ಟಿಸಿಎಸ್ ವಿಶ್ವ 10ಕೆಗೆ ಮೈಕ್ ಪೊವೆಲ್ ರಾಯಭಾರಿ

Posted By:
Subscribe to Oneindia Kannada

ಬೆಂಗಳೂರು, ಮೇ 04: ವಿಶ್ವ 10ಕೆ ಓಟಕ್ಕೆ ದಿನಗಣನೆ ಆರಂಭವಾಗಿದ್ದು, ಮೇ 15 ಭಾನುವಾರದಂದು ಟಿಸಿಎಸ್ ವಿಶ್ವ 10ಕೆ ಬೆಂಗಳೂರಿನ ಒಂಬತ್ತನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ಒಲಿಂಪಿಯನ್ ಮತ್ತು ಲಾಂಗ್ ಜಂಪಿನಲ್ಲಿ ವಿಶ್ವ ದಾಖಲೆ ಹೊಂದಿರುವ ಅಮೆರಿಕದ ಮೈಕ್ ಪೊವೆಲ್ ಅವರು ಬೆಂಗಳೂರು ಫೇವರಿಟ್ ರನ್ ನ ಅಂತಾರಾಷ್ಟ್ರೀಯ ಕೂಟದ ರಾಯಭಾರಿಯಾಗಿದ್ದಾರೆ ಎಂದು ಆಯೋಜಕರಾದ ಪ್ರೋಕಾಮ್ ಇಂಟರ್ ನ್ಯಾಷನಲ್ ಪ್ರಕಟಿಸಿದೆ.

ನೋಂದಣಿ ಅಂತಿಮ ಗಡುವು ಮುಕ್ತಾಯದ ಮುನ್ನವೇ ದಾಖಲೆ ಸಮಯದಲ್ಲಿ 10ಕೆ ಓಟಕ್ಕೆ ನೋಂದಾವಣೆ ಕೊನೆಗೊಳ್ಳುವ ಮೂಲಕ ಉತ್ಸಾಹಿ ಬೆಂಗಳೂರು ಓಟಗಾರರು ಕೂಟದಲ್ಲಿ ಭಾಗಿಯಾಗುತ್ತಿರುವುದನ್ನು ಬಿಂಬಿಸಿದೆ. ಕೂಟದ ರಾಯಭಾರಿಯಾಗಿರುವ ಮೈಕ್ ಪೊವೆಲ್ ಕೂಟದಲ್ಲಿ ಭಾಗಿಯಾಗುತ್ತಿರುವ ಕುರಿತು ತಮ್ಮ ರೋಮಾಂಚನ ಹಂಚಿಕೊಂಡಿದ್ದಾರೆ. [ಟಿಸಿಎಸ್ ವಿಶ್ವ 10ಕೆ ಬೆಂಗಳೂರು ರಾಯಭಾರಿ ಪುನೀತ್]

'ಭಾರತದ ಪ್ರತಿಷ್ಠಿತ ಮ್ಯಾರಥಾನ್ ಕೂಟದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುವುದು ನನಗೆ ಒಂದು ವೈಯಕ್ತಿಕ ಗೌರವಾಗಿದೆ. ಸಮುದಾಯದೊಂದಿಗೆ ಒಟ್ಟುಗೂಡಿ ಅವರೊಂದಿಗೆ ಓಡಿದಾಗ ಅವರಲ್ಲಿ ನಾನು ಒಬ್ಬನಾಗಿದ್ದೇನೆ ಎಂಬ ಭಾವನೆ ಮೂಡುತ್ತದೆ.

Mike Powell named Event Ambassador for World 10K

ಸಾಮಾನ್ಯ ಓಟಗಾರ ಅಥವಾ ಅತ್ಯುತ್ತಮ ಓಟಗಾರ ಎನ್ನದೆ 5 ಕಿಲೋ ಮೀ.ಆಗಲಿ, 10 ಕಿಲೋ ಮಿ. ಆಗಲಿ ಅಥವಾ ಮ್ಯಾರಥಾನ್ ಆಗಲಿ ಓಡುವ ಸಾಮಥ್ರ್ಯ ಬೆಳೆಸಿಕೊಂಡು ದೂರದ ಓಟದತ್ತ ಗಮನಹರಿಸಬೇಕು, ಅತ್ಯಂತ ಕಠಿಣವಾದದನ್ನು ಸಾಧಿಸಿಲು ನಿರ್ಣಯಿಸಿದಾಗ ಅದೊಂದು ಅದ್ಭುತ ಎನಿಸುತ್ತದೆ. ಟಿಸಿಎಸ್ 10ಕೆ ಓಟದ ಕ್ರಾಂತಿಗೆ ಸಾಕ್ಷಿಯಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಹಾಗೂ ಎಲ್ಲಾ ಸ್ಪರ್ಧಿಗಳಿಗೂ ಶುಭಾಶಯ ಹೇಳಲು ಬಯಸುತ್ತೇನೆ' ಎಂದಿದ್ದಾರೆ.

ಒಟ್ಟು 23 ಸಾವಿರದ 748 ಸ್ಪರ್ಧಿಗಳು ವಿಶ್ವ ಹಾಫ್ ಮ್ಯಾರಥಾನ್ ಚಾಂಪಿಯನ್ ಪೆರೆಸ್ ಜೆಪ್ಚಿರ್ಚಿರ್, ಬರ್ಲಿನ್ ನಲ್ಲಿ ನಡೆದ 10ಕೆ ಓಟದಲ್ಲಿ 30 ನಿಮಿಷ, 41 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಅತಿ ವೇಗದ ಮಹಿಳಾ ಓಟಗಾರ್ತಿ ಎನಿಸಿರುವ ಗ್ಲಾಡಿಸ್ ಚೇಸಿರ್, ಟಿಸಿಎಸ್ ವಿಶ್ವ 10ಕೆ ಓಟದ ಹಾಲಿ ಚಾಂಪಿಯನ್ ಮೊಸಿನೆಟ್ ಜೆರೆಮೆವ್ ಮತ್ತು ಮ್ಯಾರಥಾನ್ ನ ಮಾಜಿ ವಿಶ್ವ ದಾಖಲೆ ಒಡೆಯ ಪ್ಯಾಟ್ರಿಕ್ ಮಕಾವು ಅವರೊಂದಿಗೆ ಕೇಂದ್ರ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

197, 768 ಅಮೆರಿಕನ್ ಡಾಲರ್ ಮೊತ್ತದ ಈ ಕೂಟದಲ್ಲಿ 12 ಸಾವಿರದ 215 ಸ್ಪರ್ಧಿಗಳು 10 ಕೆ ವಿಭಾಗದಲ್ಲಿ, 10, 425 ಸ್ಪರ್ಧಿಗಳು ಮಜ್ಜ ರನ್ ವಿಭಾಗದಲ್ಲಿ, 746 ಸ್ಪರ್ಧಿಗಳು ಸೀನಿಯರ್ ಸಿಟಿಜನ್ ವಿಭಾಗದಲ್ಲಿ ಮತ್ತು ಚಾಂಪಿಯನ್ಸ್ ಮತ್ತು ವಿಶೇಷ ಚೇತನರ ವಿಭಾಗದಲ್ಲಿ 252 ಸ್ಪರ್ಧಿಗಳು ತಮ್ಮ ದೈಹಿಕ ಸಕ್ಷಮತೆವೊಡ್ಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Olympian and World champion Long Jumper Mike Powell as the 'International Event Ambassador' for the 9th edition of the TCS World 10K Run to be held on May 15, announced organisers Procam International.
Please Wait while comments are loading...