ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ

ಏಕಮುಖ ಸಂಚಾರದ ಮಾರ್ಗಗಳು:
ಮೈಸೂರು - ಟಿ. ನರಸೀಪುರ ರಸ್ತೆ ಮಾರ್ಗವಾಗಿ ಬರುವ ವಾಹನಗಳು ವಡೆಯಾಂದಳ್ಳಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಲಕಾಡು - ಪೋಲೀಸ್ ಠಾಣೆ - ಅರ್ಕೇಶ್ವರ ದೇವಸ್ಥಾನ - ವಿಜಾಪುರ - ಟಿ. ಮೇಗಡಹಳ್ಳಿ - ಕಾಳಬಸವನಹುಂಡಿ ಗ್ರಾಮ ಮಾರ್ಗವಾಗಿ ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಏಕಮುಖವಾಗಿ ಸಂಚರಿಸುವುದು.
ಬೆಳಕವಾಡಿ ಮಾರ್ಗವಾಗಿ ಬರುವ ವಾಹನಗಳು ಅರ್ಕೇಶ್ವರ ದೇವಸ್ಥಾನದ ಕಡೆಯಿಂದ ಬಲಕ್ಕೆ ತಿರುಗಿ ವಿಜಾಪುರ ಗ್ರಾಮದ ಮುಖಾಂತರ ಮುಡುಕುತೊರೆಗೆ ಹೋಗುವಂತೆ ಏಕಮುಖವಾಗಿ ಸಂಚರಿಸುವುದು.
ಎಲ್ಲಾ ವಾಹನಗಳ ಸಂಚಾರ ನಿರ್ಬಂದ ಮಾರ್ಗಗಳು:
ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಹಳೇಬೀದಿ, ವೈದ್ಯನಾಥೇಶ್ವರ ದೇವಸ್ಥಾನದ ಸುತ್ತಮುತ್ತ ಮತ್ತು ತಲಕಾಡು ಕಾವೇರಿ ಸ್ನಾನಘಟ್ಟದವರೆಗೆ ಹಾಗೂ ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಕೆ.ಇ.ಬಿ. ವೃತ್ತದವರೆಗೆ (ತಲಕಾಡು ಮುಖ್ಯ ರಸ್ತೆಯಿಂದ).
(ದಟ್ಸ್ ಕನ್ನಡವಾರ್ತೆ)












Click it and Unblock the Notifications