ರಿಯೋ ಜಿಮ್ನಾಸ್ಟಿಕ್ : ದೀಪಾ ಕರ್ಮಾಕರ್ ಫೈನಲಿಗೆ ಜೈ ಹೋ!

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 14: ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಸಿಹಿ-ಕಹಿ ಎರಡು ಫಲಿತಾಂಶ ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಪದಕ ಬೇಟೆಯಾಡಲು ಭಾರತೀಯ ಕ್ರೀಡಾಪಟುಗಳಿಗೆ ಸಾಧ್ಯವಾಗಿಲ್ಲ. ಆದರೆ, ಪದಕದ ಆಸೆಯನ್ನು ಭಾರತೀಯ ಕ್ರೀಡಾಪಟುಗಳು ಜೀವಂತವಾಗಿರಿಸಿಕೊಂಡಿದ್ದಾರೆ.

ಆಗಸ್ಟ್.14(ಭಾನುವಾರ) ರಂದು ಭಾರತಕ್ಕೆ ಚಿನ್ನದ ಪದಕ ಗ್ಯಾರಂಟಿ ಅಂತ ಭಾರತೀಯ ಅಭಿಮಾನಿಗಳು ಭಾರತದ ಹೆಮ್ಮೆ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Dipa Karmakar

ದೇಶೆದೆಲ್ಲಡೆ ದೀಪಾ ಚಿನ್ನ ಗೆಲ್ಲಲಿ ಅಂತ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಶುಭಹಾರೈಕೆಗಳ ಮಹಾಪೂರವೇ ಹರಿಬರುತ್ತಿವೆ. ಅದರಂತೆಯೇ ದೀಪಾ ಅವರು ಆ 15ಕ್ಕೆ 70ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತಕ್ಕೆ ಚಿನ್ನದ ಉಡುಗೊರೆ ನೀಡಲು ಉತ್ಸುಕರಾಗಿದ್ದಾರೆ.

ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿರುವ ಬೆನ್ನಲ್ಲೆ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟಿರುವ ಜನತೆಗೆ ಪದಕ ಗೆದ್ದು ತೋರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಾನು ನರ್ವಸ್ ಆಗಿಲ್ಲ ಬದಲಾಗಿ ಪುಳಕಿತಗೊಂಡಿರುವೆ, ಮುಂದಿನ ಪಂದ್ಯದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಿ ನನ್ನಲ್ಲಿನ ಅತಿ ಉತ್ತಮ ಆಟ ಹೊರಹಾಕುವೆ' ಎಂದು ವಿಶ್ವಾಸದಿಂದ ನುಡಿದಿರುವ ದೀಪಾ ತಮ್ಮ ಅಭಿಮಾನಿಗಳಿಗೆ ಆಗಸ್ಟ್ 14 ಶುಭದಿನವಾಗಲಿ ಎಂದು ಹಾರೈಸುವಂತೆ ಕೋರಿದ್ದಾರೆ.


ತರಬೇತಿ, ಪಂದ್ಯದ ಪೂರ್ವಭಾವಿ ಅಭ್ಯಾಸ ಮುಂದುವರೆದಿದ್ದು, ಸಕಲ ಸೌಲಭ್ಯ ಒದಗಿಸಿರುವ ಭಾರತ ಸರ್ಕಾರ ಮತ್ತು ರಿಯೋ ಪ್ರಾಯೋಜಕತ್ವದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೀಪಾ ಅವರ ಕೋಚ್ ವಿಶ್ವೇಶ್ವರ ನಂದಿ ದೀಪಾ ಈ ಬಾರಿ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇರಿಸಿದ್ದಾರೆ ಎಂದಿದ್ದಾರೆ. ರಿಯೋನಲ್ಲಿ ಭಾರತ ಚಿನ್ನ ಗೆದ್ದು ಬರಲಿ ಎಂದು ಹಾರೈಸೋಣ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Debutant Olympian Karmakar finished eighth in the qualifying round to reach the individual vault final in artistic gymnastics at the quadrennial multi-discipline games in Rio de Janeiro, Brazil. Karmakar became the first Indian gymnast to enter the final on her debut at the quadrennial multi-discipline games
Please Wait while comments are loading...