Vande Bharat; ಬೆಂಗಳೂರು-ಕಲಬುರಗಿ ರೈಲು, ನಿಲ್ದಾಣ, ವೇಳಾಪಟ್ಟಿ

ಬೆಂಗಳೂರು, ಮಾರ್ಚ್ 08: ಕರ್ನಾಟಕಕ್ಕೆ ಲೋಕಸಭೆ ಚುನಾವಣೆ ಹತ್ತಿರವಿರುವಾಗಲೇ ವಂದೇ ಭಾರತ್ ರೈಲು ಕೊಡುಗೆಯಾಗಿ ಸಿಕ್ಕಿದೆ. ಬೆಂಗಳೂರು-ಕಲಬುರಗಿ ನಡುವಿನ ನೂತನ ರೈಲಿಗೆ ಮಾರ್ಚ್ 9ರಂದು ಹಸಿರು ನಿಶಾನೆ ತೋರಿಸಲಾಗುತ್ತದೆ. ಮಾರ್ಚ್‌ 12ರಿಂದ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ಸಂಚಾರ ನಡೆಸುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ನರೇಂದ್ರ ಮೋದಿ ಮಾರ್ಚ್ 9ರಂದು ಚಾಲನೆ ನೀಡಲಿದ್ದಾರೆ.

Bengaluru Kalaburagi Vande Bharat Train Schedule

ಈ ಕುರಿತು ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ. ಉದ್ಘಾಟನೆ ದಿನದ ವಿಶೇಷವಾಗಿ ರೈಲು ಸಂಚಾರ ನಡೆಸುವ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ಕೊಟ್ಟಿದ್ದಾರೆ. 547 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ.

ವೇಳಾಪಟ್ಟಿ, ನಿಲ್ದಾಣಗಳು: ಸಂಸದ ಡಾ. ಉಮೇಶ್‌ ಜಾಧವ್ ಫೇಸ್‌ಬುಕ್ ಪೋಸ್ಟ್ ಮಾಹಿತಿಯಂತೆ, 'ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿಯಿಂದ ಬೆಂಗಳೂರಿಗೆ ರೈಲು ದಿನಾಂಕ 09/03/2024 ರಂದು ಉದ್ಘಾಟನೆ. ವಿಶೇಷ ರೈಲು ಕಲಬುರಗಿ ಇಂದ ಬೈಯಪನಹಳ್ಳಿ (ಬೆಂಗಳೂರು) ವರೆಗೆ ಹೊರಡಲಿದೆ' ಎಂದು ಹೇಳಿದ್ದಾರೆ.

"ಕಲಬುರಗಿ ರೈಲ್ವೆ ನಿಲ್ದಾಣದಿಂದ ಸಾಂಯಂಕಾಲ 05:10 ಗಂಟೆಗೆ ಹೊರಡಲಿದೆ. ಈ ರೈಲು ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಆದೋನಿ, ಗುಂತಕಲ್, ಅನಂತಪುರ, ಧರ್ಮವರಂ, ಯಲಹಂಕ ಮತ್ತು ಬೈಯಪನ್ಹಳ್ಳಿಯಲ್ಲಿ ನಿಲ್ಲಲಿದೆ' ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 12ರಿಂದ ಸಂಚಾರವನ್ನು ಪ್ರಾರಂಭಿಸಲಿದೆ. ಆದರೆ ಈ ಮಾರ್ಗದ ದರ ಎಷ್ಟು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿಲ್ಲ.

ಸದ್ಯ ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳು ಕೆಎಸ್ಆರ್‌ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ ನಿಲ್ದಾಣದಿಂದ ಸಂಚಾರ ನಡೆಸುತ್ತಿವೆ. ಆದರೆ ಈ ಕಲಬುರಗಿ ರೈಲು ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತನಕ ಸಂಚಾರ ನಡೆಸಲಿದೆ.

ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಆಗಮಿಸಲು ಬಸ್, ಕ್ಯಾಬ್, ನಮ್ಮ ಮೆಟ್ರೋ ಸಂಪರ್ಕವಿದೆ. ಆದ್ದರಿಂದ ಪ್ರಯಾಣಿಕರು ಸುಲಭವಾಗಿ ನಗರದೊಳಗೆ ಪ್ರವೇಶ ಮಾಡಬಹುದು. ಈ ಹೊಸ ರೈಲು ಸೇವೆ ಮೂಲಕ ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಬೇಕು ಎಂಬ ಬೇಡಿಕೆಯೂ ಈಡೇರಿದಂತಾಗಿದೆ.

ಕಲಬುರಗಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅಗತ್ಯವಾದ ಪಿಟ್‌ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವ ಬೇಡಿಕೆಗೆ ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿತ್ತು. ಈಗ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ.

ಬುಕ್ಕಿಂಗ್ ಆರಂಭ: ದಿನಾಂಕ 09/03/2024ರಂದು ಕಲಬುರಗಿಯಿಂದ ಬೆಂಗಳೂರಿಗೆ ಉದ್ಘಾಟನೆಗೊಳ್ಳಲಿರುವ ವಿಶೇಷ ರೈಲಿನ ಟಿಕೆಟ್ ಬುಕಿಂಗ್ ಈಗಾಗಲೇ ಶುರುವಾಗಿದೆ. ಇದರ ಸದುಪಯೋಗ ಪಡೆದುಕೊಳಬೇಕೆಂದು ನಾನು ಪ್ರಯಾಣಿಕರಲ್ಲಿ ವಿನಂತಿಸುತ್ತೇನೆ. ಹಾಗೆಯೇ ನಾಳೆ ಸಾಯಂಕಾಲ 04 ಗಂಟೆಗೆ ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಈ ಕಾರ್ಯಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ ಎಂದು ಸಂಸದ ಡಾ. ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+