ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕಬಡ್ಡಿಗೆ ಅನೂಪ್ ಕುಮಾರ್ ಗುಡ್ ಬೈ!

Written By: Ramesh
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್. 18 : ಭಾರತ ಕಬಡ್ಡಿ ತಂಡದ ನಾಯಕ ಅನೂಪ್ ಕುಮಾರ್ ನಿವೃತ್ತಿಯ ಸುಳಿವು ನೀಡಿದ್ದಾರೆ. ಸಧ್ಯ ನಡೆಯುತ್ತಿರುವ ವಿಶ್ವಕಪ್ ಕಬಡ್ಡಿ ಟೂರ್ನಿ ಮುಗಿದ ಬಳಿಕ ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿಯಿಂದ ನಿವೃತ್ತಿಯಾಗುವುದಾಗಿ ಅನೂಪ್ ಕುಮಾರ್ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯದಿಂದ ದೂರ ಉಳಿಯಲಿರುವ ಅನೂಪ್ ಕುಮಾರ್ ಪ್ರೋ ಕಬಡ್ಡಿ ಲೀಗ್ ನಲ್ಲಿ ತಮ್ಮ ಆಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ವಿಶ್ವಕಪ್ ಕಬಡ್ಡಿ ಮುಕ್ತಾಯದ ನಂತರ ಅಂತರರಾಷ್ಟ್ರೀಯ ಕಬಡ್ಡಿಯಿಂದ ದೂರ ಉಳಿಯುವೆ. ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿದೆ. ಅದು ಈ ವರ್ಷ ನನಸಾಗಲಿದೆ ಎಂದು ಅನೂಪ್ ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Anup Kumar

ಹರಿಯಾಣ ಮೂಲದ ಅನಪ್ 2006 ರಲ್ಲಿ ಅಂತಾರಾಷ್ಟ್ರೀಯ ಕಬಡ್ಡಿಗೆ ಪ್ರವೇಶ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್ ಕಬಡ್ಡಿ ಟೂರ್ನಿಯಲ್ಲಿ ರಾಕೇಶ್ ಕುಮಾರ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೆ.

ಅನೂಪ್ ಉಪನಾಯಕರಾಗಿ ಬಡ್ತಿ ಪಡೆದುಕೊಂಡಿದ್ದರು. ನಂತರ 2016 ರಲ್ಲಿ ಭಾರತ ಕಬಡ್ಡಿ ತಂಡದ ನಾಯಕರಾಗಿ ಆಯ್ಕೆಯಾದರು.

ಇವರು ಕಳೆದು ಮೂರು ಪ್ರೋ ಕಬಡ್ಡಿ ಲೀಗ್ ನಲ್ಲಿ ಯು ಮುಂಬ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2012ರಲ್ಲಿ ಇವರು ಅರ್ಜನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian skipper Anup Kumar on Sunday (Oct 16) informed he will go into international retirement after the ongoing Kabaddi World Cup.
Please Wait while comments are loading...