Get Updates
Get notified of breaking news, exclusive insights, and must-see stories!

ಕಂಬನಿ ಮಿಡಿಯುವಂತೆ ಮಾಡಿದ ಮರಿಕೋತಿ ರೋದನ

ಚಾಮರಾಜನಗರ, ಮಾರ್ಚ್ 04 : ತಾಯಿಯೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಕೋತಿ ಮರಿಯೊಂದು ವಿಧಿಯ ಅಟ್ಟಹಾಸದ ಎದುರು ಅನಾಥವಾಗಿ ರೋಧಿಸುತ್ತಿದ್ದ ದೃಶ್ಯ ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಜನತೆಯ ಮನಕಲಕುವಂತೆ ಮಾಡಿತು.

ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೋತಿಯೊಂದು ತನ್ನ ಮರಿಯೊಂದಿಗೆ ತೆರಳುತ್ತಿತ್ತು. ಆದರೆ ತಾಯಿಕೋತಿ ಆಯುಷ್ಯ ಗಟ್ಟಿಯಿರಲಿಲ್ಲವೋ? ಅಥವಾ ಮರಿಕೋತಿಯ ದುರಾದೃಷ್ಟವೋ? ಅಪರಿಚಿತ ವಾಹನವೊಂದು ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದಿತ್ತು.

Heart wrenching scene as child monkey mourns death of mother

ಮುಂದೆ ಬರುತ್ತಿರುವ ವಾಹನ ತನ್ನ ಪಾಲಿನ ಯಮ ಎಂಬುದು ಆ ತಾಯಿಕೋತಿಗೆ ಗೊತ್ತಾಗುವ ವೇಳೆಗೆ ಅದರ ಮೇಲೆಯೇ ಹರಿದು ಹೋಗಿತ್ತು ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿತ್ತು. ಆದರೆ ಅದೃಷ್ಟವಶಾತ್ ಮರಿ ಬದುಕಿತು.

ರಕ್ತಸಿಕ್ತವಾಗಿ ಬಿದ್ದ ತಾಯಿಯ ಬಳಿ ಹೋದ ಮರಿಗೆ ತಾಯಿ ಸತ್ತಿದ್ದಾಳೆ ಎಂಬುವುದೇ ಗೊತ್ತಾಗಲಿಲ್ಲ. ತಾಯಿ ಮಲಗಿದ್ದಾಳೆ ಎಂದು ತಿಳಿದ ಆ ಮರಿಕೋತಿ ಅದರೊಂದಿಗೆ ಆಡುತ್ತಾ ಇತ್ತು. ಆದರೆ ತಾಯಿ ಅಲುಗಾಡದೆ ಇದ್ದಾಗ ಹಿಂದೆ ಮುಂದೆ ಓಡಾಡುತ್ತಾ ಅಲ್ಲೇ ರೋಧಿಸತೊಡಗಿದ್ದನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವಂತಿತ್ತು.

ಇದನ್ನು ನೋಡಿದ ಜನರ ಹೃದಯ ಕರಗದೇ ಇರಲು ಸಾಧ್ಯವೆ? ಹತ್ತಿರ ಬಂದ ಜನ ಹನುಮ ಸ್ವರೂಪಿ ಕೋತಿಗೆ ಹೂವು, ಅರಿಶಿನ, ಕುಂಕುಮ ಹಚ್ಚಿ ಅಂತ್ಯಕ್ರಿಯೆ ನಡೆಸಿದರು. ಮರಿಕೋತಿಯನ್ನು ಅಲ್ಲಿಂದ ಓಡಿಸಲು ಮಾಡಿದ ಯತ್ನ ಫಲಪ್ರದವಾಗಲಿಲ್ಲ. ಅದು ರೋಧಿಸುತ್ತಲೇ ಇತ್ತು. ಇದನ್ನು ಕಂಡ ವ್ಯಕ್ತಿಯೊಬ್ಬರ ಮನಕರಗಿ ಸಾಕಲು ತಾವೇ ಮನೆಗೆ ಕೊಂಡೊಯ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+