ಕಾಫಿನಾಡಿನಲ್ಲಿ ಬಹುತೇಕ ಭರ್ತಿಯಾದ ಹೋಂ ಸ್ಟೇ, ವಸತಿಗೃಹ, ರೆಸಾರ್ಟ್‌ಗಳು, ಪ್ರವಾಸಿಗರ ಪರದಾಟ
ಚಿಕ್ಕಮಗಳೂರು, ಡಿಸೆಂಬರ್, 28: 2022ಕ್ಕೆ ಗುಡ್ ಬೈ ಹೇಳುವ ಕಾಲ ಸಮೀಪದಲ್ಲಿಯೇ ಇದೆ. ವರ್ಷಾಂತ್ಯವನ್ನು ಸಂತೋಷದಿಂದ ಸಂಭ್ರಮಿಸುತ್ತಿದ್ದು, ಈ ಮೂಲಕ 2023ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು ಅಂತಾ ಎಲ್ಲರೂ ಕಾತರದಿಂದಿ ಕಾಯುತ್ತಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಕಾಫಿನಾಡಿನಲ್ಲಿ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಈಗಾಗಲೇ ತುಂಬಿ ತುಳುಕುತ್ತಿವೆ. 2022ಕ್ಕೆ ಟಾಟಾ ಹೇಳಿ, 2023ರನ್ನು ಸ್ವಾಗತಿಸಲು ಈಗಾಗಲೇ ಪ್ರವಾಸಿಗರು ಭರ್ಜರಿಯಾಗಿ ತಯಾರಿ ಮಾಡಿಕೊಂಡಿದ್ದಾರೆ. ಜನರು ತಮ್ಮ ಮನಸಿಗೆ ಮುದ ನೀಡುವ ತಾಣಗಳಿಗೆ ಹೋಗಿ ಹೊಸವರ್ಷವನ್ನು ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಂತೂ ಎಲ್ಲಾ ಹೋಟೆಲ್‌ಗಳು ಕೂಡ ಫುಲ್ ಬುಕ್ ಆಗಿವೆ. ಎಲ್ಲಿ ನೋಡಿದರೂ ಕೂಡ ಪ್ರವಾಸಿಗರ ದಂಡೇ ಕಾಣುತ್ತದೆ. ವರ್ಷಾಂತ್ಯ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿಯಲ್ಲಿ ಪ್ರತಿ ದಿನ ಜನಸಾಗರವೇ ಸೇರುತ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ಫುಲ್ ಬುಕ್ ಆಗಿವೆ. ಬಹುತೇಕರು ವರ್ಷಾಂತ್ಯ ಹಾಗೂ ಹೊಸವರ್ಷದ ಸಂಭ್ರಮಾಚರಣೆಗಾಗಿಯೇ ಹೋಟೆಲ್‌ಗಳು 2 ವಾರಗಳ ಮುಂಚೆಯೇ ಬುಕ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪ್ರವಾಸಿಗರು ಕಾಫಿನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಜ್ಜಾಗಿದ್ದಾರೆ. ಕೆಲವರು ತಿಂಗಳ ಹಿಂದೆಯೇ ಹೋಟೆಗಳಲ್ಲಿ ರೂಂಗಳನ್ನು ಬುಕ್ಕಿಂಗ್ ಮಾಡಿದ್ದಾರೆ.

ಪ್ರವಾಸಿಗರಿಗೆ ಕೊರೊನಾ 4ನೇ ಅಲೆಯ ಆತಂಕ
ಕಾಫಿನಾಡಿನಲ್ಲಿರುವ ಸುಮಾರು 800ಕ್ಕೂ ಅಧಿಕ ಹೋಂಸ್ಟೇ ಹಾಗೂ ರೆಸಾರ್ಟ್‍ಗಳು ಬಹುತೇಕ ಭರ್ತಿ ಆಗಿವೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಆತಂಕದಲ್ಲೇ ಪ್ರವಾಸಿಗರು ಹೊಸವರ್ಷಾಚರಣೆಯನ್ನು ಮಾಡಿದ್ದರು. ಈ ವರ್ಷ ಮತ್ತೆ ಕೊರೊನಾ 4ನೇ ಅಲೆ ಎದುರಾಗಿದ್ದು, ಸರ್ಕಾರ ಯಾವಾಗ-ಯಾವ ಕಾನೂನು ತರುತ್ತದೆಯೋ ಅನ್ನುವ ಆತಂಕದಲ್ಲೇ ಪ್ರವಾಸಿಗರು ಈಗಲೇ ಪ್ರವಾಸ ಕೈಗೊಂಡಿದ್ದಾರೆ. ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗದಂತಹ ಅನುಭವವನ್ನು ಕಾಫಿನಾಡು ನೀಡುತ್ತಿದೆ.

ಆಗಮಿಸುತ್ತಲೇ ಇದೆ ಪ್ರವಾಸಿಗರ ದಂಡು
ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯ ವಿಸ್ಮಯವನ್ನು ಕಂಡು ಪ್ರವಾಸಿಗರು ಮೈಮರೆಯುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಇದೇ ಸರಿಯಾದ ಸಮಯ ಎಂದಕೊಂಡು ಪ್ರವಾಸಿಗರಿಂದ ದುಬಾರಿ ಹಣವನ್ನು ಕೇಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಎಷ್ಟು ಹಣ ಕೊಟ್ಟರೂ ಸಿಗದ ರೂಂಗಳು
ಜಿಲ್ಲೆಯ ಬಹುತೇಕ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳು ಭರ್ತಿಯಾಗಿದ್ದು, ಪ್ರವಾಸಿಗರು ತಂಗಲು ಪರದಾಡುವಂತೆ ಆಗಿದೆ. ಎಷ್ಟು ಹಣ ಕೊಟ್ಟರೂ ಕೂಡ ತಂಗಲು ರೂಂಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಹೋಂ ಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನು ಈಡೇರಿಸುವುದಕ್ಕೂ ಸನ್ನದ್ಧರಾಗಿದ್ದಾರೆ.

ಇದೀಗ ವ್ಯಾಪಾರಿಗಳಿಗೆ 4ನೇ ಅಲೆಯ ಆತಂಕ
ಒಟ್ಟಾರೆ, ಕಳೆದೆರಡು ವರ್ಷಗಳಿಂದ ಕೊರೊನಾ, ಲಾಕ್‌ಡೌನ್‌ನಿಂದ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರಿಗೆ ಒಳ್ಳೆ ಸಮಯದಲ್ಲೇ ಕೊರೊನಾ 4ನೇ ಅಲೆ ನಾಲಿಗೆ ಮೇಲಿನ ಬಿಸಿ ತುಪ್ಪದಂತಾಗಿದೆ. ಆದರೂ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ. ಸರ್ಕಾರ ಹೊಸವರ್ಷ ಮುಗಿಯುವವರೆ ಆದರೂ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು. ನಾವು ಎಲ್ಲಾ ರೀತಿಯಲ್ಲೂ ಮುಂಜಾಗೃತೆ ವಹಿಸುತ್ತೇವೆ ಎಂದು ಹೋಂಸ್ಟೇ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications