ನಡಾಲ್ ಸೋಲಿಸಿ 5ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದ ಫೆಡರರ್

Posted By:
Subscribe to Oneindia Kannada

ಮೆಲ್ಬೋರ್ನ್, ಜನವರಿ 29: ಆಸ್ಟ್ರೇಲಿಯನ್ ಓಪನ್ ಅಂತಿಮ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು 6-4, 3-6, 6-1, 3-6, 6-3 ರಲ್ಲಿ ಸ್ಪೇನಿನ ರಾಫೆಲ್ ನಡಾಲ್ ವಿರುದ್ಧ ಜಯ ಸಾಧಿಸಿ 5ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಒಟ್ಟಾರೆ, 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

6 ವರ್ಷಗಳ ಬಳಿಕ ದಿಗ್ಗಜರಾದ ರೋಜರ್ ಫೆಡರರ್ ಮತ್ತು ನಡಾಲ್ ನಡುವಿನ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಸುತ್ತಿನ ಸೆಣಸಾಟ, ಅಭಿಮಾನಿಗಳಿಗೆ ಸಕತ್ ಖುಷಿಕೊಟ್ಟಿದೆ.

Roger Federer beats Rafael Nadal 6-4 3-6 6-1 3-6 6-3 to win Australian Open 2017

ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ನಡಾಲ್-ಫೆಡರರ್ 8 ವರ್ಷಗಳ ಬಳಿಕ ಪ್ರಶಸ್ತಿ ಸೆಣಸಾಟದಲ್ಲಿ ಎದುರಾದರು. 2009ರ ಟೂರ್ನಿಯ ಕೊನೇ ಫೈನಲ್ ಮುಖಾಮುಖಿಯಲ್ಲಿ ನಡಾಲ್ ಚಾಂಪಿಯನ್ ಆಗಿದ್ದರು. 2014ರ ಫ್ರೆಂಚ್ ಓಪನ್​ನಲ್ಲಿ ಕೊನೇ ಬಾರಿ ಚಾಂಪಿಯನ್ ಆಗಿದ್ದ ನಡಾಲ್ ಅವರು ಯಾವುದೇ ಪ್ರಮುಖ ಟೂರ್ನಿ ಫೈನಲ್ ತಲುಪಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Swiss Roger Federrer beats Spain's Rafael Nadal 6-4,3-6,6-1,3-6,6-3 to win 5th Australian Open overall 18th Grand Slam Title.
Please Wait while comments are loading...