಇಷ್ಟೆಲ್ಲದರ ನಡುವೆ ದಿಢೀರ್ ದಾಳಿ ಮಾಡಿರುವ ರಷ್ಯಾ ಸೇನೆ ಮತ್ತಷ್ಟು ಭಾಗದಲ್ಲಿ ವಿದ್ಯುತ್ ಕೈಕೊಡುವ ರೀತಿ ಮಾಡಿದೆ. ಹೀಗಾಗಿ ಉಕ್ರೇನ್ ರಾಜಧಾನಿ ಕೀವ್ ಭಾಗದಲ್ಲಿ ಸುಮಾರು 6,000 ಕಟ್ಟಡಗಳು ಹೀಟರ್ ಸಿಗದೆ ನರಳಿವೆ. ಜನರಿಗೆ ಒಳಗೆ ಬದಕಲು ಆಗದೆ, ಹೋರಗೆ ಹೋಗಲು ಆಗದೆ ಒದ್ದಾಟ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಜಾಗತಿಕ ಸಮುದಾಯ ರಷ್ಯಾ ಸೇನೆಯ ಈ ರೀತಿ ದಾಳಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಉಕ್ರೇನ್ ಆಗ್ರಹಿಸಿದೆ.
ಸಾವು ನೋವಿನ ಬಗ್ಗೆ ಕೂಡ ವರದಿ
ರಷ್ಯಾ ದಾಳಿಯಲ್ಲಿ ಇದೀಗ ಒಬ್ಬರು ಉಕ್ರೇನ್ ಪ್ರಜೆ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಿದ್ದು, 19 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ರಾಜಧಾನಿ ಕೀವ್ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. 2022 ಫೆಬ್ರವರಿ ತಿಂಗಳಲ್ಲಿ ಪೂರ್ಣ ಪ್ರಮಾಣದ ಆಕ್ರಮಣ ನಂತರ ಉಕ್ರೇನ್‌ನ ವಿದ್ಯುತ್ ಜಾಲ ಧ್ವಂಸಗೊಳಿಸಿದೆ ರಷ್ಯಾ. ಈ ಚಳಿಗಾಲದಲ್ಲಿ ಇಂಧನ ಸೌಲಭ್ಯದ ಮೇಲೆ ತನ್ನ ಅತ್ಯಂತ ತೀವ್ರವಾದ ಬಾಂಬ್ ದಾಳಿ ಶುರು ಮಾಡಿದೆ. ರಷ್ಯಾ ಸೇನೆಯ ತೀವ್ರ ದಾಳಿ ಪರಿಣಾಮ ಉಕ್ರೇನ್ ಜನರು ವಲಸೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬೇರೆ ಬೇರೆ ಭಾಗದ ಮೇಲೂ ರಷ್ಯಾ ಸೇನೆ ತೀವ್ರವಾಗಿ ದಾಳಿ ಮಾಡುತ್ತಿರುವುದು ಸಮಸ್ಯೆ ಹೆಚ್ಚಿಸಿದೆ.
ಇತ್ತೀಚಿನ ರಷ್ಯಾ ದಾಳಿಗಳ ಬಳಿಕ ಉಕ್ರೇನ್‌ನ ರಾಜಧಾನಿಯಲ್ಲಿ 8,00,000ಕ್ಕೂ ಹೆಚ್ಚು ಜನರು ಹಾಗೂ ಚೆರ್ನಿಹಿವ್‌ನ ಉತ್ತರ ಭಾಗದಲ್ಲಿ 4,00,000 ಜನ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಉಕ್ರೇನ್ ಉಪ ಪ್ರಧಾನ ಮಂತ್ರಿ ಒಲೆಕ್ಸಿ ಕುಲೆಬಾ ಮಾಹಿತಿ ನೀಡಿದ್ದು, ರಷ್ಯಾ ತನ್ನ ರಾತ್ರಿ ವೇಳೆ ದಾಳಿಯಲ್ಲಿ 375 ಡ್ರೋನ್ & 21 ಕ್ಷಿಪಣಿ ಹಾರಿಸಿದೆ ಎಂದು ಉಕ್ರೇನ್‌ನ ವಾಯುಪಡೆ ಆರೋಪ ಮಾಡಿದೆ. ಒಟ್ನಲ್ಲಿ ಈ ಯುದ್ಧ ನಿಲ್ಲುವ ತನಕ ಇಡೀ ಜಗತ್ತಿಗೆ ನೆಮ್ಮದಿ ಇಲ್ಲ ಎಂಬಂತಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications