ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2017ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿ ಪ್ರಕಟ

ಎರಡನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 2017ನೇ ಸಾಲಿನ 22 ಸಾರ್ವಜನಿಕ ರಜಾ ದಿನಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. 2017ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 29: 2017ನೇ ಸಾಲಿನ ಅಧಿಕೃತ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 22 ರಜಾದಿನಗಳನ್ನು ಘೋಷಣೆ ಮಾಡಿದೆ. ಎಂದಿನಂತೆ ಎಲ್ಲಾ ಎರಡನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳು ಇರುತ್ತವೆ.

ಜ. 14 ಸಂಕ್ರಾತಿ, ಜ. 26 ಗಣರಾಜ್ಯೋತ್ಸವ, ಫೆ. 24 ಮಹಾಶಿವರಾತ್ರಿ, ಮಾ. 29 ಚಾಂದ್ರಮಾನ ಯುಗಾದಿ, ಏ.14 ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ, ಏ.29 ಬಸವ ಜಯಂತಿ, ಮೇ.1 ಕಾರ್ಮಿಕರ ದಿನಾಚರಣೆ, ಜೂ.26 ರಂಜಾನ್, ಆ.15 ಸ್ವಾತಂತ್ರ್ಯ ದಿನಾಚರಣೆ, ಆ.25 ಗಣೇಶ ಚತುರ್ಥಿ, ಸೆ.2 ಬಕ್ರೀದ್, ಸೆ.19 ಮಹಾಲಯ ಅಮಾವಾಸ್ಯೆ, ಸೆ.29. ಮಹಾನವಮಿ, ಆಯುಧ ಪೂಜೆ, ಸೆ.30. ವಿಜಯದಶಮಿ, ಅ.2 ಗಾಂಧಿ ಜಯಂತಿ, ಅ.5 ವಾಲ್ಮೀಕಿ ಜಯಂತಿ, ಅ.18 ನರಕ ಚತುರ್ದಶಿ, ಅ.20 ಬಲಿಪಾಡ್ಯಮಿ, ದೀಪಾವಳಿ, ನ.1 ಕನ್ನಡ ರಾಜ್ಯೋತ್ಸವ, ನ.6 ಕನಕದಾಸ ಜಯಂತಿ, ಡಿ.1 ಈದ್ ಮಿಲಾದ್, ಡಿ.25 ಕ್ರಿಸ್ ಮಸ್ ರಜಾ ದಿನಗಳಾಗಿವೆ.

State Government declares public holidays for the year 2017

ರಜಾ ಪಟ್ಟಿಯಲ್ಲಿ 9.4.2017 ಮತ್ತು 1.10.2017 ಭಾನುವಾರಗಳಂದು ಬಂದಿರುವ ಮಹಾವೀರ ಜಯಂತಿ ಮತ್ತು ಮೊಹರಂ ಕಡೇ ದಿನ ರಜಾದಿನಗಳನ್ನೊಳಗೊಂಡಿರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಬಹುದು. ತುರ್ತು ಕೆಲಸದ ಕುರಿತು ಇಲಾಖಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸರ್ಕಾರ ತಿಳಿಸಿದೆ.

State Government declares public holidays for the year 2017

ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದಲ್ಲಿ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆ ಬದಲಾಗಿ ಹಬ್ಬದ ರಜಾ ಮಂಜೂರು ಮಾಡುವುದಾಗಿ ಸರ್ಕಾರ ತಿಳಿಸಿದೆ.

ಇನ್ನು ದಿನಾಂಕ 17.10.2017 ಮಂಗಳವಾರ ತುಲಾ ಸಂಕ್ರಮಣ ಹಾಗು ದಿನಾಂಕ 04.12.2017 ಸೋಮವಾರದ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಲಾಗಿದೆ.

English summary
List of public holidays declared by Karnataka government for the year 2017. govt has also declared list of restricted holidays. government employees get 22 holidays in year 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X