ಕಾಶ್ಮೀರದ ಚಳಿ, ಶೃಂಗೇರಿ ಜಗದ್ಗುರುಗಳು ಹಾಗೂ ಮಾಘ ಸ್ನಾನ...

Subscribe to Oneindia Kannada

ನಟಿ ಪ್ರಿಯಾಂಕಾ ಚೋಪ್ರಾಗೆ ಇಂಗ್ಲಿಷ್ ಧಾರಾವಾಹಿಯಲ್ಲಿನ ನಟನೆಗಾಗಿ ಪ್ರಶಸ್ತಿ ಬಂದಿದೆ. ಅದನ್ನು ಸ್ವೀಕರಿಸಿದ ಸಂಭ್ರಮದ ಚಿತ್ರವೊಂದು ಇಲ್ಲಿದೆ. ಇನ್ನು ಸೂರತ್ ನ ಸ್ವಾಮಿ ನಾರಾಯಣ್ ನ ಗುರುಕುಲದ ವಿದ್ಯಾರ್ಥಿಗಳು ಮಾಘ ಸ್ನಾನದ ಆಚರಣೆ ಮಾಡಿದ್ದಾರೆ. ಅವರ ಕೈಲಿರುವ ಮಡಿಕೆ, ಜತೆಗೆ ಅದೆಷ್ಟು ಮಂದಿ ವಿದ್ಯಾರ್ಥಿಗಳಿದ್ದಾರೋ ನೋಡಿ.

ಬರಾಕ್ ಒಬಾಮ ಅಮೆರಿಕದ ರಾಷ್ಟ್ರಾಧ್ಯಕ್ಷರಾಗಿ ತಮ್ಮ ಕೊನೆಯ ಪತ್ರಿಕಾಗೋಷ್ಠಿಯನ್ನು ವೈಟ್ ಹೌಸ್ ನಲ್ಲಿ ಮಾಡಿ ಮುಗಿಸಿದ್ದಾರೆ. ಲಂಡನ್ ನ ಮೇಡಂ ಟ್ಯುಸ್ಸಾಡ್ ನಲ್ಲಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಣದ ಪ್ರತಿಕೃತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸಗಳಾಗುತ್ತಿವೆ. ಪ್ರಪಂಚದ ಅಯ್ದ ಪ್ರಖ್ಯಾತರ ಮೇಣದ ಪ್ರತಿಕೃತಿಗಳನ್ನು ಈ ಸಂಗ್ರಹಾಲಯದಲ್ಲಿ ಇಡಲಾಗುತ್ತದೆ.[ಟ್ರಂಪ್ ಮೇಲಿನ ಸಿಟ್ಟು ಬಟ್ಟೆ ಮೇಲೆ ಯಾಕೆ ಚೆಲುವೆ?]

ಆ ಸಾಲಿನಲ್ಲಿ ಈಗ ಟ್ರಂಪ್ ಕೂಡ ಸೇರ್ಪಡೆಯಾಗಿದ್ದಾರೆ. ಸೇನೆಯ ಬಗ್ಗೆ ತಿಳಿದುಕೊಳ್ಳಿ ಎಂದು ಸಾರ್ವಜನಿಕರಿಗಾಗಿ ಏರ್ಪಡಿಸುವ ತುಂಬ ಒಳ್ಳೆ ಕಾರ್ಯಕ್ರಮ ರಾಂಚಿಯಲ್ಲಿ ನಡೆದಿದೆ. ಅಲ್ಲಿ ಸಮರ ಕಲೆ ಪ್ರದರ್ಶಿಸುತ್ತಿರುವ ಯೋಧರು, ಅತ್ಯಾಧುನಿಕ ಶಸ್ತ್ರಾಸ್ತ್ರ ಹೇಗಿರುತ್ತದೆ ಎಂದು ಕೈಲಿ ಹಿಡಿದು ನೋಡುತ್ತಿರುವ ಯುವತಿ, ಕಾಶ್ಮೀರದಲ್ಲಿ ಮುಂದುವರಿದಿರುವ ಚಳಿ..ಫೋಟೋಗಳು ಇಲ್ಲಿವೆ.

ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಬಳಿಯ ಸಂಸೆಯಲ್ಲಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಸಮರ ಕಲೆ ಪ್ರದರ್ಶನ

ರಾಂಚಿಯ ಮೊರಹಾಬಡಿ ಮೈದಾನದಲ್ಲಿ ಸೇನಾ ಯೋಧರು "ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ" ಮೇಳದಲ್ಲಿ ಸಮರ ಕಲೆ ಪ್ರದರ್ಶಿಸಿದರು.

ವಿದ್ಯಾರ್ಥಿಗಳ ಮಾಘ ಸ್ನಾನ

ಸೂರತ್ ನ ಸ್ವಾಮಿ ನಾರಾಯಣನ್ ಗುರುಕುಲದ ವಿದ್ಯಾರ್ಥಿಗಳು 'ಮಾಘ ಸ್ನಾನ'ದ ಅಂಗವಾಗಿ ವಿಶೇಷ ಆಚರಣೆ ಮಾಡಿದರು.

ಪ್ರಶಸ್ತಿ ಪಡೆದ ಪ್ರಿಯಾಂಕಾ

ಲಾಸ್ ಏಂಜಲೀಸ್ ನ ಮೈಕ್ರೋಸಾಫ್ಟ್ ಥಿಯೇಟರ್ ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕ್ಷಣ.

ಕಡೆಯ ಪತ್ರಿಕಾಗೋಷ್ಠಿ

ರಾಷ್ಟ್ರಾಧ್ಯಕ್ಷರಾಗಿ ವಾಷಿಂಗ್ಟನ್ ನ ವೈಟ್ ಹೌಸ್ ನಲ್ಲಿ ಬುಧವಾರ ಕೊನೆಯ ಪತ್ರಿಕಾ ಗೋಷ್ಠಿ ನಡೆಸಿದ ಬರಾಕ್ ಒಬಾಮ.

ಆಧುನಿಕ ಶಸ್ತ್ರಾಸ್ತ್ರದ ಜೊತೆಗೆ ಯುವತಿ

ರಾಂಚಿಯ ಮೊರಹಾಬಡಿ ಮೈದಾನದಲ್ಲಿ "ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ" ಮೇಳದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರವನ್ನು ಕೈಲಿ ಹಿಡಿದಿದ್ದ ಯುವತಿ.

ಮೇಣದ ಟ್ರಂಪ್

ಅಮೆರಿಕದ ಚುನಾಯಿತ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಣದ ಪ್ರತಿಕೃತಿಯ ಕೊನೆ ಹಂತದ ಕೆಲಸ ಲಂಡನ್ ನ ಮೇಡಂ ಟ್ಯುಸ್ಸಾಡ್ ನಲ್ಲಿ ನಡೆಯುತ್ತಿದೆ.

ಚಳಿ ತಡ್ಕೋ ಪುಟ್ಟಾ

ಉತ್ತರ ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ್ ರಸ್ತೆಯ ಜತೆಗೆ ತಂಗ್ ಮಾರ್ಗ ನಲ್ಲೂ ಹಿಮಪಾತ ವಿಪರೀತವಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ತನ್ನ ಪುಟಾಣಿ ಮರಿಯನ್ನು ಅವಚಿ ಕೂತಿದ್ದ ಮಂಗವೊಂದು ಕಂಡಿದ್ದು ಹೀಗೆ.

English summary
Various international photos with a major theme of winter- represnt through PTI photos.
Please Wait while comments are loading...