ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಗೆ ಸೇರಿದ 148 ಕೋಟಿ ರು. ಮೌಲ್ಯದ ಭೂಮಿ ಅಕ್ರಮ ಎಂದ ಇ.ಡಿ.

ಜಗನ್ ರೆಡ್ಡಿ ಅಕ್ರಮ ಆಸ್ತಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದಿಂದ 148 ಕೋಟಿ ರು. ಮೌಲ್ಯದ ಜಮೀನು ಪತ್ತೆ. ಈ ಜಮೀನಿನ ವಿಚಾರದಲ್ಲಿ ಜಗನ್ ಅಕ್ರಮ ವ್ಯವಹಾರವಿದೆ ಎಂದು ಹೇಳಿರುವ ಜಾರಿ ನಿರ್ದೇಶನಾಲಯ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 28: ಆಂಧ್ರ ಪ್ರದೇಶದ ಪುಲಿವೆಂದುಲ ಶಾಸಕ ಹಾಗೂ ಆಂಧ್ರಪ್ರದೇಶದ ವಿರೋಧ ಪಕ್ಷದ ನಾಯಕ ಜಗನ್ ರೆಡ್ಡಿ ಅವರಿಗೆ ಸೇರಿದ ಸುಮಾರು 148.89 ಕೋಟಿ ರು. ಮೌಲ್ಯದ ಜಮೀನನ್ನು ಅಕ್ರಮ ಆಸ್ತಿಯೆಂದು ಕೇಂದ್ರದ ಜಾರಿ ನಿರ್ದೇಶನಾಲಯ ಪರಿಗಣಿಸಿದೆಯೆಂದು 'ಡೆಕ್ಕನ್ ಕ್ರಾನಿಕಲ್' ವರದಿ ಮಾಡಿದೆ.

ಜಗನ್ ರೆಡ್ಡಿ ವಿರುದ್ಧ ಅಕ್ರಮ ಆಸ್ತಿಯ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಪ್ರಕಾರ, ಈ ಭೂಮಿಯ ಅಸಲಿಗೆ ಜಗನ್ ಅವರ ಆಪ್ತ ನಿಮ್ಮಗಡ್ಡ ಪ್ರಸಾದ್ ಎಂಬುವರಿಗೆ ಸೇರಿದ ಕಂಪನಿಗೆ ಸೇರಿದ್ದಾಗಿದೆ. ಆದರೆ, ಈ ಕಂಪನಿಯು ಜಗನ್ ರೆಡ್ಡಿಯವರ ಅಕ್ರಮ ಆದಾಯವನ್ನು ಬಚ್ಚಿಡಲೆಂದೇ ಸೃಷ್ಟಿಸಿರುವ ಖೋಟಾ ಕಂಪನಿಯಾಗಿದ್ದು, ಈ ಭೂಮಿಯ ಮೇಲೆ ಜಗನ್ ಅವರು ಹಣ ಹೂಡಿರುವುದರಿಂದ ಇದನ್ನು ಅಕ್ರಮವೆಂದು ಹೇಳಲಾಗಿದೆ.

Money laundering case: ED attaches Jagan Reddy's assets worth Rs 148 cr

ಈ ಹಿಂದೆ, ಜಗನ್ ವಿರುದ್ಧದ ಅಕ್ರಮ ಆಸ್ತಿಯ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಡೆಸಿತ್ತು. ಸಿಬಿಐ ವರದಿಯ ಆಧಾರದಲ್ಲಿ ಇದೀಗ ಜಾರಿ ನಿರ್ದೇಶನಾಲಯವು ಜಗನ್ ಅವರಿಂದ ಆಗಿದೆಯೆಂದು ಹೇಳಲಾಗಿರುವ ಆರ್ಥಿಕ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದೆ. 2004ರಲ್ಲಿ ಜಗನ್ ಅವರು ಹಲವಾರು ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ, ಅವುಗಳಲ್ಲಿ ಜಗನ್ ಅವರಿಗೆ ಬೇಕಾದ ಹಲವಾರು ಮಂದಿ ಹಣ ಹೂಡುವಂತೆ ಮಾಡಿದ್ದರು.

ಹಣ ಹೂಡಿದ ಎಲ್ಲರೂ ಆಗಿನ ಆಂಧ್ರಪ್ರದೇಶ ಸರ್ಕಾರದಿಂದ ಹಲವಾರು ಯೋಜನೆಗಳಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದವರೇ. ಆಗ, ಜಗನ್ ಅವರ ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರೇ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆಗ, ಸರ್ಕಾರದಿಂದ ಹಲವಾರು ಆರ್ಥಿಕ ಅನುಕೂಲತೆಗಳನ್ನು ಅಕ್ರಮವಾಗಿ ಪಡೆದ ಹಲವಾರು ಮಂದಿ, ಜಗನ್ ಆರಂಭಿಸಿದ ಕಂಪನಿಗಳಲ್ಲಿ ಬಂಡವಾಳ ಹೂಡಿದ್ದರು. ಅಂಥದ್ದೊಂದು ಕಂಪನಿಯ ಒಡೆತನದಲ್ಲೇ ಈಗ 149 ಕೋಟಿ ರು. ಮೌಲ್ಯದ ಭೂಮಿಯನ್ನು ಪತ್ತೆ ಹಚ್ಚಲಾಗಿದ್ದು, ಅದನ್ನು ಅಕ್ರಮಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

English summary
The Enforcement Directorate (ED) has attached assets worth over Rs 148 crore in connection with its money laundering probe in cases related to YSR Congress leader Jagan Mohan Reddy and others, the agency said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X