ವಿಂಬಲ್ಡನ್ : 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಫೆಡರರ್

Posted By:
Subscribe to Oneindia Kannada

ವಿಂಬಲ್ಡನ್, ಜುಲೈ 11: ಸ್ವಿಟ್ಜರ್ಲೆಂಡ್ ನ ರೋಜರ್‌ ಫೆಡರರ್ ಅವರು ಗ್ರ್ಯಾನ್ ಸ್ಲ್ಯಾಮ್ ನ ಲ್ಲಿ 50ನೇ ಬಾರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಇದು ರೋಜರ್ ಅವರು 15ನೇ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಕೂಡಾ ಆಗಿದೆ.

ವಿಂಬಲ್ಡನ್: ನಡಾಲ್ ಅವರ ಕಳಪೆ ಸಾಧನೆಯ ಹಿನ್ನೋಟ

ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ರೋಜರ್‌, ಪ್ರೀ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ 6-4, 6-2, 6-4ರಲ್ಲಿ ಗ್ರಿಗೊರ್ ಡಿಮಿಟ್ರೊವ್ ಅವರನ್ನು ಸೋಲಿಸಿದರು.

Wimbledon 2017: Roger Federer reaches 15th at Wimbledon 50th Grand Slam quarter-final

ಮೂರನೇ ಸೀಡೆಡ್ ಆಟಗಾರ, 35 ವರ್ಷ ವಯಸ್ಸಿನ ರೋಜರ್ ಅವರು ಡಿಮಿಟ್ರೋವ್ ವಿರುದ್ಧ ಸತತ 6ನೇ ಬಾರಿಗೆ ಜಯ ದಾಖಲಿಸಿದ್ದಾರೆ. ದಾಖಲೆಯ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಜರ್ ಅವರು ಕೆನಡಾದ ಮಿಲೋಸ್ ರೋನಿಕ್(6ನೇ ಸೀಡೆಡ್ ಆಟಗಾರ) ವಿರುದ್ಧ ಮುಂದಿನ ಪಂದ್ಯವನ್ನಾಡಲಿದ್ದಾರೆ.

ರೋಜರ್ ಫೆಡರರ್ ಅವರು 35ನೇ ವಯಸ್ಸಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪುವ ಮೂಲಕ ಟೂರ್ನಮೆಂಟ್ ನ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಸಾರ್ವಕಾಲಿಕ ದಾಖಲೆ ಕೆನ್ ರೊಸ್ ವಾಲ್ ಹೆಸರಿನಲ್ಲಿದೆ. 1971ರಲ್ಲಿ ರೊಸ್ ವಾಲ್ ಅವರು ತಮ್ಮ 39ನೇ ವಯಸ್ಸಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ ಸಾಧನೆ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Roger Federer reached his 50th Grand Slam quarter-final and 15th at Wimbledon on Monday with a 6-4, 6-2, 6-4 win over Grigor Dimitrov.
Please Wait while comments are loading...