ಅಬ್ಬಾ ಪೋಗ್ಬಾ! ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು

Posted By:
Subscribe to Oneindia Kannada

ಮ್ಯಾಂಚೆಸ್ಟರ್, ಆಗಸ್ಟ್ 09: ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ದಿಗ್ಗಜ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಫ್ರೆಂಚ್ ತಂಡದ ಮಿಡ್ ಫೀಲ್ಡರ್ ಪಾಲ್ ಪೋಗ್ಬಾ ಸೇರಿಕೊಂಡಿದ್ದಾರೆ. ಕ್ಲಬ್ ಸೇರಿದ ಪೋಗ್ಬಾ ಈಗ ಅತ್ಯಂತ ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾರೆ.

ಪ್ರತಿ ಸೀಸನ್ ಆರಂಭಕ್ಕೂ ಮುನ್ನ ಫುಟ್ಬಾಲ್ ಕ್ಲಬ್ ನಡುವೆ ಆಟಗಾರರ ಅದಲು ಬದಲು, ವರ್ಗಾವಣೆ ಮಾಮೂಲಿ ವಿಷಯ. ಆದರೆ, ಪೋಗ್ಬಾ ವರ್ಗಾವಣೆ ಮೊತ್ತ ಕೇಳಿದರೆ ಹೌಹಾರಬೇಕಾಗುತ್ತದೆ. ಬರೋಬ್ಬರಿ 93.8 ಮಿಲಿಯನ್ ಪೌಂಡ್ ಕೊಟ್ಟು ಪೋಗ್ಬಾರನ್ನು ಇಪಿಎಲ್ 2016 ಸೀಸನ್ ಗೆ ಬರಮಾಡಿಕೊಳ್ಳಲಾಗಿದೆ.[ಮಾರುಕಟ್ಟೆ ಮೌಲ್ಯ: ಮೆಸ್ಸಿ, ಜೋಕೊವಿಕ್, ಪೋಗ್ಬಾ]

1GBP = 86.84751 ರು ನಷ್ಟಿದೆ. ಭಾರತೀಯ ಕರೆನ್ಸಿ ಲೆಕ್ಕಾಚಾರಂದರೆ ಈ ಮೊತ್ತ 813 ಕೋಟಿ ರು ಗೂ ಅಧಿಕ ಎನ್ನಬಹುದು.[ಕರೆನ್ಸಿ ಕನ್ವರ್ಟರ್ ಇಲ್ಲಿದೆ ಕ್ಲಿಕ್ ಮಾಡಿ]

Official: Manchester United sign Paul Pogba for record £89 million

ಕರ್ನಾಟಕದ 2009ರ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ಒಟ್ಟು ಘೋಷಿತ ಆಸ್ತಿ ಮೊತ್ತ ಈ ಸಮಯದಲ್ಲಿ ನೆನಪಾಗುತ್ತದೆ. 815ರಿಂದ 900 ಕೋಟಿ ರು ಡಿಕ್ಲೇರ್ ಮಾಡಿದ್ದರು. [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳು]

ಫುಟ್ಬಾಲ್ ಜಗತ್ತಿನ ಅತ್ಯಂತ ದುಬಾರಿ ಮೊತ್ತ ಇದಾಗಿದ್ದು, ಬಹುಬೇಡಿಕೆಯ ಮಿಡ್ ಫೀಲ್ಡ್ ಆಟಗಾರ ಪೊಗ್ಬಾ ಇನ್ಮುಂದೆ ರೆಡ್ ಡೆವಿಲ್ ಆಗಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೇರಲಿದ್ದಾರೆ. [ಶಾಕಿಂಗ್ : 'ತಂಡ ಸೇರಬೇಕಾದ್ರೆ, ಕೋಚ್ ಜತೆ ಮಂಚ ಏರಬೇಕಾಗಿತ್ತು']

ದಾಖಲೆಯ ಮೊತ್ತ: ಯೂವೆಂಟಸ್ ನಲ್ಲಿ ಆಡುತ್ತಿದ್ದ ಪೊಗ್ಬಾರನ್ನು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಸೇರಿಸಿಕೊಳ್ಳಲು ಸತತ ಏಳು ದಿನಗಳ ಚರ್ಚೆ ನಡೆಸಿ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಲಾಗಿದೆ. [ಕೆಂಪು ಜರ್ಸಿ ತೊಟ್ಟ ಫುಟ್ಬಾಲ್ ನ ಬಹುಬೇಡಿಕೆಯ ಕೋಚ್]

ಈ ಮೂಲಕ ಗರೆತ್ ಬೇಲ್ ಅವರ ಟ್ರಾನ್ಸ್ ಫರ್(ಟೊಟೆಮ್ ಹ್ಯಾಮ್ ನಿಂದ ರಿಯಲ್ ಮ್ಯಾಡ್ರಿಡ್, 2013) ಮೊತ್ತ 86 ಮಿಲಿಯನ್ ಪೌಂಡ್ ದಾಖಲೆಯನ್ನು ಪೊಗ್ಬಾ ಮುರಿದಿದ್ದಾರೆ. ಈ ಮೂಲಕ ಫುಟ್ಬಾಲ್ ಇತಿಹಾಸದ ಅತ್ಯಂತ ಶ್ರೀಮಂತ ಆಟಗಾರ ಎಂಬ ಹೆಗ್ಗಳಿಕೆ ಫ್ರಾನ್ಸ್ ನ ಪೊಗ್ಬಾಗೆ ಸಲ್ಲುತ್ತಿದೆ. [ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಲ್ ವೇಳಾಪಟ್ಟಿ]

23 ವರ್ಷ ವಯಸ್ಸಿನ ಪೊಗ್ಬಾ ಅವರು 2012ರಲ್ಲಿ ಯುನೈಟೆಡ್ ತಂಡ ತೊರೆದು ಯೂವೆಂಟಸ್ ಸೇರಿಕೊಂಡಿದ್ದರು. ಈಗ ಓಲ್ಡ್ ಟ್ರಾಫರ್ಡ್ ನಲ್ಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. [ರೊನಾಲ್ಡೋ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ]

ಮುಂದಿನ 5 ವರ್ಷಗಳ ಕಾಲ ಇಂಗ್ಲೆಂಡಿನ ಪ್ರತಿಷ್ಠಿತ ಕ್ಲಬ್ ಪರ ಆಡಲಿದ್ದಾರೆ. ಈ ಸೀಸನ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ರೂನಿ ಅಲ್ಲದೆ, ಜ್ಲಟಾನ್ ಇಬ್ರಾಹಿಮೊವಿಕ್, ಹೆನ್ರಿಕ್ ಖಿತಾರ್ಯಾನ್, ಎರಿಕ್ ಬೈಲಿ ರಂಥ ಪ್ರತಿಭಾವಂತರು ಆಡುತ್ತಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
English Premier League giants Manchester United have finally signed French midfielder Paul Pogba for a world record transfer fee of £93 million.
Please Wait while comments are loading...